“ಹಳ್ಳಿಹೊಳೆ ಪಂ. ಕುಂದಾಪುರ ತಾಲೂಕಿನಲ್ಲಿಯೇ ಉಳಿಸಿ’
ಹಳ್ಳಿಹೊಳೆ ವಿಶೇಷ ಗ್ರಾಮಸಭೆ
Team Udayavani, Sep 20, 2019, 5:16 AM IST
ಸಿದ್ದಾಪುರ: ಹಳ್ಳಿಹೊಳೆ ಹಾಗೂ ಕಮಲಶಿಲೆ ಗ್ರಾಮಸ್ಥರ ಆಗ್ರಹದ ಮೇರೆಗೆ ಹಳ್ಳಿಹೊಳೆ ಗ್ರಾ. ಪಂ. ವತಿಯಿಂದ ಶೆಟ್ಟಿಪಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಹಳ್ಳಿಹೊಳೆ ಪಂಚಾಯತ್‌ನ್ನು ಬೈಂದೂರು ತಾಲೂಕಿನಿಂದ ಕೈ ಬಿಡುವಂತೆ ಮತ್ತು ಕಮಲಶಿಲೆ ಗ್ರಾಮವನ್ನು ಹಳ್ಳಿಹೊಳೆ ಪಂಚಾಯತ್‌ನಲ್ಲಿ ಉಳಿಸುವಂತೆ ಆಗ್ರಹಿಸಿದ ಘಟನೆ ನಡೆಯಿತು.
ಹಳ್ಳಿಹೊಳೆ ಗ್ರಾ. ಪಂ. ಮಾಜಿ ಅಧ್ಯಕ್ಷ ರಾಮ ನಾಯ್ಕ, ನಾಗಪ್ಪ ಪೂಜಾರಿ, ರಾಜು ಪೂಜಾರಿ, ಶಂಕರನಾರಾಯಣ ಚಾತ್ರ, ಸ್ಥಳೀಯ ಮುಖಂಡರಾದ ಚಕ್ರೇಶ್ ಯಡಿಯಾಳ ಅವರು ಗ್ರಾಮ ಪಂಚಾಯತ್ ವಿಂಗಡನೆ ಮತ್ತು ಬೈಂದೂರು ತಾಲೂಕಿಗೆ ಸೇರ್ಪಡೆಯಿಂದಾಗುವ ತೊಂದರೆಯ ಬಗ್ಗೆ ಸಭೆಯ ಗಮನಕ್ಕೆ ತಂದರು.
ಹಳ್ಳಿಹೊಳೆ ಭಾಗದ ಜನರು ಸರಕಾರಿ ಕಚೇರಿ ಕೆಲಸ ಕಾರ್ಯಗಳಿಗೆ ತಾಲೂಕು ಕೇಂದ್ರವಾದ ಬೈಂದೂರಿಗೆ ಹೋಗಬೇಕಾದರೆ, ಕುಂದಾಪುರ ಮೂಲಕ 70 ಕಿ.ಮೀ. ಸುತ್ತುವರಿದು ಹೋಗಬೇಕಾಗುತ್ತದೆ. ಜತೆಯಲ್ಲಿ ಅವಳಿ ಗ್ರಾಮಗಳಾಗಿದ್ದ ಹಳ್ಳಿಹೊಳೆ ಹಾಗೂ ಕಮಲಶಿಲೆ ಗ್ರಾಮವನ್ನು ಪಂಚಾಯತ್‌ನಿಂದ ಬೇರೆ ಬೇರೆಯಾಗಿ ಬೇರ್ಪಡಿಸಿದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮದ ಜನತೆ ಸರಕಾರಿ ಸೌಲಭ್ಯ ಸೇರಿದಂತೆ ಕೆಲಸ ಕಾರ್ಯಗಳ ಕೆಲಸಕ್ಕೆ ಸಮಸ್ಯೆಯಾಗುತ್ತದೆ.
ಇತಂಹ ಅವೈಜ್ಞಾಜಿಕ ವಿಂಗಡೆಣೆಯಿಂದ ಗ್ರಾಮಸ್ಥರುನ್ನು ಬಲಿ ನೀಡಬೇಡಿ. ಸರಕಾರ ಹಾಗೂ ಇಲಾಖೆಗಳು ಮತ್ತು ಸ್ಥಳೀಯಾಡಳಿತ ಕೂಡಲೇ ಇತಂಹ ನೀರ್ಣಯಗಳನ್ನು ಕೈ ಬಿಡಬೇಕು.
ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸುವ ಮೂಲಕ ಆಗ್ರಹಿಸಿದರು.
ಗ್ರಾಮಸ್ಥರ ಅಹವಾಲುಗಳಿಗೆ ಜಿ. ಪಂ. ಸದಸ್ಯ ರೊಹಿತ್ ಕುಮಾರ ಶೆಟ್ಟಿ ಉತ್ತರಿಸಿ, ಈ ಗೊಂದಲ ಪರಿಹಾರಕ್ಕಾಗಿ ಕ್ಷೇತ್ರ ಶಾಸಕರ ಹಾಗೂ ಸಚಿವರ ಗಮನಕ್ಕೆ ತರಲಾಗುವುದು. ಆ ಮೂಲಕ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವ ಬಗ್ಗೆ ತಿಳಿಸಿದರು.
ಗ್ರಾ. ಪಂ. ಅಧ್ಯಕ್ಷೆ ಭಾಗೀರಥಿ ಅಧ್ಯಕ್ಷತೆ ವಹಿಸಿದರು.ಉಪಾಧ್ಯಕ್ಷೆ ವಿದ್ಯಾಶ್ರೀ, ಸದಸ್ಯರಾದ ದಿನೇಶ್ ಯಡಿಯಾಳ, ಶಿವರಾಮ ಪೂಜಾರಿ, ರಾಘವೇಂದ್ರ ನಾಯ್ಕ, ಮಾಧವ ಶೆಣೈ, ಶ್ರೀಕರ್ ನಾಯ್ಕ, ಅಭಿವೃದ್ಧಿ ಅಧಿಕಾರಿ ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.ಗ್ರಾಮಸ್ಥರು ಮುಂದಿನ ಹೋರಾಟದ ರೂಪು ರೇಷೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.
ಹೋರಾಟದ ಎಚ್ಚರಿಕೆ
ಹಳ್ಳಿಹೊಳೆ ಗ್ರಾಮ ಪಂಚಾಯತ್ ಕಮಲಶಿಲೆ ಹಾಗೂ ಹಳ್ಳಿಹೊಳೆ ಎರಡು ಗ್ರಾಮಗನ್ನೊಳಗೊಂಡಿದೆ. ಕುಂದಾಪುರ ತಾಲೂಕಿನಲ್ಲಿದ್ದ ಪಂಚಾಯತ್‌ನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳ್ಳಿಸುವ ಮೂಲಕ ನಕ್ಸಲ್ ಪೀಡಿತ ಗ್ರಾಮಸ್ಥರ ಮೇಲೆ ಸರಕಾರ ಬರೆ ಎಳೆದಿದೆ. ಹಳ್ಳಿಹೊಳೆ ಗ್ರಾಮವನ್ನು ಬೈಂದೂರು ತಾಲೂಕಿಗೆ ಹಾಗೂ ಕಮಲಶಿಲೆ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲೆ ಉಳಿಸಿ, ಪಂಚಾಯತ್ ಇಬ್ಭಾಗವಾಗಿಸಿದೆ. ಇದರ ಜತೆಯಲ್ಲಿ ಈಗ ಕಮಲಶಿಲೆ ಗ್ರಾಮವನ್ನು ಹಳ್ಳಿಹೊಳೆ ಪಂಚಾಯತ್‌ನಿಂದ ಬೇರ್ಪಡಿಸಿ, ಆಜ್ರಿ ಗ್ರಾ. ಪಂ.ಗೆ ಸೇರ್ಪಡೆಗೊಳಿಸುವ ಹುನ್ನಾರ ನಡೆಯುತ್ತಿದೆ. ಬೈಂದೂರು ತಾಲೂಕಿಗೆ ಸೇರ್ಪಡೆಗೊಂಡ ಹಳ್ಳಿಹೊಳೆ ಗ್ರಾಮವನ್ನು ಕೈ ಬಿಡಬೇಕು. ಜತೆಯಲ್ಲಿ ಕಮಲಶಿಲೆ ಗ್ರಾಮವನ್ನು ಹಳ್ಳಿಹೊಳೆ ಪಂಚಾಯತ್‌ನಲ್ಲಿಯೇ ಉಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದ ಘಟನೆಯು ಹಳ್ಳಿಹೊಳೆ ಗ್ರಾ. ಪಂ.ನ ವಿಶೇಷ ಗ್ರಾಮಸಭೆಯಲ್ಲಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.