ಆಟೋ ರಿಕ್ಷಾ ನಿಲ್ದಾಣದಲ್ಲಿ ಆರೋಗ್ಯ ಪಾಠ !

ಹಕ್ಕಿಗಳ ಚಿಲಿಪಿಲಿ; ಚಾಲಕರ ಸಾಮಾಜಿಕ ಕಳಕಳಿ

Team Udayavani, Sep 21, 2019, 5:45 AM IST

AUTO-A

ಮಣೋಳಿಗುಜ್ಜಿ ಆಟೋರಿಕ್ಷಾ ನಿಲ್ದಾಣದಲ್ಲಿರುವ ಹಕ್ಕಿಗಳ ಗೂಡು.

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ದೊಡ್ಡಣಗುಡ್ಡೆ ಮಣ್ಣೋಳಿಗುಜ್ಜಿ ಆಟೋರಿಕ್ಷಾ ನಿಲ್ದಾಣವು ಸಾರ್ವಜನಿಕರಿಗೆ ಆರೋಗ್ಯ ಪಾಠ, ಹಕ್ಕಿಗಳ ಕಲರವದಿಂದ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುತ್ತಿದೆ.

“ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎಂಬ ಶೀರ್ಷಿಕೆಯ, 42 ಅಡಿ ಉದ್ದದ ಫ‌ಲಕವು 100ಕ್ಕೂ ಅಧಿಕ ಹಣ್ಣು ಹಂಪಲು, ತರಕಾರಿಗಳ ಕುರಿತಾದ ಚಿತ್ರ ಸಹಿತ ಮಾಹಿತಿ ನೀಡುತ್ತಿದೆ. ಇದನ್ನು ತಿಳಿದುಕೊಳ್ಳಲೆಂದು ಅನೇಕ ಮಂದಿ ಸಾರ್ವಜನಿಕರು ಇಲ್ಲಿಗೆ ಆಗಮಿಸುತ್ತಾರೆ. ಮೊದಲು ಮನೆ ಮದ್ದು ಕುರಿತಾದ ಮಾಹಿತಿಯ ಬೃಹತ್‌ ಫ‌ಲಕ. ಇದೀಗ ತರಕಾರಿ, ಹಣ್ಣುಹಂಪಲುಗಳ ಸಮಗ್ರ ಮಾಹಿತಿ ನೀಡಲಾಗುತ್ತಿದೆ.

ಹಕ್ಕಿಗಳ ಆಕರ್ಷಣೆ
ಹಕ್ಕಿಗಳ ಮೇಲಿನ ಪ್ರೀತಿ ಇಲ್ಲಿನ ಆಟೋ ಚಾಲಕರ ಇನ್ನೊಂದು ವಿಶೇಷ. ಹಿಂದೆ ಇಲ್ಲಿ ಸಣ್ಣ ಗೂಡಿತ್ತು. ಅದರಲ್ಲಿ 10 ಲವ್‌ ಬರ್ಡ್ಸ್‌ಗಳಿದ್ದವು. ಅನಂತರ 7 ಉಳಿದವು. ಅವುಗಳು ಮೊಟ್ಟೆ ಇಟ್ಟು ಒಟ್ಟು ಹಕ್ಕಿಗಳ ಸಂಖ್ಯೆ 21ಕ್ಕೇರಿತು. ಈಗ ದೊಡ್ಡ ಗೂಡು ನಿರ್ಮಿಸಲಾಗಿದೆ. ಇದು ಈಗ ಮಕ್ಕಳು, ಸಾರ್ವಜನಿಕರ ಆಕರ್ಷಣೆಯ ಕೇಂದ್ರ. ಇಲ್ಲಿನ ರಸ್ತೆಗಳಲ್ಲಿ ವಾಕಿಂಗ್‌ ಬರುವವರು, ಪ್ರಯಾಣಿಕರು ಕೂಡ ನಿಲ್ದಾಣದ ಬೆಂಚ್‌ನಲ್ಲಿ ವಿಶ್ರಾಂತಿ ಪಡೆದು ಆರೋಗ್ಯ ಕುರಿತಾದ ಫ‌ಲಕದತ್ತ ದೃಷ್ಟಿ ಹಾಯಿಸುತ್ತಾರೆ, ಹಕ್ಕಿಗಳೊಂದಿಗೆ ಸಮಯ ಕಳೆಯುತ್ತಾರೆ.

ಸಮಾಜಕ್ಕಾಗಿ…
ಇಲ್ಲಿನ ಚಾಲಕರು ಶಾಲೆಗಳಿಗೆ ನಿರಂತರವಾಗಿ ಸಹಾಯಹಸ್ತ ಚಾಚುತ್ತಾ ಬಂದಿದ್ದಾರೆ. ಕರಂಬಳ್ಳಿ ಸರಕಾರಿ ಪ್ರಾಥಮಿಕ ಶಾಲೆ, ದೊಡ್ಡಣಗುಡ್ಡೆ, ಗುಂಡಿಬೈಲು ಶಾಲೆಗಳಿಗೆ ರೈನ್‌ಕೋಟ್‌, ಕಪಾಟು, ಬ್ಯಾಗ್‌ ಇತ್ಯಾದಿ ಪರಿಕರಗಳನ್ನು ನೀಡುತ್ತಿದ್ದಾರೆ. ಪಕ್ಕದ ಕರಂಬಳ್ಳಿ ಸರಕಾರಿ ಶಾಲೆಯವರು ಬೇಡಿಕೆ ಇಡುವ ಪರಿಕರಗಳನ್ನು ಒದಗಿಸುತ್ತಿದ್ದಾರೆ. ನಿಲ್ದಾಣದೊಳಗೆ ಸೋಲಾರ್‌ ಬೆಳಕು ಅಳವಡಿಸಲಾಗಿದೆ.

ಬಡ ವಿದ್ಯಾರ್ಥಿನಿಗೆ
ಪದವಿ ಶಿಕ್ಷಣ
ರಥಬೀದಿಯ ರಿಕ್ಷಾ ನಿಲ್ದಾಣದ ಚಾಲಕನೋರ್ವರು ಅಪಘಾತದಿಂದ ಗಾಯಗೊಂಡು ದುಡಿಯಲಾಗದ ಸ್ಥಿತಿಯಲ್ಲಿದ್ದಾಗ ಅವರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ದೊಡ್ಡಣಗುಡ್ಡೆ ಆಸ್ಪತ್ರೆ ಸಮೀಪದಲ್ಲಿ ತಾಯಿ ಮತ್ತು ಮಗಳು ಮಾತ್ರ ವಾಸವಿದ್ದು ಆರ್ಥಿಕವಾಗಿ ತೀರಾ ಸಮಸ್ಯೆಯಲ್ಲಿದ್ದರು. ಮಗಳ ವಿದ್ಯಾಭ್ಯಾಸಕ್ಕಾಗಿ 5 ವರ್ಷ ಇಲ್ಲಿನ ಚಾಲಕರು ಆರ್ಥಿಕ ಸಹಾಯ ಮಾಡಿದ್ದರು. ಆಕೆ ಈಗ ಪದವಿ ಮುಗಿಸಿದ್ದಾಳೆ. ಕರಂಬಳ್ಳಿ ರಾಮ್‌ ಬೆಟ್ಟುವಿನಲ್ಲಿ ಅಂಗವಿಕಲ ತಾಯಿ ಮಗಳ ಕುಟುಂಬಕ್ಕೆ ವೀಲ್‌ಚೇರ್‌, ಇನ್ನು ಕೆಲವು ಕುಟುಂಬಗಳಿಗೆ ಅಕ್ಕಿ ಇತ್ಯಾದಿ ಸೇವಾ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ.

ಪ್ರತಿ ತಿಂಗಳು 200 ರೂ. ಪ್ರತ್ಯೇಕ ಖಾತೆಯಲ್ಲಿ ಜಮೆ
ಸಾಮಾಜಿಕ ಸೇವಾ ಕಾರ್ಯವೂ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಆಯೋಜನೆ, ಹಕ್ಕಿಗಳ ಸಾಕಣೆ, ನಿಲ್ದಾಣದ ಒಟ್ಟಾರೆ ನಿರ್ವಹಣೆಗಾಗಿ ಚಾಲಕರು ತಮ್ಮ ದುಡಿಮೆಯಲ್ಲಿ ಪ್ರತೀ ತಿಂಗಳು 200 ರೂ.ಗಳನ್ನು ಪ್ರತ್ಯೇಕ ಖಾತೆಯಲ್ಲಿ ಜಮೆ ಮಾಡುತ್ತಾರೆ. ಇದಕ್ಕೆ ಕೆಲವು ದಾನಿಗಳೂ ಕೈ ಜೋಡಿಸುತ್ತಾರೆ. ಈ ಆಟೋ ನಿಲ್ದಾಣಕ್ಕೆ ರಥಬೀದಿಯ ಗಣೇಶೋತ್ಸವ ಸಮಿತಿಯಿಂದ ಉತ್ತಮ ಆಟೋ ನಿಲ್ದಾಣ ಎಂಬ ಬಹುಮಾನವೂ ದೊರೆತಿದೆ. ಆಟೋ ರಿಕ್ಷಾ ನಿಲ್ದಾಣದಿಂದ ಕೇವಲ ಆಟೋ ಬಾಡಿಗೆ ಮಾತ್ರ ದೊರೆಯದೆ ಸಾರ್ವಜನಿಕರಿಗೆ ಇತರ ಉಪಯೋಗಗಳು ದೊರೆಯಬೇಕು ಎಂಬುದು ನಮ್ಮ ಇಚ್ಛೆ. ನಮ್ಮ ನಿಲ್ದಾಣವನ್ನು ಕೂಡ ಜನ ನೋಡಬೇಕು. ಇಲ್ಲಿಗೆ ಆಗಮಿಸಬೇಕು ಎಂಬ ಉದ್ದೇಶದಿಂದ ಆರೋಗ್ಯ ಮಾಹಿತಿ, ಹಕ್ಕಿಗೂಡು ಇತ್ಯಾದಿಗಳನ್ನು ಕೂಡ ಮಾಡಿದ್ದೇವೆ
– ಉದಯ್‌, ಮಣೋಳಿಗುಜ್ಜಿ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ

-ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.