ಪ್ರೊ ಕಬಡ್ಡಿ: ಪಾಟ್ನಾ-ತೆಲುಗು ಟೈಟಾನ್ಸ್ ಪಂದ್ಯ ಟೈ
Team Udayavani, Sep 20, 2019, 10:31 PM IST
ಪುಣೆ: ತೆಲುಗು ಟೈಟಾನ್ಸ್-ಪಾಟ್ನಾ ಪೈರೇಟ್ಸ್ ನಡುವಿನ ಶುಕ್ರವಾರದ ಪ್ರೊ ಕಬಡ್ಡಿ ಪಂದ್ಯ 42-42 ಅಂತರದಿಂದ ಟೈ ಆಗಿದೆ.
“ಬಾಹುಬಲಿ’ ಖ್ಯಾತಿಯ ಸಿದ್ಧಾರ್ಥ್ ದೇಸಾಯಿ (12 ಅಂಕ), ರಜನೀಶ್ (10 ಅಂಕ) ಅವರ ಸಿಡಿಲಬ್ಬರದ ರೈಡಿಂಗ್, ಪಾಟ್ನಾ ಪೈರೇಟ್ಸ್ ತಂಡದ ಪರ್‌ದೀಪ್ ನರ್ವಾಲ್ (17 ಅಂಕ), ಜಾಂಗ್ ಕುನ್ ಲೀ (7 ಅಂಕ) ಸೂಪರ್ ರೈಡಿಂಗ್ ಈ ಪಂದ್ಯದ ಆಕರ್ಷಣೆ ಆಗಿತ್ತು.
ಈ ಮುಖಾಮುಖೀಯಲ್ಲಿ ರಕ್ಷಣಾ ಆಟಗಾರರಿಗಿಂತ ರೈಡರ್‌ಗಳೇ ಹೆಚ್ಚು ಯಶಸ್ಸು ಸಾಧಿಸಿದರು. ಕೊನೆಯ ತನಕ ಹೃದಯ ಬಡಿತ ಹೆಚ್ಚಿಸಿದ ಪಂದ್ಯ ರೋಚಕವಾಗಿ ಟೈಗೊಂಡಿತು.
ಬಾಹುಬಲಿ ಪರಾಕ್ರಮ
ಸಿದ್ಧಾರ್ಥ್ ದೇಸಾಯಿ ರೈಡಿಂಗ್‌ನಲ್ಲಿ ಎಂದಿನಂತೆ ಬಿರುಸಿನ ಪ್ರದರ್ಶನ ನೀಡಿದರು. 8 ಟಚ್ ಪಾಯಿಂಟ್ ಹಾಗೂ 2 ಬೋನಸ್‌ನಿಂದ ಪಾಟ್ನಾ ಮೇಲೆ ಸವಾರಿ ಮಾಡಿದರು. ಇವರಿಗೆ ಮತ್ತೂಂದು ತುದಿಯಲ್ಲಿ ರೈಡಿಂಗ್‌ನಿಂದ ರಜನೀಶ್ ಸಾಥ್ ನೀಡಿದರು. ಇದು ಈ ಕೂಟದಲ್ಲಿ ತೆಲುಗು ಟೈಟಾನ್ಸ್ ಕಂಡ 3ನೇ ಟೈ ಎನ್ನುವುದು ವಿಶೇಷ.
ಫಾರ್ಮ್ ಗೆ ಬಂದ ಪರ್‌ದೀಪ್
ಪರ್‌ದೀಪ್ ನರ್ವಾಲ್ 17 ಟಚ್ ಪಾಯಿಂಟ್ ಕಲೆ ಹಾಕಿದರು. ಆರಂಭದ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪರ್‌ದೀಪ್ ಇದೀಗ ಫಾರ್ಮ್ ಗೆ ಮರಳಿ ಗಮನ ಸೆಳೆದರು. ಸಹ ರೈಡರ್ ಜಾಂಗ್ ಕುನ್ ಲೀ ಶ್ರೇಷ್ಠ ರೈಡಿಂಗ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.