ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶ್ಲಾಘನೆ
ರಾಮಕೃಷ್ಣ ಮಿಷನ್ ಸ್ವಚ್ಛ ಭಾರತ ಅಭಿಯಾನ
Team Udayavani, Sep 20, 2019, 4:19 AM IST
ಮಂಗಳೂರು: ಕೆಲವು ವರ್ಷಗಳಿಂದ ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಸ್ವಚ್ಛ ಭಾರತ ಅಭಿಯಾನ ನಿರ್ವಹಿಸಿದ್ದು, ಸಂಸ್ಥೆಯ ಈ ಕೆಲಸಕ್ಕೆ ಈಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2014ರ ಅ. 2ರಂದು ಸ್ವತ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಅದಕ್ಕೆ ದೇಶಾದ್ಯಂತ ಹಲವು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಖಾಸಗಿ, ಸರಕಾರಿ ಸಂಸ್ಥೆಗಳು ಸಹಕಾರ ನೀಡಿದ್ದವು.
ರಾಮಕೃಷ್ಣ ಮಿಶನ್ ವತಿಯಿಂದ ಪ್ರತೀ ರವಿವಾರದ ಶ್ರಮದಾನ, ಸ್ವತ್ಛತಾ ಸಂಪರ್ಕ ಅಭಿಯಾನ, ಸ್ವಚ್ಛ ಮನಸ್, ಸ್ವಚ್ಛ ಸೋಚ್ ಮುಂತಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು. ಇದನ್ನೊಂದು ಅಭಿಯಾನವನ್ನಾಗಿ ಮುಂದುವರಿಸುತ್ತಾ ಬಂದಿರುವುದನ್ನು ಮೆಚ್ಚಿರುವ ಉಪರಾಷ್ಟ್ರಪತಿ ತಮ್ಮ ಸಂದೇಶದಲ್ಲಿ ಅಭಿನಂದನೆ ತಿಳಿಸಿದ್ದಾರೆ.
ರಾಮಕೃಷ್ಣ ಮಿಷನ್ ವತಿಯಿಂದ ಸೆ.29ರಂದು 5ನೇ ಹಂತದ ಸ್ವಚ್ಛತಾ ಅಭಿಯಾನದ ಕೊನೆಯ ಕಾರ್ಯಕ್ರಮ ನಡೆಯುತ್ತಿದ್ದು, ಅದಕ್ಕೆ ಉಪರಾಷ್ಟ್ರಪತಿಯವರನ್ನು ಮಿಷನ್ ವತಿಯಿಂದ ಆಹ್ವಾನಿಸಲಾಗಿತ್ತು. ಆದರೆ ಪೂರ್ವನಿಗದಿತ ಕಾರ್ಯಕ್ರಮವಿರುವ ಹಿನ್ನೆಲೆಯಲ್ಲಿ ಮಿಷನ್ ಬಗ್ಗೆ ತಿಳಿದುಕೊಂಡು ಮೆಚ್ಚುಗೆ ಪತ್ರ ಇ-ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
UV Fusion: ಹೃದಯದಲ್ಲಿ ಬಾಲ್ಯದ ಮಿಡಿತ
Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ
UV Fusion: ಚಿಮ್ಮಿದ ಸೇವಾಹನಿಗಳು ಮತ್ತೆ ಸಾಗರವ ಸೇರಿತು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.