ರೈತರಿಗೂ ಪಿಂಚಣಿ ನೀಡುವ ಕಿಸಾನ್ ಮಾನ್ ಧನ್
Team Udayavani, Sep 22, 2019, 5:04 AM IST
ದೇಶದ ಬೆನ್ನೆಲುಬು ರೈತನಿಗೂ ಇನ್ನು ಪಿಂಚಣಿ ಸಿಗಲಿದೆ. ಕಿಸಾನ್ ಮಾನ್ ಧನ್ ಪಿಂಚಣಿ ಯೋಜನೆಗೆ ಇತ್ತೀಚೆಗೆ ಚಾಲನೆ ನೀಡಲಾಗಿದ್ದು, ಕೃಷಿಕನಿಗೆ ಬೆಂಬಲ ನೀಡಲು ಮಾಸಿಕವಾಗಿ 3,000 ರೂ.ಅನ್ನು ಪಿಂಚಣಿ ರೂಪದಲ್ಲಿ ನೀಡಲಿದೆ. ಹಾಗಾದರೆ ಏನಿದು ಯೋಜನೆ? ಯಾರೆಲ್ಲ ಈ ಯೋಜನೆಯಡಿಗೆ ಬರುತ್ತಾರೆ? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ.
ಏನಿದು ಯೋಜನೆ?
ಸಂಪೂರ್ಣ ಕೇಂದ್ರ ಸರಕಾರದ ಯೋಜನೆ. ಕೃಷಿಕರಿಗೆ ಇಳಿವಯಸ್ಸಿನಲ್ಲಿ ಪ್ರಯೋಜನವಾಗಲಿ ಎಂದು ಹಮ್ಮಿಕೊಳ್ಳಲಾಗಿದೆ. ರೈತರು ನಿರ್ದಿಷ್ಟ ಕಂತು ಪಾವತಿಸಿದರೆ, ಅಷ್ಟೇ ಮೊತ್ತವನ್ನು ಕೇಂದ್ರ ಸರಕಾರವೂ ಅವರ ಖಾತೆಗೆ ಹಾಕುತ್ತ ಹೋಗುತ್ತದೆ. ಅಲ್ಲದೇ ಅಗತ್ಯವಿದ್ದರೆ, ರೈತರು ತಾವು ಹಾಕಿದ ಹಣ ವಾಪಸ್ ಪಡೆಯಲೂ ಅವಕಾಶವಿದೆ. ಯೋಜನೆ ಸುಮಾರು 5 ಕೋಟಿಯಷ್ಟು ಸಾಮಾನ್ಯ ರೈತರಿಗೆ ಅನುಕೂಲ ಕಲ್ಪಿಸಲಿದೆ. ಮುಂದಿನ 3 ವರ್ಷಗಳಲ್ಲಿ ಇದಕ್ಕಾಗಿ ಕೇಂದ್ರ ಸರಕಾರ 10,774 ಕೋಟಿ ರೂ. ವಿನಿಯೋಗಿಸಲಿದೆ.
ಹಣ ಪಾವತಿ ಹೇಗೆ?
ರೈತರು ತಮ್ಮ ವಯಸ್ಸಿಗೆ ಅನುಗುಣವಾಗಿ 55 ರೂ.ನಿಂದ 200 ರೂ. ವರೆಗೆ ಮಾಸಿಕ ಕಂತುಗಳನ್ನು 60ನೇ ವಯಸ್ಸಿನ ವರೆಗೆ ಪಾವತಿಸಬೇಕು. 60 ವರ್ಷದ ಬಳಿಕ ಸರಕಾರ ಮಾಸಿಕವಾಗಿ 3,000 ರೂ.ಗಳನ್ನು ಪಿಂಚಣಿ ರೂಪದಲ್ಲಿ ನಿಮ್ಮ ಖಾತೆಗೆ ನೀಡುತ್ತದೆ.
ಸರಕಾರದ ಪಾಲೂ ಇದೆ
ರೈತರು ಪಾವತಿಸುವ ಕಂತಿನ ಹಣಕ್ಕೆ ಸಮನಾಗಿ ಕೇಂದ್ರ ಸರಕಾರವೂ ಹಣ ಸೇರಿಸುತ್ತದೆ. ಉದಾ: ರೈತ ಮಾಸಿಕ 200 ರೂ. ಪಾವತಿ ಮಾಡುತ್ತಿದ್ದರೆ ರೈತನ 200 ಮತ್ತು ಸರಕಾರ 200 ರೂ. ಸೇರಿಸಿ ಒಟ್ಟು 400 ರೂ. ರೈತರ ಖಾತೆಯಲ್ಲಿ ಜಮೆಯಾಗುತ್ತದೆ.
ನೋಂದಣಿಗೆ ಏನೆಲ್ಲ ಅಗತ್ಯ
ಆಧಾರ್ ಕಾರ್ಡ್, ಆದಾಯ ದೃಢೀಕರಣ ಪತ್ರ, ಪಡಿತರ ಚೀಟಿ (ರೇಶನ್ ಕಾರ್ಡ್), 2 ಭಾವ ಚಿತ್ರಗಳು, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಬೇಕಾಗುತ್ತದೆ.
ನೋಂದಣಿ ಹೇಗೆ?
ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ದ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ (ಪಿಎಂ-ಕೆಎಂವೈ) ನಲ್ಲಿ ರೈತರು ಯಾವುದೇ ಶುಲ್ಕ ನೀಡದೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಈ ಯೋಜನೆ ಉದ್ದೇಶ?
ರೈತರ ಆದಾಯವನ್ನು ಮುಂದಿನ 5 ವರ್ಷಗಳಲ್ಲಿ ದುಪ್ಪಟ್ಟುಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ. ಕೃಷಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ.
ವಿಪತ್ತು ಸಂಭವಿಸಿದರೆ?
ರೈತನಿಗೆ ಮಾತ್ರವಲ್ಲ, ಆತನ ಪತ್ನಿಗೂ ಯೋಜನೆ ಲಾಭ ದೊರಕುವಂತೆ ರೂಪಿಸಲಾಗಿದೆ. ಒಂದು ವೇಳೆ ಯೋಜನೆಯಲ್ಲಿರುವ ರೈತ 60 ವರ್ಷದ ಮೊದಲೇ ಮೃತಪಟ್ಟರೆ, ಆತನ ಪತ್ನಿ ಮುಂದಿನ ಕಂತುಗಳನ್ನು ತುಂಬುತ್ತ ಹೋಗಬಹುದು. ಹಾಗೆಯೇ, ಮೃತ ರೈತನ 60ನೇ ವಯಸ್ಸಿನ ಬಳಿಕ ಪಿಂಚಣಿ ಪಡೆದುಕೊಳ್ಳಬಹುದು. ಒಂದು ವೇಳೆ ರೈತ 60 ವರ್ಷಕ್ಕೂ ಮೊದಲೇ ಮೃತನಾದ ಸಂದರ್ಭ ಪತ್ನಿಗೆ ಯೋಜನೆಯಲ್ಲಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ ಅಲ್ಲಿವರೆಗೆ ಪಾವತಿಸಿದ ಹಣ ಮತ್ತು ಬಡ್ಡಿ ಹಣ ಪಡೆಯಲು ಅವಕಾಶವಿದೆ. ಅಥವಾ ರೈತ ದಂಪತಿ ಮೃತಪಟ್ಟರೆ, ಯೋಜನೆಯ ನಾಮ ನಿರ್ದೇಶಕರಿಗೆ ಇದರ ಫಲ ಸಿಗಲಿದೆ.
ಬೇಡವಾದರೆ…
ಹಣ ಪಾವತಿಸಲು ರೈತರಿಗೆ ಅಸಾಧ್ಯವಾದರೆ ಕನಿಷ್ಠ 5 ವರ್ಷಗಳ ಬಳಿಕ ಈ ಯೋಜನೆಯಿಂದ ಹೊರಬರಬಹುದಾಗಿದೆ. ಇಂತಹ ವೇಳೆ ರೈತರು ಪಾವತಿಸಿದ್ದ ಹಣಕ್ಕೆ ಸಮನಾದ ಬಡ್ಡಿಯನ್ನು ಸೇರಿಸಿ ಸರಕಾರ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.