ಡಿ ವರ್ಗದ 225 ನೌಕರರು ಅತಂತ್ರ

ನೇರ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆ ಮಾನದಂಡ

Team Udayavani, Sep 19, 2019, 5:00 AM IST

q-37

ಸಾಂದರ್ಭಿಕ ಚಿತ್ರ

ಉಡುಪಿ: ಸರಕಾರದ ನೇರ ನೇಮಕಾತಿಯಲ್ಲಿ ಕನಿಷ್ಠ ವಿದ್ಯಾರ್ಹತೆ ಇಲ್ಲದೆ ಹಿಂದುಳಿದ ವರ್ಗಗಳ ಇಲಾಖೆ ವಿದ್ಯಾರ್ಥಿ ವಸತಿ ನಿಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 225 “ಡಿ’ ವರ್ಗದ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ.

ಈ ನೌಕರರು ಒಂದು ದಶಕದಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ಇಲಾಖೆಯು ಆ. 1ರ ಬಳಿಕ ಸೇವೆಗೆ ಹಾಜರಾಗದಂತೆ ತಿಳಿಸಿದ್ದು, ಹೊರ ಗುತ್ತಿಗೆ ನೌಕರರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.

ಉಭಯ ಜಿಲ್ಲೆಗಳಲ್ಲಿ 114 ವಸತಿ ನಿಲಯ
ಹಿಂದುಳಿದ ವರ್ಗದ ಇಲಾಖೆಯಡಿ ಉಡುಪಿಯಲ್ಲಿ 41 ಮತ್ತು ದ.ಕ.ದಲ್ಲಿ 73 ಸೇರಿದಂತೆ ಒಟ್ಟು 114 ವಸತಿ ನಿಲಯಗಳಿವೆ. ಅವುಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಕೆಲಸ, ಅಡುಗೆ ಸಿಬಂದಿ ಸೇರಿದಂತೆ ಉಡುಪಿಯಲ್ಲಿ 89 ಮತ್ತು ದ.ಕ.ದಲ್ಲಿ 136 ಹೊರ ಗುತ್ತಿಗೆ ನೌಕರರಿದ್ದಾರೆ.

ನೇರ ನೇಮಕಾತಿ
ಕಳೆದ ವರ್ಷ ಸರಕಾರ “ಡಿ’ ವರ್ಗದ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ 10ನೇ ತರಗತಿ ಪಾಸಾದ ಅಭ್ಯರ್ಥಿಗಳನ್ನು ನೇಮಿಸಿದೆ. ಈ ಕನಿಷ್ಠ ವಿದ್ಯಾರ್ಹತೆಯಿಲ್ಲದ ಕಾರಣ ಹೊರ ಗುತ್ತಿಗೆ ನೌಕರರು ನೇರ ನೇಮಕಾತಿ ಯಲ್ಲಿ ಭಾಗವಹಿಸಲು ಆಗಿರಲಿಲ್ಲ.

ಪ್ರತಿಭಟನೆ ನಡೆದಿತ್ತು
ಸರಕಾರದ ನೇಮಕಾತಿ ನೀತಿ ವಿರೋಧಿಸಿ ಕಳೆದ ವರ್ಷ ಈ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಅದರ ಫ‌ಲವಾಗಿ ಒಂದು ವರ್ಷ ಕೆಲಸ ಮಾಡಲು ಅವರಿಗೆ ಅವಕಾಶ ನೀಡಲಾಗಿತ್ತು. ಈಗ ಇಲಾಖೆಯು ಗುತ್ತಿಗೆ ನೌಕರರು ಕೆಲಸ ನಿರ್ವಹಿಸದಂತೆ ಆದೇಶ ನೀಡಿದೆ.

ಜುಲೈ ತಿಂಗಳ ವೇತನ ಸಿಕ್ಕಿಲ್ಲ
ಈ ನೌಕರರಿಗೆ ಜೂನ್‌ ವರೆಗಿನ ವೇತನ ಪಾವತಿಯಾಗಿದೆ. ಉಡುಪಿಯ ಬಿಸಿಎಂ ಹಾಸ್ಟೆಲ್‌ಗ‌ಳಲ್ಲಿ ನೌಕರರು ಸರಕಾರವು ತಮ್ಮ ಸೇವೆಯನ್ನು ಮುಂದುವರಿಸಬಹುದು ಎನ್ನುವ ನಂಬಿಕೆಯಲ್ಲಿ ಜುಲೈ ಪೂರ್ತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು, ಅವರ ವೇತನ ಇನ್ನೂ ಪಾವತಿಯಾಗಿಲ್ಲ.

ಹೊರಗುತ್ತಿಗೆ ಡಿ ಗ್ರೂಪ್‌ ನೌಕರರನ್ನು ಹುದ್ದೆಯಿಂದ ಮುಕ್ತಗೊಳಿಸಿ, ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿರುವವರಿಗೆ ಅವಕಾಶ ನೀಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಹಿಂದುಳಿದ ವರ್ಗ ಇಲಾಖೆ ಆಯುಕ್ತರ ಹಾಗೂ ಕಾರ್ಯದರ್ಶಿಗಳಿಗೆ ಜತೆ ಮಾತುಕತೆ ನಡೆಸಲಾಗುತ್ತದೆ. ಮುಖ್ಯಮಂತ್ರಿಗಳ ಗಮಕ್ಕೆ ತರಲಾಗುತ್ತದೆ.
– ಕೋಟ ಶ್ರೀನಿವಾಸ ಪೂಜಾರಿ, ಸಚಿವರು

ದ.ಕ. ಜಿಲ್ಲೆಯಲ್ಲಿ ನೇರ ನೇಮಕಾತಿಯ ಮೂಲಕ 136 ಸಿಬಂದಿಗಳು ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ. ಹೊರಗುತ್ತಿಗೆ ನೌಕರರ ಕೆಲಸ ಮುಂದುವರಿಸಲು ಮೂರನೇ ಬಾರಿ ಮನವಿ ಸಲ್ಲಿಸಲಾಗಿತ್ತು.
-ಸಚಿನ್‌ ಕುಮಾರ್‌, ಹಿಂದುಳಿದ ವರ್ಗಗಳ ಇಲಾಖಾಧಿಕಾರಿ, ದ.ಕ. ಜಿಲ್ಲೆ

ಅವಕಾಶ ನೀಡಿ
ಕೆಲಸಕ್ಕೆ ಹಾಜರಾಗದಂತೆ ಹೊರಗುತ್ತಿಗೆ ನೌಕರರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕಡಿಮೆ ಸಂಬಳಕ್ಕೆ 9 ವರ್ಷ ಸೇವೆ ಸಲ್ಲಿಸಿದ್ದನ್ನು ಪರಿಗಣಿಸದೆ ಕೆಲಸದಿಂದ ವಜಾ ಮಾಡಲು ಆದೇಶ ನೀಡಿರುವುದು ಸರಿಯಲ್ಲ.
-ಗಜಾನನ, ಹಿಂದುಳಿದ ವರ್ಗದ , ಹಾಸ್ಟೆಲ್‌ ಹೊರಗುತ್ತಿಗೆ ನೌಕರ

– ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

fraud-2

ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್‌ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

2

Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ

balli

Padubidri: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.