ಗಾಂಧಿ ಮತ್ತು ಗೋಡೆ

ರೇಲ್ವೆ ನಿಲ್ದಾಣದ ಬಾಪೂ ದೃಶ್ಯಕಾವ್ಯ

Team Udayavani, Sep 21, 2019, 5:00 AM IST

u-29

ಬಿಸಿಲೂರು ಅಂತಲೇ ಆರೋಪ ಹೊತ್ತ, ರಾಯಚೂರು ರೇಲ್ವೆ ನಿಲ್ದಾಣವೀಗ ಚರಿತ್ರೆಯ ಕತೆ ಹೇಳುತ್ತಿದೆ. ಗುಟ್ಕಾ ತಿಂದು, ಉಗಿದು, ಗೋಡೆಗಳೆಲ್ಲ ಕೆಂಬಣ್ಣಕ್ಕೆ ತಿರುಗಿದ್ದ, ರೇಲ್ವೆ ನಿಲ್ದಾಣದಲ್ಲಿ ಈಗ ಗಾಂಧಿಯೇ ಸುಗಂಧ. ಬಾಪೂಜಿ ಈ ನಿಲ್ದಾಣಕ್ಕೆ ಬಂದ ನೆನಪುಗಳೆಲ್ಲ, ಕಲೆಯಲ್ಲಿ ದಾಖಲಾಗಿವೆ…

ಸಾಬರಮತಿಗೆ ಬಂದುಬಿಟ್ಟೆನಾ!?
ಈ ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ಹೀಗೆ ಅನ್ನಿಸುವುದು ಸಹಜ. ಎಲ್ಲೆಲ್ಲೂ ಗಾಂಧೀಜಿಯ ಚಿತ್ತಾರ. ಸ್ವಾತಂತ್ರ್ಯ ಪೂರ್ವದ ಸನ್ನಿವೇಶಗಳ ಸಂಭಾಷಣೆ. ಅಂದು ಬ್ರಿಟಿಷರ ವಿರುದ್ಧದ ಹೋರಾಟಗಳ ಚಿತ್ರಗಳೆಲ್ಲ ಕಣ್ಣ ಮುಂದೆ ರೈಲಿನ ಬೋಗಿಗಳ ರೀತಿ ಒಂದೊಂದಾಗಿ ಹಾದು ಹೋಗುತ್ತಾ, ಇಲ್ಲಿ ಗಾಂಧಿಲೋಕವನ್ನು ಪರಿಚಯಿಸುತ್ತಿವೆ.

ಬಿಸಿಲೂರು ಅಂತಲೇ ಆರೋಪ ಹೊತ್ತ, ರಾಯಚೂರು ರೇಲ್ವೆ ನಿಲ್ದಾಣದ ಬದಲಾದ ಚಿತ್ರವಿದು. ಗುಟ್ಕಾ ತಿಂದು, ಉಗಿದು, ಗೋಡೆಗಳೆಲ್ಲ ಕೆಂಬಣ್ಣಕ್ಕೆ ತಿರುಗಿದ್ದ, ರೇಲ್ವೆ ನಿಲ್ದಾಣದಲ್ಲಿ ಈಗ ಗಾಂಧಿಯೇ ಸುಗಂಧ. ಒಂದೊಂದು ಗೋಡೆಯೂ, ಒಂದು ಕ್ಷಣ ನಿಂತು, ಚರಿತ್ರೆಯ ದರ್ಶನ ಮಾಡಿಸುವಂತಿವೆ. ಬಾಪೂಜಿಯ ಜೀವನ ಚಿತ್ರಣವನ್ನು ತುಂಬಿಕೊಂಡ ಈ ಗೋಡೆಗಳನ್ನು, ಗಾಂಧೀಜಿ ರೈಲಿನಲ್ಲಿ ಕುಳಿತ ದೃಶ್ಯಗಳೇ ಹೆಚ್ಚಾಗಿ ಆವರಿಸಿಕೊಂಡಿವೆ. ಈ ಚಿತ್ರಗಳಿಗೆಲ್ಲ ನೆಪ, ಗಾಂಧೀಜಿ ಈ ರೇಲ್ವೆ ನಿಲ್ದಾಣಕ್ಕೆ ಬಂದಿದ್ದರು ಎಂಬುದು!

ಆಗ ದೇಶದಲ್ಲಿ ಮಹಾತ್ಮ ಗಾಂಧೀಜಿ ಸ್ವದೇಶಿ ಚಳವಳಿ ಆರಂಭಿಸಿದ್ದರು. ವಿದೇಶಿ ವಸ್ತುಗಳನ್ನು ತ್ಯಜಿಸುವಂತೆ ಕರೆ ನೀಡಿ, ದೇಶ ಸಂಚಾರ ಕೈಗೊಂಡಿದ್ದರು. ಹಾಗೆ ಹೋಗುವಾಗ ರಾಯಚೂರಿನ ಮೂಲಕ ರೈಲಿನಲ್ಲಿ ಹಾದು ಹೋಗಿದ್ದರು. ಅವರಿಗಾಗಿ ಸಹಸ್ರಾರು ದೇಶಪ್ರೇಮಿಗಳು ಈ ನಿಲ್ದಾಣದಲ್ಲಿ ಕಾದುನಿಂತಿದ್ದರಂತೆ. ಆದರೆ, ಸಮಯಾಭಾವದಿಂದ ಅವರು ಹೆಚ್ಚು ಕಾಲ ಇರಲಾಗಲಿಲ್ಲ. ರೈಲಿನಿಂದಲೇ ಸ್ವದೇಶಿ ಚಳವಳಿಗೆ ಬೆಂಬಲಿಸುವಂತೆ ಕರೆ ನೀಡಿದ್ದರು. ಕೆಲ ಯುವಕರನ್ನು ಹತ್ತಿರಕ್ಕೆ ಕರೆದು, ವಿದೇಶಿ ವಸ್ತುಗಳ ಬಳಕೆ ವಿರುದ್ಧ ಜಾಗೃತಿ ಮೂಡಿಸುವಂತೆ ಸೂಚಿಸಿದ್ದರು. ಆ ದೃಶ್ಯವೂ ಸೇರಿದಂತೆ, ಬಾಪೂಜಿಯವರ ಜೀವನವನ್ನು ಕಟ್ಟಿಕೊಡುವ ಹಲವು ವರ್ಣಚಿತ್ರಗಳು ಈ ನಿಲ್ದಾಣದಲ್ಲಿ ರಾರಾಜಿಸುತ್ತಿವೆ.

ಮಹಾತ್ಮ ಗಾಂಧೀಜಿಯವರ 150 ಜನ್ಮ ದಿನಾಚರಣೆ ಸ್ಮರಣಾರ್ಥ, ಕಳೆದವರ್ಷ ಕೇಂದ್ರ ಸರ್ಕಾರ ಅದ್ದೂರಿಯಾಗಿ ಆಚರಿಸಲು ಎಲ್ಲ ನಿಲ್ದಾಣಗಳಿಗೂ ಸೂಚಿಸಿತ್ತು. ಅದರಂತೆ ಗುಂತಕಲ್‌ ವಲಯಕ್ಕೆ ಬರುವ ರಾಯಚೂರು ರೇಲ್ವೆ ನಿಲ್ದಾಣ, ಹೀಗೆ ಗಾಂಧೀಜಿಯ ವಿಶೇಷ ದರ್ಶನದಿಂದ, ಜನರನ್ನು ಸೆಳೆಯುತ್ತಿದೆ. 10 ಕಲಾವಿದರ ತಂಡ, ಹತ್ತು ದಿನಗಳ ಕಾಲ ಚಿತ್ರಗಳನ್ನು ಬಿಡಿಸಿದ್ದು, ಪ್ರತಿ ಪಯಣಿಗನಿಗೂ ನೆನಪಿನಲ್ಲಿ ಉಳಿಯುವ ಸ್ಟೇಷನ್ನಾಗಿ, ಈ ನಿಲ್ದಾಣ ರೂಪುಗೊಂಡಿದೆ.

ಉತ್ತರ ಭಾರತದಿಂದ ದಕ್ಷಿಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ಮಾರ್ಗ ಇದಾಗಿದ್ದು, ನಿತ್ಯ ಸಹಸ್ರಾರು ಪ್ರಯಾಣಿಕರು ಓಡಾಡುತ್ತಾರೆ. ಅಂಥ ಪ್ರಯಾಣಿಕರಿಗೆ ಈ ದೃಶ್ಯಗಳು ತುಂಬಾ ಮುದ ನೀಡುತ್ತಿವೆ. ಕೆಲವರು ರೈಲಿನಿಂದ ಇಳಿದು ಸೆಲ್ಫಿ ತೆಗೆದುಕೊಂಡು, ಪುನಃ ರೈಲನ್ನೇರುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿದೆ.

ಗಾಂಧಿಯ ನಾನಾ ರೂಪ…
ಗಾಂಧೀಜಿ ಚರಕದ ಮುಂದೆ ಕುಳಿತು ಬಟ್ಟೆ ನೇಯುವುದು; ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ದೃಶ್ಯಗಳು, ಪ್ರಾಣಿಹಿಂಸೆ ವಿರೋಧಿಸುತ್ತಿರುವುದು, ಪಾದಯಾತ್ರೆಯ ಚಿತ್ರಾವಳಿ, ರೈಲಲ್ಲಿ ಚಲಿಸುವ ದೃಶ್ಯಗಳು… ಇವೆಲ್ಲವೂ ಇಲ್ಲಿ ವರ್ಣಚಿತ್ರಗಳಾಗಿ, ಗೋಡೆಯ ಅಂದ ಹೆಚ್ಚಿಸಿವೆ.

– ಸಿದ್ಧಯ್ಯಸ್ವಾಮಿ ಕುಕುನೂರು
– ಚಿತ್ರಗಳು: ಸಂತೋಷ ಸಾಗರ್‌

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.