ಕೋಟಿ ರೂ. ಮಂಜೂರಾದರೂ ನನಸಾಗದ ಯೋಜನೆ

ಫುಟ್‌ಬಾಲ್‌ ಕ್ರೀಡಾಂಗಣಕ್ಕೆ ಟರ್ಫ್‌ ಅಳವಡಿಕೆ

Team Udayavani, Sep 19, 2019, 5:00 AM IST

q-18

ನೆಹರೂ ಮೈದಾನದ ಫ‌ುಟ್‌ಬಾಲ್‌ ಕ್ರೀಡಾಂಗಣ.

ಮಹಾನಗರ: ಮೂರು ವರ್ಷಗಳ ಹಿಂದೆ ನಗರದ ನೆಹರೂ ಮೈದಾನಿನ ಫುಟ್‌ಬಾಲ್‌ ಕ್ರೀಡಾಂಗಣಕ್ಕೆ ಟರ್ಫ್‌ ಅಳವಡಿಸುವ ಪ್ರಸ್ತಾವನೆ ಈಗ ಹಳ್ಳ ಹಿಡಿದಿದ್ದು, ಮಂಗಳೂರಿನಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ ಪಂದ್ಯಾಟ ನಡೆಸುವ ಕ್ರೀಡಾಭಿ ಮಾನಿಗಳು ಹಾಗೂ ಕ್ರೀಡಾಪಟುಗಳ ಕನಸಿಗೆ ನಿರಾಸೆ ಮೂಡಿಸಿದೆ.

ನಗರದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ ಪಂದ್ಯಾಟವನ್ನು ಆಯೋಜಿಸುವ ಉದ್ದೇಶವನ್ನಿಟ್ಟು, ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಸಲುವಾಗಿ ಈ ಹಿಂದೆ ದ.ಕ. ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದ್ದರು. ಅಂದಿನ ಕ್ರೀಡಾ ಸಚಿವರಾಗಿದ್ದ ಅಭಯಚಂದ್ರ ಜೈನ್‌ ಅವರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕ್ರೀಡಾಂಗಣ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ನೆಹರೂ ಮೈದಾನಿನಲ್ಲಿ ಫುಟ್‌ಬಾಲ್‌ ಕ್ರೀಡಾಂಗಣದ ಹುಲ್ಲು ಹಾಸಿಗೆ ರಾಜ್ಯ ಸರಕಾರವು ಒಂದು ಕೋಟಿ ರೂ. ಅನುದಾನವನ್ನು ಈಗಾಗಲೇ ಮಂಜೂರು ಮಾಡಿದ್ದು, ಇದರಲ್ಲಿ 25 ಲಕ್ಷ ರೂ. ಬಿಡುಗಡೆಯಾಗಿ ದೆ. ಮಂಗಳಾ ಕ್ರೀಡಾಂಗಣ ಸಮಿತಿಯಿಂದ 8 ಲಕ್ಷ ರೂ. ಸೇರಿ ಒಟ್ಟಾರೆ 33 ಲಕ್ಷ ರೂ. ಹಣವನ್ನು ಕ್ರೀಡಾ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ಈಗಾಗಲೇ ನೀಡಿದೆ.

ಸರಕಾರದಿಂದ ಅನುಮತಿ ಸಿಕ್ಕಿಲ್ಲ
ಫುಟ್‌ಬಾಲ್‌ ಕ್ರೀಡಾಂಗಣಕ್ಕೆ ಹುಲ್ಲು ಹಾಸಿನ ಕಾಮಗಾರಿಗೆಂದು ಲೋಕೋ ಪಯೋಗಿ ಇಲಾಖೆಯು ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆಂದು ಈ ಹಿಂದೆಯೇ ಎರಡು ಬಾರಿ ಟೆಂಡರ್‌ ಕರೆಯಲಾಗಿತ್ತು. ಆದರೆ, ಯಾವುದೇ ಗುತ್ತಿಗೆದಾರರು ಟೆಂಡರ್‌ಗೆ ಅರ್ಜಿ ಹಾಕಿರಲಿಲ್ಲ. ಕಳೆದ ವರ್ಷ ಕರೆದ ಮೂರನೇ ಟೆಂಡರ್‌ನಲ್ಲಿ ಗುತ್ತಿಗೆದಾರರೊಬ್ಬರು ಹೆಚ್ಚುವರಿ 13 ಲಕ್ಷ ರೂ. (ಶೇ. 19ರಷ್ಟು ಹೆಚ್ಚಳ) ನಮೂದಿಸಿ ಟೆಂಡರ್‌ ಸಲ್ಲಿಸಿದ್ದರು.

ಅನುಮತಿ ದೊರೆತರೆ ಕಾಮಗಾರಿ ಆರಂಭ
ನೆಹರೂ ಮೈದಾನಿನ ಫುಟ್‌ಬಾಲ್‌ ಕ್ರೀಡಾಂಗಣದ ಹುಲ್ಲುಹಾಸಿಗೆ ಸರಕಾರವು 25 ಲಕ್ಷ ರೂ. ಬಿಡುಗಡೆ ಮಾಡಿದೆ. ಎರಡು ಬಾರಿ ಟೆಂಡರ್‌ ವಹಿಸಲು ಯಾರೂ ಮುಂದೆ ಬರಲಿಲ್ಲ. ಮೂರನೇ ಬಾರಿ ಶೇ. 19ರಷ್ಟು ಹೆಚ್ಚುವರಿ ಹಣಕ್ಕೆ ಗುತ್ತಿಗೆದಾರರೊಬ್ಬರು ಟೆಂಡರ್‌ ವಹಿಸಿದ್ದು, ಈ ಮೊತ್ತಕ್ಕೆ ಅನುಮತಿ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭಗೊಳ್ಳುತ್ತದೆ.
– ಪ್ರದೀಪ್‌ ಡಿ’ಸೋಜಾ,, ಪ್ರಭಾರ ಉಪನಿರ್ದೇಶಕ, ಯುವ ಸಬಲೀಕರಣ,ಕ್ರೀಡಾ ಇಲಾಖೆ

ಯೋಜನೆಯಲ್ಲೇನಿದೆ?
ನೂತನ ಯೋಜನೆಯ ಪ್ರಕಾರ ಮೈದಾನಿನಲ್ಲಿ ಟರ್ಫ್‌ ಅಳವಡಿಸಲಾಗುತ್ತದೆ. ಇದರನ್ವಯ ಕ್ರೀಡಾಂಗಣವನ್ನು ಹುಲ್ಲು ಹಾಸಿನಲ್ಲಿ ಆಕರ್ಷಣೀಯ ಮಾಡಲಾಗುತ್ತದೆ. ರಾತ್ರಿ ವೇಳೆ ಪಂದ್ಯಗಳು ನಡೆಸಲು ಪೆಡ್‌ಲೈಟ್‌ ಹಾಕಲಾಗುತ್ತದೆ. ಇನ್ನು, ಮಳೆನೀರು ಸರಾಗವಾಗಿ ಹರಿ ಯಲು ಒಳಚರಂಡಿ ವ್ಯವಸ್ಥೆ ಕೂಡ ಈ ಯೋಜನೆಯಲ್ಲೇ ಬರಲಿದೆ.

ಬೆಂಗಳೂರಿಗೆ ತೆರಳಿ ಮನವಿ ಮಾಡುತ್ತೇವೆ
ಫುಟ್‌ಬಾಲ್‌ ಮೈದಾನಕ್ಕೆ ಹುಲ್ಲುಹಾಸು ಅಳವಡಿಸುವ ಯೋಜನೆಗೆ ಹಣ ಬಿಡುಗಡೆಯಾದರೂ, ಯಾವುದೇ ಕೆಲಸಗಳಿನ್ನೂ ಆರಂಭಗೊಳ್ಳಲಿಲ್ಲ. ಈ ಬಗ್ಗೆ ಸದ್ಯದಲ್ಲಿಯೇ ಬೆಂಗಳೂರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಮಾಡ ಲಿ ದ್ದೇವೆ.
 - ಡಿ.ಎಂ. ಅಸ್ಲಾಂ, ದ.ಕ. ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.