ರೈಲು ಟಿಕೆಟ್‌ಗೆ ಮಳೆ-ಬಿಸಿಲಲ್ಲೇ ಕ್ಯೂ


Team Udayavani, Sep 22, 2019, 5:47 AM IST

21KSDE6A

ಕಾಸರಗೋಡು: ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕಾಸರಗೋಡು ರೈಲು ನಿಲ್ದಾಣ ಒಂದು. ಆದರ್ಶ ರೈಲು ನಿಲ್ದಾಣ ಯಾದಿಯಲ್ಲಿ ಸೇರ್ಪಡೆಗೊಂಡಿರುವ ಈ ರೈಲು ನಿಲ್ದಾಣದಲ್ಲಿ ಒಂದೇ ಟಿಕೆಟ್‌ ಕೌಂಟರ್‌ ಕಾರ್ಯಾಚರಿಸುತ್ತಿರುವುದರಿಂದ ಪ್ರಯಾ ಣಿಕರು ಟಿಕೆಟ್‌ಗಾಗಿ ಬಿಸಿಲಿಗೆ ಎದೆಯೊಡ್ಡಿ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಮಳೆ ಬಂದಲ್ಲಿ ಪ್ರಯಾಣಿಕರು ಅನುಭವಿಸುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ.

ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಯಾಣಿಕರು ಕಾಸರಗೋಡು ರೈಲು ನಿಲ್ದಾಣವನ್ನು ಅವಲಂಬಿಸಿದ್ದಾರೆ. ಪ್ರಯಾಣಿಕರು ಅನುಕೂಲ ಕ್ಕಾಗಿ ಐದು ಟಿಕೆಟ್‌ ಕೌಂಟರ್‌ಗಳಿವೆ. ಆದರೆ ಈ ಐದು ಟಿಕೆಟ್‌ ಕೌಂಟರ್‌ಗಳ ಪೈಕಿ ಒಂದು ಟಿಕೆಟ್‌ ಕೌಂಟರ್‌ ಮಾತ್ರವೇ ಕಾರ್ಯಾಚರಿಸುತ್ತಿದೆ. ಕೆಲವೊಮ್ಮೆ ಎರಡು ಟಿಕೆಟ್‌ ಕೌಂಟರ್‌ ಕಾರ್ಯಚರಿಸುವುದಿದೆ. ಒಂದೇ ಟಿಕೆಟ್‌ ಕೌಂಟರ್‌ ಕಾರ್ಯಚರಿಸುವುದರಿಂದಾಗಿ ರೈಲು ಪ್ರಯಾ ಣಿಕರು ಸರಿದಿಯಲ್ಲಿ ನಿಂತು ಟಿಕೆಟ್‌ ಸಿಗದೆ ರೈಲು ಪ್ರಯಾಣವನ್ನು ಮೊಟಕುಗೊಳಿ ಸಬೇಕಾದ ಘಟನೆಗಳು ನಡೆಯುತ್ತಿವೆ.

ರೈಲು ಬರುವ ಕೆಲವು ನಿಮಿಷಗಳ ಮುನ್ನ ಟಿಕೆಟ್‌ ಕೌಂಟರ್‌ ತೆರೆಯುತ್ತದೆ. ಪ್ರಯಾಣಿಕರು ಟಿಕೆಟ್‌ಗಾಗಿ ಉದ್ದನೆಯ ಕ್ಯೂ ನಿಂತು ತಮ್ಮ ಸರಿದಿಗಾಗಿ ಕಾಯುತ್ತಿದ್ದಾರೆ. ಟಿಕೆಟ್‌ಗಾಗಿ ಕಾದು ಕಾದು ಟಿಕೆಟ್‌ ಸಿಗದ ಪ್ರಯಾಣಿಕರು ರೈಲು ಪ್ರಯಾಣವನ್ನು ಮೊಟಕು ಗೊಳಿಸುತ್ತಿರುವುದು ಸಾಮಾನ್ಯವಾ ಗಿದೆ. ಪ್ರಯಾಣಿಕರು ಸರದಿಯಲ್ಲೇ ಬಾಕಿ ಯಾಗುತ್ತಾರೆ. ಇದೇ ವೇಳೆ ರೈಲು ಗಾಡಿ ನಿಲ್ದಾ ಣಕ್ಕೆ ಬಂದು ತೆರಳಿರುತ್ತದೆ. ಇದರಿಂದಾಗಿ ಪ್ರಯಾಣ ಮೊಟಕುಗೊಳಿಸಬೇಕಾದ ಅನಿವಾ ರ್ಯತೆ ಎದುರಾಗುತ್ತದೆ. ಟಿಕೆಟ್‌ ಕೌಂಟರ್‌ ಕೊಠಡಿಯಲ್ಲಿ ಕ್ಯೂ ಆರಂಭಿಸಿ ಸ್ಥಳವಿಲ್ಲದೆ ಕ್ಯೂ ಉದ್ದಕ್ಕೆ ಬೆಳೆದು ಕಟ್ಟಡದ ಹೊರಗೆ ಬಂದು ಬಿಸಿಲಿಗೆ ನಿಲ್ಲಬೇಕಾದ ದುಸ್ಥಿತಿ ಇದೆ. ಮಳೆ ಬಂದರಂತೂ ಟಿಕೆಟ್‌ಗಾಗಿ ಕ್ಯೂ ನಿಂತವರ ಪರಿಸ್ಥಿತಿ ಶೋಚನೀಯ.

ಟಿಕೆಟ್‌ಗಾಗಿ ಬಿಸಿಲಿನಲ್ಲಿ ಕ್ಯೂ ನಿಲ್ಲಬೇಕಾದ ಸಂದರ್ಭಗಳಲ್ಲಿ ಕೆಲವು ಪ್ರಯಾಣಿಕರು ಬಿಸಿಲ ಬೇಗೆಗೆ ತಲೆ ಸುತ್ತಿ ಬಿದ್ದ ಸಂದರ್ಭಗಳೂ ಇದೆ. ಐದು ಟಿಕೆಟ್‌ ಕೌಂಟರ್‌ಗಳಿದ್ದರೂ, ಕೇವಲ ಒಂದು, ಎರಡು ಕೌಂಟರ್‌ಗಳು ಕಾರ್ಯಚರಿಸುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಕಾಸರಗೋಡು ರೈಲು ನಿಲ್ದಾಣದಲ್ಲಿ ಹೆಚ್ಚಿನ ಟಿಕೆಟ್‌ ಕೌಂಟರ್‌ ಸ್ಥಾಪಿಸಿ ಪ್ರಯಾಣಿ ಕರಿಗೆ ಸೌಲಭ್ಯ ಒದಗಿಸಬೇಕೆಂದು ನಿರಂತರವಾಗಿ ಬೇಡಿಕೆಯನ್ನು ಮುಂದಿರಿಸಿ ದ್ದರೂ ಈ ವರೆಗೂ ರೈಲ್ವೇ ಇಲಾಖೆ ಈ ಬಗ್ಗೆ ಗಮನವನ್ನೇ ಹರಿಸಿಲ್ಲ.

ಟಿಕೆಟ್‌ಗಾಗಿ ವಾಗ್ವಾದ
ಸರದಿಯ ಕೊನೆಯಲ್ಲಿ ಅಥವಾ ಮಧ್ಯದಲ್ಲಿ ನಿಂತಿರುವ ಪ್ರಯಾಣಿಕರು ಸರದಿಯ ಮುಂಭಾಗದಲ್ಲಿ ಪರಿಚಯಸ್ಥರು ಇದ್ದಲ್ಲಿ ಅವರಲ್ಲಿ ಟಿಕೆಟ್‌ಗಾಗಿ ಹಣ ನೀಡುವ ಪ್ರಸಂಗಗಳು ನಡೆಯುತ್ತಿರುವುದರಿಂದ ಸರದಿಯಲ್ಲಿ ನಿಂತ ಇತರ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಪ್ರಯಾಣಿಕರ ಮಧ್ಯೆ ವಾಗ್ವಾದ, ಹೊಡೆದಾಟ ನಡೆಯುವ ಪ್ರಸಂಗಗಳು ಎದುರಾಗುತ್ತಿವೆ.

ಸಂಸದರಿಂದ ಮನವಿ
ಕಾಸರಗೋಡು ಜಿಲ್ಲೆಯ ರೈಲು ಪ್ರಯಾಣಿಕರ ವಿವಿಧ ಸಮಸ್ಯೆಗಳಿಗೆ ಪರಿಹಾರ ಹಾಗು ಇನ್ನಷ್ಟು ಸೌಲಭ್ಯ ಒದಗಿಸಬೇಕೆಂದು ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಅವರು ದಕ್ಷಿಣ ರೈಲ್ವೇ ಜನರಲ್‌ ಮೆನೇಜರ್‌ ರಾಹುಲ್‌ ಜೈನ್‌ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಅದರಲ್ಲೊಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಹೆಚ್ಚಿನ ಟಿಕೆಟ್‌ ಕೌಂಟರ್‌ ತೆರೆಯಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಗಮನ ಹರಿಸಿ
ಉದ್ದನೆಯ ಕ್ಯೂ ಇರುವುದರಿಂದ ಸರದಿಯಲ್ಲಿ ನಿಂತ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್‌ ಸಿಗದೆ ರೈಲು ಗಾಡಿ ಸಿಗದೆ ಪ್ರಯಾಣ ಮೊಟಕುಗೊಳ್ಳುವುದು ಸಾಮಾನ್ಯವಾಗಿದೆ. ಇಂತಹ ಸಮಸ್ಯೆಯನ್ನು ಪರಿಹರಿಸಲು ಹೆಚ್ಚಿನ ಟಿಕೆಟ್‌ ಕೌಂಟರ್‌ ಆರಂಭಿಸಬೇಕು. ಈ ಮೂಲಕ ಪ್ರಯಾಣಿಕರಿಗೆ ಸುಲಭದಲ್ಲಿ ಟಿಕೆಟ್‌ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈಲು ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
– ದಾಮೋದರನ್‌, ರೈಲ್ವೇ ಪ್ರಯಾಣಿಕ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ

CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Suside-Boy

Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

police

Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

police

Siddapura: ಕಂಟೇನರ್‌ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.