9.95 ಕೋ.ರೂ. ಅಭಿವೃದ್ಧಿ ಕಾಮಗಾರಿಗೆ ಕ್ರಿಯಾಯೋಜನೆ

ದಿನೇಶ್‌ ಮೆದು ಅಧ್ಯಕ್ಷತೆಯಲ್ಲಿ ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ

Team Udayavani, Sep 19, 2019, 5:00 AM IST

q-24

ದಿನೇಶ್‌ ಮೆದು ಅಧ್ಯಕ್ಷತೆಯಲ್ಲಿ ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ ನಡೆಯಿತು.

ಪುತ್ತೂರು: ಎಪಿಎಂಸಿ ವತಿಯಿಂದ 2019 – 20ನೇ ಸಾಲಿನಲ್ಲಿ ಪ್ರಾಂಗಣದಲ್ಲಿ 3.70 ಕೋಟಿ ರೂ. ಅನುದಾನದ 11 ಹೊಸ ಕಾಮಗಾರಿಗಳಿಗೆ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದೆ.

ಅಧ್ಯಕ್ಷ ದಿನೇಶ್‌ ಮೆದು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾರ್ಯದರ್ಶಿ ಪ್ರಭಾರ ರಾಮಚಂದ್ರ ವಿಷಯ ಮಂಡಿಸಿದರು. 60 ಲಕ್ಷ ರೂ. ಅನುದಾನದಲ್ಲಿ 60 ಸಿ ಯೋಜನೆಯಲ್ಲಿ 23 ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ, ಹಿಂದಿನ ಅವಧಿಯಲ್ಲಿನ 5,65,77,563 ರೂ. ಅನುದಾನದ 32 ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲಾಯಿತು.

11 ಹೊಸ ಕಾಮಗಾರಿಗಳು
ಎಪಿಎಂಸಿಯ ಉದ್ದೇಶಿತ ಮಾರುಕಟ್ಟೆ ಪ್ರಾಂಗಣದಲ್ಲಿ 2019-20ನೇ ಸಾಲಿನ ಹೊಸ ಕಾಮಗಾರಿಗಳಾಗಿ 23 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರೀಟ್‌ ತಡೆಗೋಡೆ, 50 ಲಕ್ಷ ರೂ. ವೆಚ್ಚದಲ್ಲಿ 2 ಗೋದಾಮು ನಿರ್ಮಾಣ, 6 ಲಕ್ಷ ರೂ. ವೆಚ್ಚದಲ್ಲಿ 400 ಎಂ.ಟಿ. ಗೋದಾಮು, 10 ಲಕ್ಷ ರೂ. ವೆಚ್ಚದಲ್ಲಿ ರೈತ ಸಭಾ ಭವನದ ಬಳಿ ಶೆಡ್‌, ರೈತ ಸಭಾಭವನದ ಬಳಿ ಇಂಟರ್‌ಲಾಕ್‌, 1.50 ಕೋಟಿ ರೂ. ವೆಚ್ಚದಲ್ಲಿ ಪ್ರಾಂಗಣದಲ್ಲಿ ಕಾಂಕ್ರೀಟ್‌ ರಸ್ತೆ, ಚರಂಡಿ ಹಾಗೂ ಇಂಟರ್‌ಲಾಕ್‌, 23 ಲಕ್ಷ ರೂ. ವೆಚ್ಚದಲ್ಲಿ ಬ್ಯಾಂಕ್‌ ಕಟ್ಟಡ, ಅಂಚೆ ಕಚೇರಿ, ಹೊಸ ಕ್ಯಾಂಟೀನ್‌ ಕಟ್ಟಡ ಅಭಿವೃದ್ಧಿ, 50 ಲಕ್ಷ ರೂ. ವೆಚ್ಚದಲ್ಲಿ ಪ್ರಾಂಗಣದ ಆವರಣ ಗೋಡೆಗೆ ಬಣ್ಣ ಅಳವಡಿಕೆ, 8ಲಕ್ಷ ರೂ. ವೆಚ್ಚದಲ್ಲಿ ಆಡಳಿತ ಕಚೇರಿ ಮುಂಭಾಗ ಹೂತೋಟ, 15 ಲಕ್ಷ ರೂ. ವೆಚ್ಚದಲ್ಲಿ ಆಡಳಿತ ಕಚೇರಿ ಅಭಿವೃದ್ಧಿ, 10 ಲಕ್ಷ ರೂ. ವೆಚ್ಚದಲ್ಲಿ ಕಾರ್ಯದರ್ಶಿಯವರ ವಸತಿ ಗೃಹದ ಅಭಿವೃದ್ಧಿ ಹಾಗೂ 25 ಲಕ್ಷ ರೂ. ವೆಚ್ಚದಲ್ಲಿ ಸಂತೆ ಮಾರುಕಟ್ಟೆ ಸುತ್ತ ಇರುವ ಅಂಗಡಿ ಮಳಿಗೆ ಹಾಗೂ ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.

ಗ್ರಾಮೀಣ ಸಂಪರ್ಕ ರಸ್ತೆಗಳು
60 ಸಿ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಕೆದಂಬಾಡಿ ದರ್ಬೆ ತಿಂಗಳಾಡಿ ಅಂಗನತ್ತಡ್ಕ ಕನ್ನಡ ಮೂಲೆ ರಸ್ತೆ, ಕೊಳ್ತಿಗೆ ಉಬರಾಜೆ, ಪುಂಡ್ಯವನ ರಸ್ತೆ, ಬೆಳ್ಳಿಪ್ಪಾಡಿ ಕೊಡಪಟ್ಯ, ಜತ್ತಿಬೆಟ್ಟು ರಸ್ತೆಗೆ ತಲಾ 5 ಲಕ್ಷ ರೂ., ಬಲಾ°ಡು ಬೆಳಿಯೂರುಕಟ್ಟೆ, ಸಾರ್ಯಮಠ ರಸ್ತೆಗೆ 4 ಲಕ್ಷ ರೂ., ಕುದ್ಮಾರು ಪಾಲೂ¤ರು ನೂಜಿ ರಸ್ತೆ, ಸವಣೂರು ಕನ್ನಡಕುಮೇರು, ಪಾದೆಬಂಬಿಲ ರಸ್ತೆ ಹಾಗೂ ಬೆಳಂದೂರು ಪರಣೆ, ಅಮೈ ರಸ್ತೆಗೆ ತಲಾ 3 ಲಕ್ಷ ರೂ., ಪಾಣಾಜೆ ದೇವಸ್ಯ, ನಿರೋಲ್ಯ ರಸ್ತೆ, ಒಳಮೊಗ್ರು ಕುಂಬ್ರ ಬಡಕ್ಕೋಡಿ ರಸ್ತೆಗೆ ತಲಾ 2.50 ಲಕ್ಷ ರೂ., ಬಜತ್ತೂರು ಕಾಂಚನ ನಡ³ ರಸ್ತೆ, ಆಲಂತಾಯ ಶಿವಾರು ದುಗ್ಗುತೋಟ ರಸ್ತೆ, ಮುಂಡೂರು ಪಂಜಳ, ಪೆರಿಯಡ್ಕ, ಕುರೆಮಜಲು ರಸ್ತೆ, ಕೆದಂಬಾಡಿ ತಿಂಗಳಾಡಿ ಮಿತ್ರಂಪಾಡಿ ಮುಳಿಗದ್ದೆ ರಸ್ತೆ, ನೆಲ್ಯಾಡಿ ಪಡುಬೆಟ್ಟು, ಪಟ್ಟೆ ಬೀದಿ ರಸ್ತೆ, ಕೊಂಬಾರು ಗುಂಡ್ಯ, ದೇರಣೆ, ರೆಂಜಾಳ ರಸ್ತೆ, ಬಂಟ್ರ ಮರ್ದಾಳ, ಬೀಡು ರಸ್ತೆ, ನೂಜಿಬಾಳ್ತಿಲ ನೀರಾರಿ, ಬರೆಮೇಲು ರಸ್ತೆ, ಕುಟ್ರಾಪ್ಪಾಡಿ ಕೇಪು, ಬಲ್ಯ ರಸ್ತೆ, ಕುಂತೂರು ಎರ್ಮಾಳ ಪಲಸಗಿರಿ ಮೇರುಗುಡ್ಡೆ ಅಡೀಲು ರಸ್ತೆ, ಆಲಂಕಾರು ಕರಂದ್ಲಾಜೆ ಶರವೂರು ರಸ್ತೆ, ಕೊಯಿಲ ಒಳಕಡಮ, ಕೆಮ್ಮಟೆ ರಸ್ತೆ, ಬೆಟ್ಟಂಪಾಡಿ ಉಪ್ಪಳಿಗೆ, ಬಾರ್ತಕುಮೇರು ರಸ್ತೆಗೆ ತಲಾ 2 ಲಕ್ಷ ರೂ., ಮುಂಡೂರು ಅಂಬಟ, ಪೊನೊನಿ ರಸ್ತೆಗೆ 1 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.

ಮುಂದುವರಿದ ಕಾಮಗಾರಿ
2019-20ನೇ ಸಾಲಿಗೆ ಮುಂದುವರಿದ ಹಿಂದಿನ ಕಾಮಗಾರಿಗಳಾದ 33.47 ಲಕ್ಷ ರೂ. ಪ್ರಾಂಗಣದಲ್ಲಿ ಅಂಗಡಿ, ಗೋದಾಮು ದುರಸ್ತಿ, ಆವರಣ ಗೋಡೆ ನಿರ್ಮಾಣ, 4.54 ಲಕ್ಷ ರೂ. ವೆಚ್ಚದಲ್ಲಿ ಆಡಳಿತ ಕಚೇರಿಯ ವಿಸ್ತರಣ ಕಟ್ಟಡದ ನೆಲ ಅಂತಸ್ತಿನಲ್ಲಿ ಮಿನಿ ಹಾಲ್‌, ಕಡಬ ಉಪಮಾರುಕಟ್ಟೆಯಲ್ಲಿ ಅಂಗಡಿ ಮಳಿಗೆಗಳ ಎದುರು ಇಂಟರ್‌ಲಾಕ್‌, ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ತಡೆಗೋಡೆ, ಚರಂಡಿ, ಡೆಕ್‌ ಸ್ಲಾಬ್‌, 75.60 ಲಕ್ಷ ರೂ. ವೆಚ್ಚದಲ್ಲಿ 1000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಗೋದಾಮು, 48.50 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ಪ್ರಾಂಗಣದಲ್ಲಿ ಕಾಂಕ್ರೀಟ್‌ ರಸ್ತೆ ಹಾಗೂ ಚರಂಡಿ, 3.05 ಕೋಟಿ ರೂ. ವೆಚ್ಚದಲ್ಲಿ ಮುಖ್ಯ ಪ್ರಾಂಗಣದಲ್ಲಿ 5 ಹಾಗೂ ಕಡಬ ಉಪ ಮಾರುಕಟ್ಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, 60ಸಿ ಯೋಜನೆಯಲ್ಲಿ 13 ಗ್ರಾಮೀಣ ರಸ್ತೆಗಳ ಅಭಿವೃದ್ಧಿ, 28.50 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ಪ್ರಾಂಗಣದಲ್ಲಿ ಶೌಚಾಲಯ ದುರಸ್ತಿ, ಅವುಗಳ ಸುತ್ತ ಇಂಟರ್‌ಲಾಕ್‌, 11.80 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ಪ್ರಾಂಗಣದ ಸಂಡ್ರಿಶಾಪ್‌ ಕಟ್ಟಡದ ಮೊದಲ ಅಂತಸ್ತಿನಲ್ಲಿ ಅಂಗಡಿ ಮಳಿಗೆಗಳ ನಿರ್ಮಾಣ, 4.85ಲಕ್ಷ ರೂ. ವೆಚ್ಚದಲ್ಲಿ ಕೋಡಿಂಬಾಳ ಮಜ್ಜಾರು ರಸ್ತೆ ಅಭಿವೃದ್ಧಿ, 3 ಲಕ್ಷ ರೂ. ವೆಚ್ಚದಲ್ಲಿನೆಟ್ಟಣಿಗೆ ಮುಟ್ನೂರು ಸಾಂತ್ಯ, ಕೊಂಕಣಿಗುಂಡಿ ರಸ್ತೆ ಅಭಿವೃದ್ಧಿ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ವಿದ್ಯುತ್‌ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲಾಯಿತು.

ಉಪಾಧ್ಯಕ್ಷ ಮಂಜುನಾಥ ಎನ್‌.ಎಸ್‌., ಸದಸ್ಯರಾದ ಬೂಡಿಯಾರ್‌ ರಾಧಾಕೃಷ್ಣ ರೈ, ಪುಲಸ್ತಾ ರೈ, ತ್ರೀವೇಣಿ ಪೆರೊÌàಡಿ, ಕೊರಗಪ್ಪ ಗೌಡ, ಮೇದಪ್ಪ ಗೌಡ, ಕೊರಗಪ್ಪ, ಕೃಷ್ಣ ಕುಮಾರ್‌ ರೈ ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ವಂದಿಸಿದರು.

ಕೆಲವರಿಗೆ ಮಾತ್ರ ಏಕೆ ನಿರ್ಬಂಧ?
ಎಪಿಎಂಸಿ ಪ್ರಾಂಗಣದಲ್ಲಿರುವ ವರ್ತಕರು ಲೈಸನ್ಸ್‌ ಪಡೆದು ಕಾನೂನು ರೀತಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಹಾಗಿದ್ದರೂ ಇಲ್ಲಿರುವ ಅಂಗಡಿಗಳಿಗೆ ಮಾತ್ರ ಕಾನೂನು, ನಿರ್ಬಂಧಗಳನ್ನು ಹೇರಲಾಗುತ್ತಿದೆ. ಉಪಮಾರುಕಟ್ಟೆಯಲ್ಲಿ ಗೇಟ್‌, ಕಾವಲುಗಾರರೂ ಇಲ್ಲ. ಅಲ್ಲಿ ನಿರ್ಬಂಧವೂ ಇಲ್ಲ. ಜಿಲ್ಲೆಯಲ್ಲಿರುವ ಇತರ ಎಪಿಎಂಸಿಗಳಲ್ಲಿಯೂ ಗೇಟ್‌ ಪದ್ಧತಿಯಿಲ್ಲ. ಮಾರಾಟ ತೆರಿಗೆಯ ಅಧಿಕಾರಿಗಳೂ ಪ್ರಾಂಗಣದಲ್ಲಿರುವ ವರ್ತಕರನ್ನು ತನಿಖೆ ನಡೆಸುತ್ತಿದ್ದಾರೆ. ಅಡಿಕೆ ತರುವ ರೈತರು ಪ್ರಾಂಗಣದ ಒಳಗೆ ಬರುವಾಗ ಹಾಗೂ ಹೋಗುವಾಗ ವಾಹನಗಳನ್ನು ತನಿಖೆ ನಡೆಸಲಾಗುತ್ತಿದೆ. ರೈತರಿಗೂ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಂಗಣದಲ್ಲಿ ಕಾನೂನುಬದ್ಧವಾಗಿ ವ್ಯವಹರಿಸುತ್ತಿರುವ ವರ್ತಕರಿಗೆ ರಿಯಾಯಿತಿ ನೀಡಬೇಕು ಎಂದು ವರ್ತಕ ಪ್ರತಿನಿಧಿ ಅಬ್ದುಲ್‌ ಶಕೂರ್‌ ಆಗ್ರಹಿಸಿದರು. ಅಧ್ಯಕ್ಷ ದಿನೇಶ್‌ ಮೆದು ಮಾತನಾಡಿ, ಈ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ಆಡಳಿತ ಮಂಡಳಿಯುವರು ಭದ್ರತೆಯ ದೃಷ್ಟಿಯಿಂದ ಗೇಟ್‌ ಎಂಟ್ರಿ ಪದ್ಧತಿಯನ್ನು ಜಾರಿಗೊಳಿಸಿದ್ದಾರೆ. ರೈತರು ಪ್ರಾಂಗಣದ ಒಳಗೆ ಬರುವ ಸಂದರ್ಭದಲ್ಲಿ ಗೇಟ್‌ನಲ್ಲಿ ತನಿಖೆ ನಡೆಸುವುದಿಲ್ಲ. ಹೊರಹೋಗುವ ಸಂದರ್ಭದಲ್ಲಿ ಸೆಸ್‌ ಪಾವತಿಸಿದ ಬಿಲ್‌ ಕಡ್ಡಾಯವಾಗಿ ಗೇಟ್‌ನಲ್ಲಿ ಸಲ್ಲಿಸಬೇಕು ಎಂದರು.

3 ಕೋಟಿ ರೂ.ಗೆ ಮನವಿ
ರೈಲ್ವೇ ಅಂಡರ್‌ ಪಾಸ್‌ ನಿರ್ಮಾಣದ ಯೋಜನೆ ಅಂತಿಮ ಹಂತಕ್ಕೆ ಬಂದಿದೆ. ಕಾಮಗಾರಿಗೆ ಅಂದಾಜು ಪಟ್ಟಿ ಸಿದ್ಧವಾಗಿದೆ. ಒಟ್ಟು ಮೊತ್ತದ ಅರ್ಧಭಾಗ ರೈಲ್ವೇ ಇಲಾಖೆ ಭರಿಸಿದರೆ ಉಳಿದ ಅರ್ಧಭಾಗವನ್ನು ಎಪಿಎಂಸಿ, ನಗರ ಸಭೆ, ಶಾಸಕರು ಹಾಗೂ ಸಂಸದರ ಮುಖಾಂತರ ಭರಿಸಬೇಕಿದೆ. ಇದಕ್ಕಾಗಿ ಮೂಲಸೌಕರ್ಯ ನಿಧಿಯಿಂದ 5 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಎಪಿಎಂಸಿಯಿಂದ 3 ಕೋಟಿ ರೂ. ನೀಡಲು ಆಡಳಿತ ಮಂಡಳಿಗೆ ಮನವಿ ಮಾಡಲಾಗುವುದು ಎಂದು ದಿನೇಶ್‌ ಮೆದು ಹೇಳಿದರು.

ತಹಶೀಲ್ದಾರ್‌ಗೆ ಮನವಿ
ಕಡಬ ತಾಲೂಕಿನಲ್ಲಿ ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡುವಂತೆ ಸದಸ್ಯ ಬಾಲಕೃಷ್ಣ ಬಾಣಜಾಲು ಒತ್ತಾಯಿಸಿದರು. ಕಡಬದಲ್ಲಿ ಎಪಿಎಂಸಿಗೆ 35 ಸೆಂಟ್ಸ್‌ ಜಾಗವಿದ್ದು, ಅದರಲ್ಲಿ ಮಾರುಕಟ್ಟೆ, ಮೇಲಂತಸ್ತಿನಲ್ಲಿ ಕಚೇರಿ ಕಾಮಗಾರಿ ನಡೆಯುತ್ತಿದೆ. ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣಕ್ಕೆ 10 ಎಕ್ರೆ ಜಾಗ ಗುರುತಿಸಿಕೊಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡುವುದಾಗಿ ಅಧ್ಯಕ್ಷ ದಿನೇಶ್‌ ಮೆದು ಹೇಳಿದರು. ಸದಸ್ಯ ತೀರ್ಥಾನಂದ ದುಗ್ಗಳ ಮಾತನಾಡಿ, ಗ್ರಾಮೀಣ ರಸ್ತೆ ಅಭಿವೃದ್ಧಿಯ ಅನುದಾನದಲ್ಲಿ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಟೆಂಡರ್‌ ನಡೆದು ಹಲವು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಪ್ರಾರಂಭಿಸಿಲ್ಲ. ಆ ಭಾಗದ ಜನ ನಮ್ಮಲ್ಲಿ ಪ್ರಶ್ನಿಸುತ್ತಾರೆ. ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

60 ಲಕ್ಷ ರೂ. ಅನುದಾನದಲ್ಲಿ 60 ಸಿ ಯೋಜನೆಯಲ್ಲಿ 23 ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ
ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರೀಟ್‌ ತಡೆಗೋಡೆ, ಗೋದಾಮು ಸೇರಿ 11 ಕಾಮಗಾರಿ
ಕಾನೂನುಬದ್ಧವಾಗಿ ವ್ಯವಹಾರ ನಡೆಸುತ್ತಿರುವ ವರ್ತಕರಿಗೆ ರಿಯಾಯಿತಿ ನೀಡಲು ಮನವಿ

ಟಾಪ್ ನ್ಯೂಸ್

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.