ಡಾ| ಸಿಂಗ್ ಪಾಕ್ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸಲಿದ್ದರು: ಕೆಮರೂನ್
Team Udayavani, Sep 19, 2019, 9:30 PM IST
ಹೊಸದಿಲ್ಲಿ: ಇಂಗ್ಲೆಂಡ್‌ನ ಮಾಜಿ ಪ್ರಧಾನಿ ಡೆವಿಡ್ ಕೆಮರೂನ್ ಅವರ “ಫಾರ್ ದ ರೆಕಾರ್ಡ್’ ಎಂಬ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. 2010ರಿಂದ 2016ರ ವರೆಗೆ ಇಂಗ್ಲೆಂಡ್‌ನ ಪ್ರಧಾನಿಯಾಗಿದ್ದ ಅವಧಿಯಲ್ಲಿನ ಅನುಭವಗಳಿಗೆ ಕೆಮರೂನ್ ಅವರು ಅಕ್ಷರ ರೂಪ ನೀಡಿದ್ದಾರೆ. ವಿಶೇಷ ಎಂದರೆ ಭಾರತದ ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಮತ್ತು ಈಗಿನ ಪ್ರಧಾನಿ ಮೋದಿ ಅವರ ಜತೆ ಉತ್ತರ ಬಾಂಧವ್ಯ ಹೊಂದಿದ್ದರು.
ತಮ್ಮ “ಫಾರ್ ದ ರೆಕಾರ್ಡ್’ ಪುಸ್ತಕದಲ್ಲಿ ಡಾ| ಮನ್‌ಮೋಹನ್ ಸಿಂಗ್ ಮತ್ತು ತಮ್ಮ ಬಗೆಗಿನ ಬಹಳಷ್ಟು ಅನುಭವಗಳನ್ನು ಹೇಳಿಕೊಂಡಿದ್ದಾರೆ. ಇಲ್ಲಿ ಡಾ| ಸಿಂಗ್ ಅವರನ್ನು “ಸೈಂಟ್ಲಿಮ್ಯಾನ್’ ಎಂದು ಕರೆದಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಬಾರಿ ವೇದಿಕೆಗಳನ್ನು ಜತೆಯಾಗಿ ಹಂಚಿಕೊಂಡಿದ್ದೇವೆ. ನಮ್ಮ ಮಾತುಕತೆಗಳಲ್ಲಿ ನಾವು ವಸಹಾತುಶಾಹಿ ಧೋರಣೆಯನ್ನು ಬಿಟ್ಟು ಅಭಿವೃದ್ಧಿಯ ಪಾಲುದಾರರಾಗಬೇಕು ಎಂಬ ನಿಲುವನ್ನು ತಾಳಿದ್ದೆವು ಎಂದಿದ್ದಾರೆ.
ಪುಸ್ತಕದಲ್ಲಿ ಕೆಮರೂನ್ ಅವರು ಭಾರತ-ಪಾಕ್ ಕುರಿತಾಗಿಯೂ ಬರೆದುಕೊಂಡಿದ್ದಾರೆ. 26/11ದಾಳಿ ನಡೆದ ದಾಳಿ ಬಳಿಕ ಪಾಕ್ ತನ್ನ ನಡೆಯನ್ನು ಸಮರ್ಥಿಸಿಕೊಂಡು ಮತ್ತೆ ಹಿಂಸೆಗೆ ಪ್ರಯತ್ನಿಸಿದ್ದರೆ ಅದರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಗ್ಗೆ ಡಾ| ಸಿಂಗ್ ಉತ್ಸುಕರಾಗಿದ್ದರು. ಈ ಕುರಿತಾಗಿ ಅವರು ನನ್ನೊಂದಿಗೆ ಚರ್ಚಿಸಿದ್ದರು ಎಂದು ಕೆಮರೂನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.