ಹೋಮ್‌ವರ್ಕ್‌ ಭಾರಕ್ಕೆ ಬಳಲುತ್ತಿವೆ ಮಕ್ಕಳು


Team Udayavani, Sep 20, 2019, 5:36 AM IST

home-work

ಬಹಳಷ್ಟು ಸಲ ತಂದೆ ತಾಯಿ ಹೋಂವರ್ಕ್‌ ಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಟ್ಟುಬಿಡುತ್ತಾರೆ. ಮಗು ಶಾಲೆಯಿಂದ ಬಂದ ಕೂಡಲೇ ಕೈ ಕಾಲು ತೊಳೆದು ಹೊಟ್ಟೆಗೊಂದಿಷ್ಟು ಹಾಕಿಕೊಂಡು ಹೋಂವರ್ಕ್‌ ಶುರು ಮಾಡಿ, ಆದಷ್ಟು ಬೇಗ ಅದನ್ನು ಮುಗಿಸಿಬಿಡಬೇಕು ಎನ್ನುವುದು ಅವರ ಅಭಿಲಾಷೆ. ತಮ್ಮ ಮಗ ಅಥವಾ ಮಗಳು ಹಾಗೆ ಮಾಡಿದಾಕ್ಷಣ ಹೆತ್ತವರಿಗೆ ಅದೇನೋ ಸಾಧಿಸಿದ ಸಂತೋಷ.

ಇತ್ತೀಚೆಗೆ ಸ್ನೇಹಿತರೊಬ್ಬರು ಲೋಕಾಭಿರಾಮವಾಗಿ ಮಾತನಾಡುತ್ತಾ ತಾನು ಅನುಭವಿಸುತ್ತಿರುವ ಒಂದು ವೇದನೆಯನ್ನು ಹಂಚಿಕೊಂಡರು. ನನ್ನ ಮಗ ಶಾಲೆಯಿಂದ ಮನೆಗೆ ಬಂದ ಮೇಲೆ ನಮ್ಮ ಮಾತೇ ಕೇಳಲ್ಲ ಅಂತಾನೆ. ಎಷ್ಟು ಹೇಳಿದರೂ ಕೇಳ್ಳೋದಿಲ್ಲ, ಶಾಲೆಯಲ್ಲಿ ಹೋಮ್‌ವರ್ಕ್‌ ಕೊಟ್ಟರೂ ಅವನ ಬಳಿ ಅದನ್ನು ಮಾಡಿಸುವಷ್ಟರಲ್ಲಿ ಜೀವ ಬಾಯಿಗೆ ಬಂದಂತಿರುತ್ತದೆ ಮರಾಯೆÅ ಎಂದರು. ಹೌದು ಸರ್‌ ಈಗೆಲ್ಲಾ ಮಕ್ಕಳು ಸ್ವಲ್ಪ ಹಠ ಜಾಸ್ತಿ ಮಾಡ್ತಾರೆ ಎನ್ನುತ್ತಾ, ಅಂದ ಹಾಗೆ ನಿಮ್ಮ ಮಗ ಎಷ್ಟನೇ ಕ್ಲಾಸು ಎಂದು ಕೇಳಿದೆ. ಅವರು ಎಲ್‌ಕೆಜಿ ಅಂದರು. ಅಲ್ಲಿಗೆ ಅವರ ಸಮಸ್ಯೆಯ ಹಿಂದೆ ವಿಚಾರ ಮಾಡಲೇ ಬೇಕಾದ ಹಲವು ಸಂಗತಿಗಳಿವೆ ಎನ್ನಿಸಿತು.

ಮಕ್ಕಳಿಗೆ ಶಾಲೆಗಳಲ್ಲಿ ಹೋಂವರ್ಕ್‌ ಕೊಡುವುದು ಮಾಮೂಲಿ. ಅದನ್ನು ಮಕ್ಕಳು ಸರಿಯಾಗಿ ಮಾಡಬೇಕು ಎಂದು ಬಯಸುವುದು ತಪ್ಪೇನಲ್ಲ. ಆದರೆ ಬಹಳಷ್ಟು ಸಲ ತಂದೆ ತಾಯಿ ಹೋಂವರ್ಕ್‌ಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಟ್ಟುಬಿಡುತ್ತಾರೆ. ಮಗು ಶಾಲೆಯಿಂದ ಬಂದ ಕೂಡಲೇ ಕೈ ಕಾಲು ತೊಳೆದು ಹೊಟ್ಟೆಗೊಂದಿಷ್ಟು ಹಾಕಿಕೊಂಡು ಹೋಂವರ್ಕ್‌ ಶುರು ಮಾಡಿ ಆದಷ್ಟು ಬೇಗ ಅದನ್ನು ಮುಗಿಸಿಬಿಡಬೇಕು ಎನ್ನುವುದು ಅವರ ಅಭಿಲಾಷೆ. ತಮ್ಮ ಮಗ ಅಥವಾ ಮಗಳು ಹಾಗೆ ಮಾಡಿದಾಕ್ಷಣ ಹೆತ್ತವರಿಗೆ ಅದೇನೋ ಸಾಧಿಸಿದ ಸಂತೋಷ. ಅದೇ ಸಂತೋಷ ಸಿಗಬೇಕು ಎನ್ನುವ ಕಾರಣಕ್ಕೆ ಮಕ್ಕಳು ಶಾಲೆಯಿಂದ ಬಂದ ಕೂಡಲೇ ಹೋಂವರ್ಕ್‌ಗಾಗಿ ಅದರ ಪಕ್ಕ ಪಟ್ಟು ಹಿಡಿದು ಕುಳಿತುಬಿಡುತ್ತಾರೆ.

ತೀರಾ ಚಿಕ್ಕ ಮಕ್ಕಳ ವಿಚಾರದಲ್ಲಿ ಈ ತೆರನಾಗಿ ಪಟ್ಟು ಹಿಡಿದು ಕುಳಿತುಕೊಳ್ಳುವುದು ಸರಿಯಲ್ಲ. ಮಕ್ಕಳು ಬೆಳಿಗ್ಗೆಯಿಂದ ಸಂಜೆಯವರೆಗೆ ಅಷ್ಟೂ ಹೊತ್ತೂ ಮನೆಯಿಂದ ದೂರವಾಗಿ ಶಾಲೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಬಂದಿರುತ್ತಾರೆ. ಶಾಲೆಯಲ್ಲಿ ಅದೆಷ್ಟೇ ಸಂತೋಷದ ವಾತಾವರಣವಿದ್ದರೂ ಕೂಡ ಅದು ಮನೆಯಲ್ಲಿ ನೀಡಿದಂತಹ ಸುರಕ್ಷತೆಯ ಸಂತೋಷವನ್ನು ಖಂಡಿತಾ ನೀಡಲು ಸಾಧ್ಯವಿಲ್ಲ. ಹಾಗೆಂದೇ ಮಕ್ಕಳು ಶಾಲೆಯಿಂದ ಮನೆಗೆ ಸಂತೋಷದಿಂದ ಕುಣಿದು ಕುಪ್ಪಳಿಸಿಕೊಂಡು ಬರುತ್ತಾರೆ.

ಹಾಗೆ ಬಂದ ಮಕ್ಕಳಿಗೆ ಮನೆಯಲ್ಲಿ ಒಂದಷ್ಟು ಹೊತ್ತು ಆಟವಾಡೋಣ. ಟಿ.ವಿ ನೋಡೋಣ. ತಮ್ಮ ಹೆತ್ತವರ ಜೊತೆ ಅಕ್ಕ ತಮ್ಮ ಅಣ್ಣ ತಂಗಿ ಅಥವಾ ಪಕ್ಕದ ಮನೆ ಮಕ್ಕಳ ಜೊತೆ ಒಂದಷ್ಟು ಹೊತ್ತು ನಲಿದಾಡೋಣ ಎನ್ನಿಸುತ್ತಿರುತ್ತದೆ. ಒಟ್ಟಿನಲ್ಲಿ ಆ ದಿನದ ಶಾಲೆಯಲ್ಲಿನ ಸತತ ಕಲಿಯುವಿಕೆಯ ವಾತಾವರಣದಿಂದ ಒಂದಷ್ಟು ಸಮಯದ ನಿರಾಳತೆಯನ್ನು ಅವರ ಎಳೆ ಮನಸು ಬಯಸಿರುತ್ತದೆ. ಅಂತಹ ನಿರಾಳತೆ ಲಭಿಸಿದಾಗ ಮಾತ್ರ ಮನಸ್ಸು ಮತ್ತಷ್ಟು ಫ್ರೆಶ್‌ ಅಂತನ್ನಿಸಿ ಮತ್ತಷ್ಟು ಹುಮ್ಮಸ್ಸಿನಿಂದ ಕಲಿಕೆಯ ಕಡೆಗೆ ಆಸಕ್ತಿ ತೋರಲು ಮಕ್ಕಳಿಗೆ ಸಾಧ್ಯವಾಗುತ್ತದೆ. ಮಕ್ಕಳು ಸ್ವಲ್ಪ ನಿರಾಳತೆ ಬಯಸುವ ಅಂತಹ ಹೊತ್ತಿನಲ್ಲಿ ನಾವು ಒತ್ತಡ ಹಾಕಿ ಹೋಂವರ್ಕ್‌ ಅಥವಾ ಬೇರೆ ಯಾವುದೇ ರೀತಿಯ ಕಲಿಕೆಯನ್ನು ಹೇರಿದರೆ ಅದು ಕೇವಲ ತಲೆಯೊಳಕ್ಕೆ ಇಳಿಯಬಹುದೆ ಹೊರತು ಮನಸ್ಸಿನ ಒಳಗಲ್ಲ. ಮನಸ್ಸಿನ ಒಳಗಿಳಿಯದ ಕಲಿಕೆ ಅಂಕ ತರಬಲ್ಲದೇ ಹೊರತು ಮಕ್ಕಳಲ್ಲಿ ವಿಶ್ಲೇಷಣಾ ಸಾಮರ್ಥ್ಯವನ್ನಾಗಲಿ, ಸೃಜನಶೀಲತೆಯನ್ನಾಗಲಿ, ಕೌಶಲ್ಯವನ್ನಾಗಲಿ ಖಂಡಿತಾ ಬೆಳೆಸುವುದಿಲ್ಲ.

ಮಕ್ಕಳಿಗೆ ಮನೆ ಎನ್ನುವುದು ಸಂತೋಷ ನೀಡುವ ತಾಣವಾಗಬೇಕೇ ಹೊರತು ಅದು ಜೈಲಿನಂತೆ ಅನ್ನಿಸಬಾರದು. ಕಲಿಕೆಯ ವಿಚಾರದಲ್ಲಿ ತೀವ್ರ ತೆರನಾದ ಒತ್ತಡವನ್ನು ಸಣ್ಣ ಮನಸುಗಳ ಮೇಲೆ ಹೇರುವುದು ಸರಿಯಲ್ಲ. ಹಾಗಾದರೆ ಮಕ್ಕಳು ಹೋಂವರ್ಕ್‌ ಮಾಡುವುದು ಬೇಡವೆ? ಖಂಡಿತಾ ಮಾಡಬೇಕು. ಆದರೆ ಅದಕ್ಕೆ ಮೊದಲು ಮಗುವಿಗೆ ಒಂದಷ್ಟು ಹೊತ್ತು ನಿರಾಳವಾಗಲು ಬಿಡಿ.

ಕಲಿಕೆಯ ಹೊರತಾಗಿಯೂ ಆನಂದ ಪಡುವಂತಹ ಸಂಗತಿಗಳಿವೆ ಎನ್ನುವುದನ್ನು ಮನದಟ್ಟು ಮಾಡಿ. ಟಿ.ವಿ, ಆಟಗಳ ಜೊತೆ ಜೊತೆಗೆ ಮಕ್ಕಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವರೊಂದಿಗೆ ಒಂದಷ್ಟು ಹೊತ್ತು ಚಂದಗೆ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಶಾಲೆಯಲ್ಲಿ, ದಾರಿಯಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಲು ಹೇಳಿ. ಸಣ್ಣ ಸಣ್ಣ ಕತೆಗಳನ್ನು ಹೇಳಿ. ಅಡುಗೆ ಮಾಡುವ ಬಗೆ, ದೋಸೆ ಮಾಡುವ ರೀತಿ , ಬಟ್ಟೆ ಒಗೆಯುವ ಕ್ರಮ, ಸ್ವತ್ಛತೆಯ ಅಗತ್ಯ ಹೀಗೆ ದಿನನಿತ್ಯದ ಏನೋ ಒಂದು ವಿಚಾರವನ್ನು ಅದಕ್ಕೆ ಎಷ್ಟಾದರೂ ಅರ್ಥವಾಗಲಿ ಬಿಡಲಿ ಸುಮ್ಮನೆಯಾದರೂ ಇಂತಹ ವಿಚಾರಗಳ ಕುರಿತು ಮಾತನಾಡಿ.

ಧಾರಾವಾಹಿ, ಸಿನೆಮಾಗಳನ್ನು ಅಥವಾ ಮೊಬೈಲನ್ನು ನೀವು ನೋಡುತ್ತಾ ಮಗು ಮತ್ತು ಟಿವಿ ಎರಡೂ ಕಡೆ ಗಮನ ಕೊಡುತ್ತೇನೆ ಎನ್ನುವ ಭ್ರಮೆ ಬಿಟ್ಟುಬಿಡಿ. ಅದೆಷ್ಟೇ ಬಿಝಿ ಇದ್ದರೂ ಮಕ್ಕಳಿಗೆಂದೇ ವಿಶೇಷ ಸಮಯ ನೀಡಿ. ನಿಮ್ಮ ವರ್ತನೆ ಮಗುವಿನ ಬಗೆಗೆ ನೀವು ಸಂಪೂರ್ಣ ಕಾಳಜಿ ವಹಿಸುತ್ತೀರಿ ಅದರ ಬೇಕು ಬೇಡಗಳನ್ನು ವಿಚಾರಿಸುತ್ತೀರಿ, ಮಗುವನ್ನು ತುಂಬಾ ಪ್ರೀತಿಸುತ್ತೀರಿ ಎನ್ನುವ ವಿಚಾರ ಅದಕ್ಕೆ ಪಕ್ಕಾ ಮನವರಿಕೆಯಾಗುವಂತಿರಬೇಕು. ಹಾಗೆಂದು ಮಕ್ಕಳನ್ನು ತೀರಾ ಮುದ್ದಿಸಲು ಹೋಗಬೇಡಿ. ಅತೀ ಮುದ್ದು ಮಕ್ಕಳನ್ನು ಹಾಳು ಮಾಡುತ್ತದೆ. ಪ್ರೀತಿ ಮಕ್ಕಳನ್ನು ಬೆಳೆಸುತ್ತದೆ ಎನ್ನುವ ಮಾತು ನೆನಪಿರಲಿ.

ಅತೀ ಆಮಿಷಗಳನ್ನೊಡ್ಡಿ ಹೋಂವರ್ಕ್‌ ಮಾಡಿಸುವ ಕೆಲಸ ಆಗಬಾರದು. ಮಕ್ಕಳು ಸ್ವಲ್ಪ ಸಮಯ ಎಂಜಾಯ್‌ ಮಾಡಿದ ಬಳಿಕ ಅವರ ಮನಸ್ಸನ್ನು ಶಾಲೆಯ ಹೋಂವರ್ಕ್‌ನ ಕಡೆಗೆ ತಿರುಗಿಸಲು ಪ್ರಯತ್ನಿಸಿ, ಅದರ ಪ್ರಾಮುಖ್ಯತೆಯ ಬಗೆಗೆ ತಿಳಿ ಹೇಳಿ. ಮಕ್ಕಳನ್ನು ಕಲಿಕೆಯ ವಿಚಾರದಲ್ಲಿ ಅದೆಷ್ಟೇ ಹಿಂದುಳಿದಿದ್ದರೂ ನೀನು ಮನಸ್ಸು ಮನಸು ಮಾಡಿದರೆ ಬೇರೆಯವರಿಗಿಂತ ನೀನೇ ಚೆಂದಗೆ ಬರೆಯುತ್ತೀಯಾ. ನಿನ್ನ ಬಳಿ ಎಲ್ಲವೂ ಸಾಧ್ಯ ಎನ್ನುವಂತಹ ಮಾತುಗಳನ್ನಾಡಿ ಅದನ್ನು ಪ್ರೋತ್ಸಾಹಿಸಲು ಪ್ರಯತ್ನಿಸಿ.

ಕೆಲವೊಮ್ಮೆ ಶಾಲೆಯಲ್ಲಿ ನೀಡುತ್ತಿರುವ ಹೋಂವರ್ಕ್‌ ಹೆಚ್ಚಾಗುತ್ತಿದೆ ಅಂತನ್ನಿಸಿದರೆ ದಯವಿಟ್ಟು ಅದನ್ನು ಸಂಬಂಧಿಸಿದ ಶಿಕ್ಷಕರ ಗಮನಕ್ಕೆ ತನ್ನಿ. ನರ್ಸರಿ ಸೇರಿದಂತೆ ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ ಹೋಂವರ್ಕ್‌ ನೀಡಬಾರದು ಎಂದು ಸರಕಾರದ ಆದೇಶವೇ ಇದೆ. ಒಟ್ಟಿನಲ್ಲಿ ಹೋಂವರ್ಕ್‌ ಎನ್ನುವುದು ಮಕ್ಕಳ ಪಾಲಿಗೆ ಒತ್ತಾಯದ ಹೇರಿಕೆಯಾಗ ದಿರುವಂತೆ ನೋಡಿಕೊಳ್ಳಿ. ಮಗು ಮನೆಯ ವಾತಾವರಣವನ್ನು ಸಂಭ್ರಮಿಸಲು ಬಿಡಿ. ಅದರೊಂದಿಗೆ ಒಂದಷ್ಟು ಹೋಂವರ್ಕ್‌ ಕೂಡ ಇರಲಿ.

– ನರೇಂದ್ರ. ಎಸ್. ಗಂಗೊಳ್ಳಿ

ಟಾಪ್ ನ್ಯೂಸ್

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.