ಮಿಶ್ರ ಬೆಳೆಯಿಂದ ಹೆಚ್ಚು ಆದಾಯ


Team Udayavani, Sep 22, 2019, 5:00 AM IST

x-22

ಶ್ರೀಗಂಧ ಬೆಳೆಯುತ್ತಿದ್ದ ಕೃಷಿಕ ಸಂಜಯ್‌ ಪಂಚಗಾಂವಿಯವರು, ಅದರ ಜತೆಗೆ ಮಿಶ್ರ ಬೆಳೆ ಹಾಕಲು ನಿರ್ಧರಿಸಿದರು. ಏನನ್ನು ಬೆಳೆಸಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಸಿ, ಅದರ ಸಾಧ್ಯತೆ ಬಾಧ್ಯತೆ ಎಲ್ಲವನ್ನೂ ಅಳೆದು ತೂಗಿ ಹತ್ತಾರು ಗಿಡಮರಗಳನ್ನು ವ್ಯವಸ್ಥಿತವಾಗಿ ಬೆಳೆಸಿದ್ದಾರೆ. ನೈಸರ್ಗಿಕ ವಿಧಾನಗಳನ್ನು ಅನುಸರಿಸುತ್ತಿರುವುದರಿಂದ ಖರ್ಚು ಗಣನೀಯವಾಗಿ ಕಡಿಮೆಯಾಗಿದೆ.

ಸಂಜಯ್‌ ಮೂಲತಃ ಓರ್ವ ಎಂಜಿನಿಯರ್‌ ಆಗಿದ್ದರೂ, ಕೃಷಿಯಲ್ಲಿ ಏನಾದರೂ ಮಾಡಲೇಬೇಕು ಎಂಬ ತುಡಿತದಿಂದ ತಮ್ಮ 24 ಎಕರೆ ತೋಟದಲ್ಲಿ ಸುಧಾರಣೆ ತರುವ ಪ್ರಯತ್ನಕ್ಕೆ ಮುಂದಾದರು. ಇದಕ್ಕೆ ಅವರ ತಂದೆ ಬಸಪ್ಪ ಪಂಚಗಾಂವಿ ಹಾಗೂ ಸಹೋದರರಾದ ಸಂಗಪ್ಪ ಪಂಚಗಾಂವಿ, ರಮೇಶ್‌ ಪಂಚಗಾಂವಿಯವರ ಬೆಂಬಲ ಸಿಕ್ಕಿತು.

ಅಪರೂಪದ ಹಣ್ಣಿನ ತಳಿಗಳು
ಈ ತೋಟದಲ್ಲಿ ಒಟ್ಟು 7,000 ಶ್ರೀಗಂಧದ ಮರಗಳಿವೆ. ಜತೆಗೆ 2,500 ಸಾವಿರ ಪೇರಲ ಗಿಡಗಳು, 1,250 ಜಂಬು ನೇರಳೆ ಗಿಡಗಳು, 1,200 ತೈವಾನ್‌ ಪಪ್ಪಾಯ, 1,500 ಕೇಸರ್‌ ಮಾವಿನ ಗಿಡಗಳು, 800 ಆಪೂಸ್‌ ಮಾವಿನ ಗಿಡಗಳು, 300 ಹಿಮ್‌ಸಾಗರ ಮಾವಿನ ಗಿಡಗಳು, 1,000 ನುಗ್ಗೆ ಗಿಡಗಳೂ ಇವೆ. ಇದರ ಜತೆಗೆ ಆ್ಯಪಲ…, ವೈಟ್‌ ನೇರಳೆ, ಸೀತಾಫ‌ಲ, ರಾಮಫ‌ಲ, ಲಕ್ಷ್ಮಣ ಫ‌ಲ, ಹನುಮಾನ್‌ ಫ‌ಲ, ನಿಂಬು, ಕಿತ್ತಳೆ, ಮೂಸಂಬಿ, ಸ್ಟ್ರಾಬೆರಿ ಮುಂತಾದವುಗಳಿವೆ. ದುಬಾರಿ ಮಾವಿನ ಹಣ್ಣಿನ ತಳಿ ಎನಿಸಿರುವ ಪರ್ಪಲ್‌ ಮ್ಯಾಂಗೊ, ಮಾಲ್ಟಾ, ಡ್ರಾಗನ್‌ ಫ್ರುಟ್‌ ಮುಂತಾದವೂ ಇಲ್ಲಿವೆ.

ರಿಸ್ಕ್ ಇಲ್ಲ
ಈ ತೋಟದ ನಿರ್ವಹಣಾ ವೆಚ್ಚ ತುಂಬಾ ಕಮ್ಮಿ. ಪೂರ್ತಿ ನೈಸರ್ಗಿಕ ಕೃಷಿ ಅಳವಡಿಸಿರುವುದರಿಂದ ರಾಸಾಯನಿಕ ಗೊಬ್ಬರಗಳ ಖರ್ಚು ಉಳಿದ ಹಾಗಾಯಿತು. ನಿರಂತರವಾಗಿ ಜೀವಾಮೃತವನ್ನು ಸಿಂಪಡಣೆ ಮತ್ತು ನೀರಿನ ಮೂಲಕವೂ ಉಣಿಸುತ್ತಿದ್ದಾರೆ. ಪಪ್ಪಾಯಕ್ಕೆ ಬರುವ ವೈರಸ್‌ ಕಾಟ ಒಂದು ಬಿಟ್ಟರೆ ತೋಟ ನಿರ್ವಹಿಸಲು ಇನ್ಯಾವ ತೊಂದರೆಯೂ ಬಂದಿಲ್ಲ. ಬರೀ ಅಡಕೆ, ಬರೀ ತೆಂಗು ಹೀಗೆ ಒಂದೇ ಬೆಳೆ ಬೆಳೆದು ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಮಿಶ್ರ ಬೆಳೆ ಬೆಳೆದರೆ ರೈತನಿಗೆ ಭದ್ರತೆ ಇರುತ್ತದೆ ಎನ್ನುವುದಕ್ಕೆ ಸಂಜಯ್‌ ಅವರೇ ಸಾಕ್ಷಿ.

ಕೈ ಕೊಡದ ಪಪ್ಪಾಯ
ಇವಿಷ್ಟು ಬೆಳೆಗಳಲ್ಲಿ ರೆಡ್‌ಲೇಡಿ ಪಪ್ಪಾಯದಿಂದ ಒಳ್ಳೆಯ ದುಡ್ಡು ಬರತೊಡಗಿದೆ. ಒಟ್ಟು 24 ಎಕರೆಯಲ್ಲಿ ಶ್ರೀಗಂಧದ ನಡುವೆ ಬೆಳೆಸಿರುವ 12 ಸಾವಿರ ಪಪ್ಪಾಯ ಗಿಡಗಳಿಂದ ಈಗಾಗಲೇ ಸುಮಾರು 15 ಟನ್‌ ಇಳುವರಿ ಬಂದಿದೆ. ಶುರುವಿನಲ್ಲಿ ಕೆ.ಜಿ. ಹಣ್ಣಿಗೆ 7-8 ರೂ.ಇದ್ದಿದ್ದು ಈಗ 25 ರೂ. ವರೆಗೆ ಹೋಗಿದೆ. ದರ ಜಾಸ್ತಿಯಾದ ಸಮಯದಲ್ಲೇ ಇವರ ತೋಟದಿಂದ ಹಣ್ಣಿನ ಇಳುವರಿ ಜಾಸ್ತಿಯಾಗಿರುವುದರಿಂದ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಒಂದು ಟನ್‌ಗೆ 25 ಸಾವಿರ ರೂ.ನಂತೆ ಪಪ್ಪಾಯ ಮಾರಾಟವಾಗಿದೆ.

– ಎಸ್‌. ಕೆ. ಪಾಟೀಲ್‌

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.