ಅನುಮತಿ ಪಡೆದೇ ಕಪ್ಪು ಹಣದ ಮಾಹಿತಿ ಹಂಚಿಕೆ
Team Udayavani, Sep 20, 2019, 5:06 AM IST
ಹೊಸದಿಲ್ಲಿ: ಸ್ವಿಸ್‌ಬ್ಯಾಂಕ್ ಸೇರಿದಂತೆ ವಿದೇಶಿ ಮೂಲದಿಂದ ಪಡೆದ ಕಪ್ಪುಹಣ ಕುರಿತಾದ ಮಾಹಿತಿಯು ಗೌಪ್ಯವಾಗಿದ್ದು, ಸಂಬಂಧಿಸಿದ ದೇಶಗಳಿಂದ ಅನುಮತಿ ಪಡೆದ ಅನಂತರವೇ ಇತರ ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳ ಬಹುದಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ನಿರ್ದೇಶಿಸಿದೆ. ಇಂತಹ ಮಾಹಿತಿಯು ಗಂಭೀರ ವಿಷಯ ವಾಗಿದ್ದು, ಅನಧಿಕೃತವಾಗಿ ಬಹಿರಂಗಗೊಳ್ಳದಂತೆ ತೆರಿಗೆದಾರರಿಗೆ ರಕ್ಷಣೆ ಒದಗಿಸಬೇಕು ಎಂದೂ ಸೂಚಿಸಲಾಗಿದೆ.
ಇತರ ದೇಶಗಳೊಂದಿಗೆ ಮಾಡಿಕೊಳ್ಳಲಾದ ಒಪ್ಪಂದದ ಕುರಿತಂತೆ ಗೌಪ್ಯತೆ ನಿಬಂಧನೆಗಳ ಬಗ್ಗೆ ಸಿಬಿಡಿಟಿ ಇತ್ತೀಚೆಗೆ ಸೂಚನೆಗಳನ್ನು ಪ್ರಕಟಿಸಿದೆ. ವಿದೇಶಗಳೊಂದಿಗೆ ಮಾಡಿಕೊಂಡ ತೆರಿಗೆ ಒಪ್ಪಂದಗಳ ಅಡಿಯಲ್ಲಿ ಪಡೆದ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಜೊತೆಗೆ ಹಂಚಿಕೊಳ್ಳಲಾಗದು. ಹೀಗಾಗಿ ಮೊದಲು ತನಿಖಾ ಸಂಸ್ಥೆಗಳು ಸಿಬಿಡಿಟಿ ಅನುಮತಿ ಯನ್ನು ಪಡೆಯಬೇಕು.
ಅನಂತರ ಸಿಬಿಡಿಟಿ ತನ್ನ ವಿದೇಶಿ ತೆರಿಗೆ ಮತ್ತು ತೆರಿಗೆ ಸಂಶೋಧನೆ ವಿಭಾಗದ ಮೂಲಕ ಅನುಮತಿ ಯನ್ನು ಕೇಳಲಾಗುತ್ತದೆ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.