ಟ್ಯಾಂಕರ್‌ ನೀರು ಸರಬರಾಜಿನಲ್ಲಿ ಅಕ್ರಮ


Team Udayavani, Sep 21, 2019, 3:00 AM IST

tanker

ಚಿಂತಾಮಣಿ: ಟ್ಯಾಂಕರ್‌ಗಳಿಂದ ನೀರು ಸರಬರಾಜಿನಲ್ಲಿ ಅಕ್ರಮ ನಡೆದು ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವುಂಟಾಗಿ ದಿನೇ ದಿನೆ ಬೊಕ್ಕಸದಲ್ಲಿನ ಹಣ ಕರಗುವಂತಾಗಿದ್ದು, ಇನ್ನಾದರೂ ಟ್ಯಾಂಕರ್‌ಗಳ ಸರಬರಾಜಿಗೆ ಕಡಿವಾಣ ಹಾಕಿ ಅಗತ್ಯ ಮಾರ್ಗೊಪಾಯಗಳಿಗೆ ಪ್ರತಿಯೊಬ್ಬರೂ ಮುಂದಾಗಬೇಕೆಂದು ಜಿಪಂ ಸಿಇಒ ಫೌಜಿಯಾ ತರನ್ನುಮ್‌ ತಾಕೀತು ಮಾಡಿದ್ದಾರೆ.

ಕಾಗತಿ ಜಿಲ್ಲಾ ಕೃಷಿ ತರಭೇತಿ ಕೇಂದ್ರದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 75 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರು ಖರೀದಿ ಮಾಡಲಾಗುತ್ತಿದೆ. 55 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೊರೆದಿರುವ 146 ಕೊಳವೆಬಾವಿಗಳಲ್ಲಿ ಶೇ.70 ರಷ್ಟು ವಿಫ‌ಲವಾಗಿವೆ ಎಂಬ ಮಾಹಿತಿ ತಾಪಂ ನೀಡಿರುವ ವರದಿಯಲ್ಲಿ ಇದೆ ಎಂದರು.

ಜಿಯಲಾಜಿಸ್ಟ್‌ ಕೊರತೆಯಿದೆ ಎನ್ನುತ್ತೀರಲ್ಲಾ, ಚಿಂತಾಮಣಿ ತಾಲೂಕಿಗೇನೇ ಓರ್ವ ಜಿಯಾಲಜಿಸ್ಟ್‌ನ್ನು ನೇಮಕ ಮಾಡುತ್ತೇನೆ, ನೀರು ಲಭ್ಯವಾಗುವ ಕಡೆ ಕೊಳವೆಬಾವಿ ಕೊರೆಸುವ ಮೂಲಕ ಖಾಸಗಿ ಕೊಳವೆಬಾವಿ/ಟ್ಯಾಂಕರ್‌ಗಳ ಹಾವಳಿಗೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಪಂ ಅಧ್ಯಕ್ಷ ಮಂಜುನಾಥ್‌ ಮಾತನಾಡಿ, ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆಯ ಮೇಲೆ ಈಗಾಗಲೇ ಲಿಖೀತ, ಮೊಬೈಲ್‌ ಮೂಲಕ ದೂರುಗಳು ಬಂದಿದ್ದು, ಈ ಇಲಾಖೆಯ ಹಿಂದಿನ ಅಧಿಕಾರಿ ಶಂಕರಾಚಾರಿ ಮಾಡಿರುವ ಅಕ್ರಮಗಳ ಬಗ್ಗೆ ಸರ್ಕಾರಿ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಈಗಿನ ಎಇಇ ವೆಂಕಟರವಣಪ್ಪ ಆದ ನೀವೂ ಶಂಕರಾಚಾರಿಯಂತೆ ಮನೆಯಲ್ಲಿ ಕುಳಿತುಕೊಳ್ಳಬೇಕೇ ಎಂದು ಪ್ರಶ್ನಿಸಿ, ನಿಮ್ಮ ಇಲಾಖೆಯಿಂದ ವ್ಯಯವಾಗುವ ಒಂದೊಂದು ರೂಪಾಯಿಗೂ ದಾಖಲೆ ನೀಡಬೇಕೆಂದರು.

ಜಿಪಂಗೆ ಮಾಹಿತಿ ಇಲ್ಲ: ನಿಮ್ಮ ಇಲಾಖೆಗೆ ಶಾಸಕರ ನಿಧಿ, ಟಾಸ್ಕ್ಫೋರ್ಸ್‌, ಜಿಪಂ, ಜಿಲ್ಲಾಧಿಕಾರಿ ಇತ್ಯಾದಿ ನಿಧಿಗಳಿಂದ ನೀರಾವರಿಗೆಂದೇ ಅನುದಾನ ಬರುತ್ತಿದ್ದು, ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕುಗಳನ್ನು ಕಂಡಾಗ ಚಿಂತಾಮಣಿ ತಾಲೂಕಿನ ಈ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಜಿಪಂಗೆ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸಿಬ್ಬಂದಿ ಭರ್ತಿ ಮಾಡಿ: ತಾಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ಮಾತನಾಡಿ, ನಗರ ಮತ್ತು ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ನೀರಿಗೆ ಹಾಹಾಕಾರ ಕಂಡು ಬರುತ್ತಿದೆ. ಡಿ ಗ್ರೂಪ್‌ನಿಂದ ವೈದ್ಯರವರೆಗಿನ ಸಿಬ್ಬಂದಿ ಕೊರತೆಯಿದ್ದು, ಸರಿಪಡಿಸಲು ಮನವಿ ಮಾಡಿದರು. ಅಪೌಷ್ಟಿಕ ಮಕ್ಕಳನ್ನು ಸಂರಕ್ಷಿಸುವ ಸಲುವಾಗಿಯೇ 2 ಹಾಸಿಗೆಗಳ ಘಟಕವನ್ನು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೆ.25 ರಂದು ಪ್ರಾರಂಭಿಸಲಾಗುವುದು ಎಂದರು.

ತಾಪಂ ಇಒ ಮಂಜುನಾಥ್‌, ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ನಾರಾಯಣಸ್ವಾಮಿ, ಜಿಪಂ ಸದಸ್ಯರುಗಳಾದ ಸ್ಕೂಲ್‌ ಸುಬ್ಟಾರೆಡ್ಡಿ, ಕಾಪಲ್ಲಿ ಶ್ರೀನಿವಾಸ್‌, ಸುನಂದಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

0421472757

Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ

Chikkaballapur: ಸ್ವಂತ ಕಟ್ಟಡ ಇಲ್ಲದೇ ಶಿಕ್ಷಣ ತರಬೇತಿಗೆ ಡಯಟ್‌ ಪರದಾಟ!

Chikkaballapur: ಸ್ವಂತ ಕಟ್ಟಡ ಇಲ್ಲದೇ ಶಿಕ್ಷಣ ತರಬೇತಿಗೆ ಡಯಟ್‌ ಪರದಾಟ!

Chikkaballapura; ಎಸ್ಎಫ್ ಐ ರಾಜ್ಯ ಸಮ್ಮೇಳನಕ್ಕೆ ಚಾಲನೆ

Chikkaballapura; ಎಸ್ಎಫ್ ಐ ರಾಜ್ಯ ಸಮ್ಮೇಳನಕ್ಕೆ ಚಾಲನೆ

Police

Government Order: ಪೊಲೀಸರಿಗೆ ಅರ್ಧ ಕೋಟಿ ರೂ. ಜೀವವಿಮೆ! ವಿಮಾ ಮೊತ್ತ ಇಲಾಖೆಯಿಂದಲೇ ಪಾವತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.