ಪ್ಲಾಸ್ಟಿಕ್‌ಗೆ ಹೇಳಿ ಗುಡ್‌ ಬೈ

ಇಲ್ಲಿದೆ ಪರ್ಯಾಯ ಮಾರ್ಗಗಳು

Team Udayavani, Sep 21, 2019, 5:02 AM IST

u-37

ಪ್ಲಾಸ್ಟಿಕ್‌ನ ಉಪಯೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ನಾಶವಾಗದೆ ಮಣ್ಣಿನಲ್ಲಿ ಸೇರಿ ಅನೇಕ ಸಮಸ್ಯೆಗೆ ಕಾರಣವಾಗುವುದಲ್ಲದೆ ಉರಿಸಿದಾಗ ಇದರಿಂದ ಹೊರಬರುವ ಹೊಗೆ ವಾತಾವರಣವನ್ನೇ ಕಲುಷಿತಗೊಳಿಸುತ್ತದೆ. ಈ ಎಲ್ಲ ಕಾರಣಗಳಿಂದ ಕೇಂದ್ರ ಸರಕಾರ ಪ್ಲಾಸ್ಟಿಕ್‌ ಉಪಯೋಗಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಅ. 2ರಿಂದ ಪ್ಲಾಸ್ಟಿಕ್‌ನ ಕೆಲವು ವಸ್ತುಗಳು ನಿಷೇಧವಾಗಲಿದೆ. ಈ ಎಲ್ಲ ಕಾರಣಗಳಿಂದ ನಾವು ಕೂಡಾ ಮನೆಯಲ್ಲಿ ಪ್ಲಾಸ್ಟಿಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ಅದಕ್ಕೆ ಕೆಲವು ಟಿಪ್ಸ್‌ ಇಲ್ಲಿದೆ:

· ಪ್ಲಾಸ್ಟಿಕ್‌ ಬಾಟಲ್‌ಗೆ ಹೇಳಿ ಗುಡ್‌ಬೈ:
ಸಾಧಾರಣವಾಗಿ ನಾವು ಪ್ಲಾಸ್ಟಿಕ್‌ ಬಾಟಲ್‌ ನೀರು ಬಳಸುತ್ತೇವೆ. ಇದು ಕ್ರಮೇಣ ಆರೋಗ್ಯಕ್ಕೆ ಹಾನಿಕಾರಕವಾಗಿ ಬದಲಾಗುತ್ತದೆ. ಆದ್ದರಿಂದ ಗಾಜಿನ ಬಾಟಲ್‌ ಅಥವಾ ಸ್ಟೀಲ್‌ ಬಾಟಲ್‌ ಬಳಸಬಹುದು. ಇದು ನಿಮ್ಮ ಆರೋಗ್ಯಕ್ಕೂ ಪರಿಸರಕ್ಕೂ ಪೂರಕ.

· ಕಸ ಹಾಕುವ ಚೀಲ ಬದಲಿಸಿ:
ಸಾಮಾನ್ಯವಾಗಿ ಮನೆಗಳಲ್ಲಿ ಕಸ ಸಂಗ್ರಹಿಸಲು ಪ್ಲಾಸಿಕ್‌ ಕವರ್‌ಗಳನ್ನು ಬಳಸಲಾಗುತ್ತದೆ. ಇದರ ಬದಲು ಪೇಪರ್‌ ಚೀಲ ಇಲ್ಲವೆ ಬಟ್ಟೆ ಚೀಲ ಬಳಸಲು ಪ್ರಯತ್ನಿಸಿ.

·ಬ್ರಷ್‌ ಬದಲಿಸಿ:
ನಿಮಗೆ ಗೊತ್ತೆ? ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಟೂತ್‌ ಬ್ರಷ್‌ ಕರಗಲು ಸುಮಾರು ನಾಲ್ಕು ಶತಮಾನಗಳೇ ಬೇಕು! ಈಗ ಯೋಚಿಸಿ ನಾವು ಎಷ್ಟರ ಮಟ್ಟಿಗೆ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದೇವೆ ಎನ್ನುವುದನ್ನು. ಮಾರುಕಟ್ಟೆಯಲ್ಲಿ ಬಿದಿರಿನಿಂದ ಮಾಡಿದ ಟೂತ್‌ ಬ್ರಷ್‌ಗಳು ಲಭ್ಯ. ಅವುಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಳ್ಳಿ.

·ನೈಸರ್ಗಿಕ ಪಾನೀಯ ಬಳಸಿ:
ಲಘು ಪಾನೀಗಳು ರಾಸಾಯನಿಕ ಯುಕ್ತವಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಅಲ್ಲದೆ ಇವುಗಳು ಪ್ಲಾಸ್ಟಿಕ್‌ ಬಾಟಲ್‌ಗ‌ಳಲ್ಲಿ ಪ್ಯಾಕ್‌ ಆಗುವುದರಿಂದ ಬಳಕೆ ಅನಂತರ ನೇರ ಪರಿಸರಕ್ಕೆ ಸೇರಿ ಹಾನಿಯುಂಟು ಮಾಡುತ್ತವೆ. ಆದ್ದರಿಂದ ಅವುಗಳನ್ನು ಬಿಟ್ಟು ಎಳನೀರು, ನಿಂಬೆ ಷರಬತ್ತು ಮುಂತಾದ ಪಾನೀಯಗಳಿಗೆ ಆದ್ಯತೆ ನೀಡಿ.

·ಏರ್‌ ಪ್ಯೂರಿಫೈ ಮರೆತು ಬಿಡಿ:
ಸಾಧಾರಣವಾಗಿ ಏರ್‌ಪ್ಯೂರಿಫೈಗಳು ಪ್ಲಾಸ್ಟಿಕ್‌ ಬಾಟಲ್‌ಗ‌ಳಲ್ಲಿರುತ್ತವೆ. ಆದ್ದರಿಂದ ಅದರ ಬಳಕೆ ನಿಲ್ಲಿಸುವುದು ಉತ್ತಮ. ಅದರ ಬದಲಾಗಿ ಅಗರಬತ್ತಿಗಳನ್ನು ಬಳಸಬಹುದು.

·ಅಂಟುವಾಳ(ಸೋಪ್‌ ನಟ್‌)ಬಳಸಿ:
ಬಟ್ಟೆ, ಪಾತ್ರೆ ತೊಳೆಯಲು ರಾಸಾಯನಿಕ ಯುಕ್ತ ಸಾಬೂನು ಬದಲು ಅಂಟುವಾಳ ಬಳಸಬಹುದು. ಇದರಿಂದ ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ. ಅಲ್ಲದೆ ಇದರ ಕಾಯಿಗಾಗಿ ಮರ ಬೆಳೆಸುವುದರಿಂದ ಉತ್ತಮ ವಾತಾವರಣವೂ ದೊರೆತಂತಾಗುತ್ತದೆ. ಮನೆ ಹಿತ್ತಿಲಿನಲ್ಲಿ ಇತರ ಮರದ ಜತೆಗೆ ಅಂಟುವಾಳದ ಮರವನ್ನೂ ಬೆಳೆಸಿ. ಅಲ್ಲದೆ ಇದರಲ್ಲಿ ಸಾಬೂನಿನಷ್ಟು ಅಪಾರ ಪ್ರಮಾಣದಲ್ಲಿ ನೊರೆ ಉತ್ಪತ್ತಿಯಾಗದಿರುವುದರಿಂದ ಪಾತ್ರೆ ತೊಳೆಯಲು ಕಡಿಮೆ ಪ್ರಮಾಣದ ನೀರು ಸಾಕಾಗುತ್ತದೆ.

ಇದು ಮಾತ್ರವಲ್ಲದೆ ಶಾಪಿಂಗ್‌ಗೆ ಹೋಗುವಾಗ ಬಟ್ಟೆಯ ಚೀಲ ತೆಗೆದುಕೊಂಡು ಹೋಗುವುದರಿಂದ, ಬಾಲ್‌ ಪೆನ್‌ ಬದಲು ಶಾಯಿ ಪೆನ್‌ ಬಳಕೆ ಅಭ್ಯಾಸ ಮಾಡುವುದರಿಂದ ಪ್ಲಾಸ್ಟಿಕ್‌ ಬಳಕೆಯನ್ನು ನಿಯಂತ್ರಿಸಬಹುದು.

-  ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.