ಕತ್ತಲಲ್ಲಿ ರಾಷ್ಟ್ರೀಯ ಹೆದ್ದಾರಿ: ಬೀದಿ ದೀಪಗಳ ದುರಸ್ತಿಗಿಲ್ಲ ಕ್ರಮ

ಕಾಮಗಾರಿ ಸಂದರ್ಭ ಉಭಯ ಜಿಲ್ಲೆಗಳಲ್ಲಿ ತೆರವುಗೊಳಿಸಿದ ದಾರಿದೀಪಗಳ ಅಳವಡಿಕೆಗೆ ನಿರ್ಲಕ್ಷ್ಯ

Team Udayavani, Sep 20, 2019, 5:09 AM IST

1609KOTA1E

ದಾರಿದೀಪಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇಲ್ಲಿ ಮಬ್ಬುಗತ್ತಲಿದೆ.

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅನಂತರ ಹಲವು ಸಮಸ್ಯೆ ತಲೆದೋರಿವೆೆ. ಇದೀಗ ಒಂದು ತಿಂಗಳಿಂದ ಬೀದಿ ದೀಪ, ಹೈಮಾಸ್ಟ್‌ ದೀಪ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೂ ಉಪಕರಣಗಳು ದಾಸ್ತಾನಿಲ್ಲ ಎನ್ನುವ ಕಾರಣ ನೀಡಿ ದುರಸ್ತಿಗೂ ಕಂಪೆ‌ನಿ ಮುಂದಾಗಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿವೆ.

ಮುಖ್ಯ ಪೇಟೆಗಳಲ್ಲಿ ಕತ್ತಲೆ
ಕೋಟ, ಬ್ರಹ್ಮಾವರದ ಹಲವು ಕಡೆಗಳಲ್ಲಿ ದಾರಿ ದೀಪಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ ಹಾಗೂ ಕೆಲವು ಕಡೆ ಮಂದವಾದ ಬೆಳಕಿದೆ. ಸಾಸ್ತಾನ ಟೋಲ್‌ಗೇಟ್‌ನಲ್ಲೇ ಹೈಮಾಸ್ಟ್‌ ಸೇರಿದಂತೆ ಹಲವು ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ . ಕೋಟದ ಫ್ಲೆಓವರ್‌, ಸಾಸ್ತಾನ, ಕೋಟ, ಸಾಲಿಗ್ರಾಮ ಮುಖ್ಯ ಪೇಟೆಗಳಲ್ಲಿ, ಕುಂದಾಪುರ ತಾಲೂಕಿನಾದ್ಯಂತ ಕೂಡ ಇದೇ ರೀತಿ ಸಮಸ್ಯೆ ಇದೆ.

ಮಾಬುಕಳದಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲ
ಎಕ್ಸ್‌ಪ್ರೆಸ್‌ ಬಸ್‌ ನಿಲ್ದಾಣವಿರುವ ಎಲ್ಲ ಕಡೆಗಳಲ್ಲಿ ತಂಗುದಾಣ, ಹೈಮಾಸ್ಟ್‌, ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ. ಆದರೆ ಮಾಬುಕಳದಲ್ಲಿ ಬಸ್‌
ತಂಗುದಾಣ, ದಾರಿ ದೀಪದ ವ್ಯವಸ್ಥೆ ಇಲ್ಲ. ಹೀಗಾಗಿ ಪಂಚಾಯತ್‌ನವರು ಅಳವಡಿಸಿದ ಒಂದೆರಡು ದೀಪಗಳೇ ಇಲ್ಲಿಗೆ ಆಧಾರವಾಗಿದೆ. ಸ್ಥಳೀಯರು ಸಾಕಷ್ಟು ಬಾರಿ ಈ ಕುರಿತು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಾತ್ರಿ ವೇಳೆ ಬಸ್‌ಗಾಗಿ ನಿಲ್ಲುವವರು, ಪಾದಚಾರಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

ಕಳ್ಳತನಕ್ಕೆ ರಹದಾರಿ
ಮಳೆಗಾಲದಲ್ಲಿ ಅಂಗಡಿ-ಮುಂಗಟ್ಟು, ದೇಗುಲಗಳಲ್ಲಿ ಹೆಚ್ಚಾಗಿ ಕಳ್ಳತನದ ದುಷ್ಕೃತ್ಯಗಳು ನಡೆಯು ತ್ತಿವೆ. ಹೀಗಾಗಿ ಕತ್ತಲ ವಾತಾವರಣವಿದ್ದರೆ ಇಂತಹ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎನ್ನುವ ಆತಂಕ ಸಾರ್ವಜನಿಕರಲ್ಲಿದೆ.

ಮನವಿಗೆ ಸೂಕ್ತ ಸ್ಪಂದನೆಯಿಲ್ಲ
ಬೀದಿ ದೀಪ ಸೇರಿದಂತೆ ಹಲವು ಸಮಸ್ಯೆ ಪರಿಹರಿಸುವಂತೆ ಸೆ.6ರಂದು ಹೆದ್ದಾರಿ ಜಾಗೃತಿ ಸಮಿತಿ ಟೋಲ್‌ನ ಮುಖ್ಯಸ್ಥರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು ಹಾಗೂ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದಕ್ಕೆ ಸೂಕ್ತ ಪ್ರತಿಸ್ಪಂದನೆ ದೊರೆತಿಲ್ಲ.

ಹೋರಾಟಕ್ಕಿಳಿಯುವ ಮುನ್ನ ಎಚ್ಚೆತ್ತುಕೊಳ್ಳಿ
ದಾರಿದೀಪಗಳಿಲ್ಲದೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು ಟೋಲ್‌ ಮುಖ್ಯಸ್ಥರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಒಂದೆರಡು ಕಡೆ ದುರಸ್ತಿ ನಡೆಸಿದ್ದು ಹೊರತುಪಡಿಸಿದರೆ ಸಂಪೂರ್ಣ ದುರಸ್ತಿಯಾಗಿಲ್ಲ. ಸಾರ್ವಜನಿಕರು ಪ್ರತಿಭಟನೆ ನಡೆಸುವುದಕ್ಕೆ ಮೊದಲು ಕಂಪೆನಿ ಎಚ್ಚೆತ್ತುಕೊಳ್ಳಬೇಕಿದೆ.
-ಪ್ರತಾಪ್‌ ಶೆಟ್ಟಿ ಸಾಸ್ತಾನ, ಅಧ್ಯಕ್ಷರು ಹೆದ್ದಾರಿ ಜಾಗೃತಿ ವೇದಿಕೆ

ಮರು ಅಳವಡಿಕೆಗೆ ಸೂಚನೆ ನೀಡಲಿ
ಚತುಷ್ಪಥ ಕಾಮಗಾರಿ ಸಂದರ್ಭ ತೆರವುಗೊಳಿಸಲಾದ ಬೀದಿ ದೀಪಗಳನ್ನು ಮತ್ತೆ ಅಳವಡಿಸುವಲ್ಲಿ ನಿರ್ಲಕ್ಷé ವಹಿಸಲಾಗಿದೆ. ಈ ಕುರಿತು ನಮ್ಮ ಗ್ರಾ.ಪಂ. ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೆವು. ಅನಂತರ ಈ ಕುರಿತು ವರದಿ ಕೇಳಲಾಗಿತ್ತು. ಸಂಬಂಧಿಸಿದ ಮಾಹಿತಿ ಕೂಡ ನೀಡಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಈ ಕುರಿತು ಗಮನಹರಿಸಿ ಅವುಗಳನ್ನು ಮತ್ತೆ ಅಳವಡಿಸುವಂತೆ ಕಂಪೆನಿಗೆ ಸೂಚನೆ ನೀಡಬೇಕಿದೆ.
-ಗೋವಿಂದ ಪೂಜಾರಿ,
ಅಧ್ಯಕ್ಷರು, ಪಾಂಡೇಶ್ವರ ಗ್ರಾ.ಪಂ.

ದಾಸ್ತಾನಿಲ್ಲ; ಒಂದೆರಡು ದಿನದಲ್ಲಿ ಕ್ರಮ
ಉಪಕರಣ ದಾಸ್ತಾನಿಲ್ಲದ ಕಾರಣ ಎಲ್ಲ ಕಡೆ ದಾರಿ ದೀಪದ ದುರಸ್ತಿಗೆ ಹಿನ್ನಡೆಯಾಗಿದೆ. ಈ ಕುರಿತು ಮನವಿ ಸಲ್ಲಿಸಿದ್ದು ಒಂದೆರಡು ದಿನದಲ್ಲಿ ಸ್ಟಾಕ್‌ ಲಭ್ಯ ವಾಗಲಿದ್ದು ಕುಂದಾಪುರದಿಂದ ಉಡುಪಿ ತನಕದ ಎಲ್ಲ ದಾರಿ ದೀಪಗಳನ್ನು ತತ್‌ಕ್ಷಣ ದುರಸ್ತಿಗೊಳಿಸಲಾಗುವುದು.
-ಕೇಶವಮೂರ್ತಿ, ಸಾಸ್ತಾನ ಟೋಲ್‌ ಮ್ಯಾನೇಜರ್‌

ತೆರವುಗೊಳಿಸಿದ ದೀಪ ಅಳವಡಿಸುವವರಾರು?
ಚತುಷ್ಪಥ ಕಾಮಗಾರಿ ಆರಂಭಗೊಳ್ಳುವುದಕ್ಕೆ ಮುಂಚೆ ಉಭಯ ಜಿಲ್ಲೆಗಳ ಹೆದ್ದಾರಿಯ ಇಕ್ಕೆಲಗಳಲ್ಲಿ ಸ್ಥಳೀಯಾಡಳಿತಗಳು ಅಳವಡಿಸಿದ ಬೀದಿ ದೀಪಗಳಿದ್ದವು. ಪಾದಚಾರಿಗಳು, ಸೈಕಲ್‌ ಸವಾರರು ಇದರ ನೆರವಿನಿಂದಲೇ ಸಂಚರಿಸುತ್ತಿದ್ದರು. ಕಾಮಗಾರಿ ಸಂದರ್ಭ ವಿದ್ಯುತ್‌ ಕಂಬಗಳ ಜತೆಯಲ್ಲಿ ಅವುಗಳನ್ನು ತೆರವುಗೊಳಿಸಲಾಯಿತು. ಆದರೆ ಕಾಮಗಾರಿ ಮುಗಿದ ಮೇಲೆ ತೆರವುಗೊಳಿಸಿದ ದೀಪಗಳನ್ನು ಮತ್ತೆ ಅಳವಡಿಸದೆ ಮುಖ್ಯ ಪೇಟೆ, ಫ್ಲೆ$çಓವರ್‌ಗಳಲ್ಲಿ ಮಾತ್ರ ದಾರಿದೀಪ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಹೆಚ್ಚಿನ ಕಡೆಗಳಲ್ಲಿ ಬೀದಿದೀಪವಿಲ್ಲ. ರಸ್ತೆ ನಿರ್ವಹಣೆ ಕಂಪೆನಿಗೆ ಸಂಬಂಧಿಸಿರುವುದರಿಂದ ಅವರೇ ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯಾಡಳಿತಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದವು. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಪ್ರಸ್ತುತ ಪಾದಚಾರಿ, ಸೈಕಲ್‌ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

World Rapid Championships: ಕೊನೆರು ಹಂಪಿ ಚಾಂಪಿಯನ್‌; ಇರೆನ್‌ ವಿರುದ್ಧ ಜಯ

World Rapid Championships: ಕೊನೆರು ಹಂಪಿ ಚಾಂಪಿಯನ್‌; ಇರೆನ್‌ ವಿರುದ್ಧ ಜಯ

ವಿಶ್ವ ಟೆಸ್ಟ್‌  ಚಾಂಪಿಯನ್‌ಶಿಪ್‌: ದಕ್ಷಿಣ ಆಫ್ರಿಕಾ ಫೈನಲ್‌ ಪ್ರವೇಶ

World Test Championship: ದಕ್ಷಿಣ ಆಫ್ರಿಕಾ ಫೈನಲ್‌ ಪ್ರವೇಶ

Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ

Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ

1-yodha

Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು

4

Udupi: ಗಾಂಜಾ ಮಾರಾಟ; ಮೂವರ ಬಂಧನ

2

Kundapura: ವ್ಯಕ್ತಿ ನಾಪತ್ತೆ; 25 ದಿನ ಕಳೆದರೂ ಸಿಗದ ಸುಳಿವು

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್‌: ರಹಮತ್‌ ಶಾ ದ್ವಿಶತಕ

Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್‌: ರಹಮತ್‌ ಶಾ ದ್ವಿಶತಕ

World Rapid Championships: ಕೊನೆರು ಹಂಪಿ ಚಾಂಪಿಯನ್‌; ಇರೆನ್‌ ವಿರುದ್ಧ ಜಯ

World Rapid Championships: ಕೊನೆರು ಹಂಪಿ ಚಾಂಪಿಯನ್‌; ಇರೆನ್‌ ವಿರುದ್ಧ ಜಯ

ವಿಶ್ವ ಟೆಸ್ಟ್‌  ಚಾಂಪಿಯನ್‌ಶಿಪ್‌: ದಕ್ಷಿಣ ಆಫ್ರಿಕಾ ಫೈನಲ್‌ ಪ್ರವೇಶ

World Test Championship: ದಕ್ಷಿಣ ಆಫ್ರಿಕಾ ಫೈನಲ್‌ ಪ್ರವೇಶ

Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ

Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.