ವೀರಶೈವ ಮಹಾಸಭಾ ಚುನಾವಣೆಗೆ ಪೈಪೋಟಿ
ಅಖಾಡಕ್ಕಿಳಿದ ಧುಮುಕಿದ ಹಿರಿಯರು-ಕಿರಿಯರು•ಅಧ್ಯಕ್ಷ ಸ್ಥಾನಕ್ಕೆ ಐವರು-ಕಾರ್ಯಕಾರಿಗೆ 88 ನಾಮಪತ್ರ
Team Udayavani, Sep 20, 2019, 11:07 AM IST
ಕಲಬುರಗಿ: ಅಖೀಲ ಭಾರತ ವೀರಶೈವ ಮಹಾಸಭಾ ಚುನಾವಣೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮೇಯರ್ ಶರಣಕುಮಾರ ಮೋದಿ ಪೆನಾಲ್ ಸದಸ್ಯರೊಂದಿಗೆ ನಾಮಪತ್ರ ಸಲ್ಲಿಸಿದರು.
ಕಲಬುರಗಿ: ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿರುವ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆ ರಾಜಕೀಯ ಚುನಾವಣೆ ಮೀರಿಸುವ ಮಟ್ಟಿಗೆ ರಂಗೇರಿದ್ದು, ಅಧ್ಯಕ್ಷ ಸ್ಥಾನಕ್ಕೆ ಐವರು ನಾಮಪತ್ರ ಸಲ್ಲಿಸಿದ್ದಾರೆ.
ಸೆ. 29ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆ ದಿನವಾದ ಗುರುವಾರ ಸರತಿ ಸಾಲಿನಲ್ಲಿ ನಿಂತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಐದು ವರ್ಷ ಅವಧಿಯ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಐವರು ನಾಮಪತ್ರ ಸಲ್ಲಿಸಿದ್ದರೆ, 30 ಸದಸ್ಯ ಸ್ಥಾನಕ್ಕೆ 88 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಸಮಾಜದ ಹಿರಿಯರು, ಕಿರಿಯರೆಲ್ಲರೂ ಚುನಾವಣೆಗೆ ತಮ್ಮ ಪ್ರತಿಷ್ಠೆ ಪಣಕ್ಕಿಟ್ಟು ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಇಳಿದಿದ್ದರಿಂದಎಲ್ಲೆಡೆ ಚುನಾವಣೆಯದ್ದೇ ಮಾತು ಕೇಳಿ ಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಸಂಬಂಧ ಹತ್ತು ದಿನಗಳಿಂದ ಕರೆಯಲಾಗಿದ್ದ ಸಭೆಯಲ್ಲಿ ಸಂಧಾನ ನಡೆಯದೇ ಕೈ-ಕೈ ಮಿಲಾಯಿಸುವ ಮಟ್ಟಿಗೆ ಹೋಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಸಮಾಜದ ಹಿರಿಯರಾದ ಜಿ.ಡಿ.ಅಣಕಲ್, ಶಿವಶರಣಪ್ಪ ಸೀರಿ, ಸುಭಾಷ ಬಿರಾದಾರ, ಸಮಾಜದ ಹಾಲಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಮಾಜಿ ಮೇಯರ್ ಶರಣಕುಮಾರ ಮೋದಿ ನಾಮಪತ್ರ ಸಲ್ಲಿಸಿದ್ದು, ಸೆ. 23ರಂದು ನಾಮಪತ್ರ ವಾಪಸ್ಸಾತಿಗೆ ಕೊನೆ ದಿನವಿದೆ.
30 ಸದಸ್ಯ ಸ್ಥಾನಗಳಿಗೆ ಒಟ್ಟಾರೆ ನಾಮಪತ್ರ ಸಲ್ಲಿಸಿದ್ದು, ಹಿರಿಯರು-ಕಿರಿಯರು ಸ್ಪರ್ಧಿಸಿರುವುದು ವಿಶೇಷವಾಗಿದೆ. ಶರಣಕುಮಾರ ಮೋದಿ, ಅರುಣಕುಮಾರ ಪಾಟೀಲ, ಜಿ.ಡಿ.ಅಣಕಲ್ ಅವರು ಹೆಚ್ಚಿನ ಸದಸ್ಯರೊಂದಿಗೆ ಫೆನಾಲ್ ರಚಿಸಿಕೊಂಡು ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ.
30 ಸದಸ್ಯ ಸ್ಥಾನಗಳಲ್ಲಿ 10 ಸ್ಥಾನಗಳು ಮಹಿಳೆಯರಿಗೆ ಮೀಸಲಿದ್ದು, ಈ 10 ಸ್ಥಾನಗಳಿಗೆ 20 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇಂದಿರಾ ರೆಡ್ಡಿ, ಶಶಿಕಲಾ ಎಸ್. ಸಿರಿ, ಚಂದನಾ ಹಾರಕೂಡೆ, ಮಹಾಲಕ್ಷ್ಮೀ ಶಿವಪುತ್ರಪ್ಪ, ಅಂಬಿಕಾ ದುರ್ಗಿ, ಜಯಶ್ರೀ ರಾಜಶೇಖರ ಪಾಟೀಲ, ಅಂಬುತಾಯಿ ಗುಬ್ಯಾಡ್, ಶಾರದಾಬಾಯಿ, ಭಾರತೀಬಾಯಿ, ಅನ್ನಪೂರ್ಣ ಸಂಗಶೆಟ್ಟಿ, ಶೀಲಾ ಬಿ. ಮುತ್ತಿನ, ಆಶಾದೇವಿ ಖೂಬಾ, ಜಗದೇವಿ ಅಷ್ಠಗಿ, ಅಂಬಿಕಾ ಜೆ. ಮಾಲಿಪಾಟೀಲ, ಶ್ರೀದೇವಿ ಎಸ್. ಸರಸಣಗಿ, ಡಾ| ಸುಧಾ ಹಾಲಕಾಯಿ, ಗೌರಿ ಆರ್. ಚಿಚಕೋಟಿ, ಡಾ| ನಾಗವೇಣಿ ಎಸ್. ಪಾಟೀಲ, ಸಾವಿತ್ರಿ ಎಸ್. ಕುಳಗೇರಿ, ಬೇಬಿನಂದಾ ಆರ್. ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರಗಳನ್ನು ಉಪ ಚುನಾವಣಾಧಿಕಾರಿ ಹಾಗೂ ನ್ಯಾಯವಾದಿ ಶರಣಬಸಪ್ಪ ಕಾಡಾದಿ ಸ್ವೀಕರಿಸಿದರು. ಸಹಾಯಕರಾಗಿ ನಾಗಣ್ಣ ಗಣಜಲಕೇಡ, ಬಸವರಾಜ ಆವಂಟಿ, ರಾಚಪ್ಪ ಅಕ್ಕೋಣಿ, ಸಂಗಣ್ಣ ಇಜೇರಿ, ಸಿದ್ಧಾಜಿ ಪಾಟೀಲ, ಗಿರಿರಾಜ ಶಿರವಾಳ, ರಮೇಶ ಕಡಾಳೆ, ಶಾಂತವೀರ ತುಪ್ಪದ ಕಾರ್ಯ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.