ಚೀನ ಓಪನ್ ಬ್ಯಾಡ್ಮಿಂಟನ್: ಪ್ರಣೀತ್ ಪರಾಭವ
Team Udayavani, Sep 21, 2019, 5:17 AM IST
ಚಾಂಗ್‌ಜೂ (ಚೀನ): “ಚೀನ ಓಪನ್ ವರ್ಲ್ಡ್ ಟೂರ್ ಸೂಪರ್-1000′ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಆಟ ಕೊನೆಗೊಂಡಿದೆ. ಶುಕ್ರವಾರ ಪುರು ಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಬಿ. ಸಾಯಿಪ್ರಣೀತ್ ಪರಾಭವಗೊಳ್ಳುವುದರೊಂದಿಗೆ ಭಾರತದ ಕೊನೆಯ ಭರವಸೆಯೂ ಕಮರಿತು.
ಸಾಯಿಪ್ರಣೀತ್ ಅವರನ್ನು ವಿಶ್ವದ 9ನೇ ರ್‍ಯಾಂಕಿಂಗ್ ಶಟ್ಲರ್, ಇಂಡೋ ನೇಶ್ಯದ ಆ್ಯಂಟನಿ ಸಿನಿಸುಕ ಗಿಂಟಿಂಗ್ ಭಾರೀ ಹೋರಾಟದ ಬಳಿಕ 21-16, 6-21, 16-21 ಅಂತರದಿಂದ ಪರಾಭವಗೊಳಿಸಿದರು. 55 ನಿಮಿಷಗಳ ಕಾಲ ಇವರ ಹೋರಾಟ ಜಾರಿ ಯಲ್ಲಿತ್ತು. ಗಿಂಟಿಂಗ್ ಅವರಿನ್ನು ಡೆನ್ಮಾರ್ಕ್ ನ 8ನೇ ಶ್ರೇಯಾಂಕಿತ ಆಟಗಾರ ಆ್ಯಂಡರ್ ಆ್ಯಂಟನ್ಸೆನ್ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ. ಆ್ಯಂಟನ್ಸೆನ್ ಕಳೆದ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಆರಂಭಿಕ ಮೇಲುಗೈ
ಈ ವರ್ಷಾರಂಭದಲ್ಲಿ ಸ್ವಿಸ್ ಓಪನ್ ಫೈನಲ್ ತಲುಪಿದ್ದ ಸಾಯಿ ಪ್ರಣೀತ್, ಗಿಂಟಿಂಗ್ ವಿರುದ್ಧ 3-2 ಗೆಲುವಿನ ದಾಖಲೆಯೊಂದಿಗೆ ಆಡಲಿಳಿದಿದ್ದರು. ಮೊದಲ ಗೇಮ್ ವಶಪಡಿಸಿಕೊಂಡ ಸಾಯಿಪ್ರಣೀತ್, ಇಂಡೋನೇಶ್ಯನ್ ಆಟಗಾರನ ವಿರುದ್ಧ ಮೇಲುಗೈ ಸಾಧಿಸುವ ನಿರೀಕ್ಷೆ ಬಲವಾಗಿತ್ತು. ಆದರೆ ಹಿನ್ನಡೆಯ ಬಳಿಕ ಎಚ್ಚೆತ್ತುಕೊಂಡ ಸಿನಿಸುಕ ತಿರುಗಿ ಬಿದ್ದರು.
ಕಳೆದ ತಿಂಗಳಷ್ಟೇ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತನಕ ಸಾಗಿದ್ದ ಸಾಯಿ ಪ್ರಣೀತ್ 36 ವರ್ಷ ಕಾಯು ವಿಕೆಯ ಬಳಿಕ ಭಾರತದ ಪುರುಷರ ಸಿಂಗಲ್ಸ್ ಪದಕದ ಬರವನ್ನು ನೀಗಿಸಿದ್ದರು. 1983ರಲ್ಲಿ ಪ್ರಕಾಶ್ ಪಡುಕೋಣೆ ಕಂಚು ಗೆದ್ದ ಬಳಿಕ ಸಾಯಿಪ್ರಣೀತ್ ಅವರದೇ ಪದಕದ ಸಾಧನೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.