ಉಪ ಚುನಾವಣೆ: ಅನರ್ಹರಿಗೆ ಆಘಾತ
Team Udayavani, Sep 22, 2019, 5:45 AM IST
ಬೆಂಗಳೂರು: ರಾಜ್ಯದ ಹದಿನೈದು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ದಿಢೀರ್ ಘೋಷಣೆ ಅನರ್ಹಗೊಂಡ ಶಾಸಕರಿಗೆ ಆಘಾತ ನೀಡಿದೆ. ತಮ್ಮ ಅನರ್ಹತೆ ವಿಚಾರ ಇತ್ಯರ್ಥವಾಗುವವರೆಗೂ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡುವುದಿಲ್ಲ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರು ತಮ್ಮ ನೆರವಿಗೆ ಬರಬಹುದು ಎಂಬ ಅವರ ಊಹೆಯೂ ಸುಳ್ಳಾಗಿದ್ದು, ದಿಕ್ಕುತೋಚದಂತಾಗಿದೆ.
ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ರದ್ದುಗೊಂಡು ರಾಜೀನಾಮೆ ಅಂಗೀಕಾರ ವಿಚಾರ ಮತ್ತೆ ಸ್ಪೀಕರ್ ಬಳಿ ಬರಲಿದೆ. ರಾಜೀನಾಮೆ ಅಂಗೀಕಾರ ಆಗುತ್ತಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಕನಸು ಕಾಣುತ್ತಿದ್ದವರಿಗೆ ಆಯೋಗ ಶಾಕ್ ಟ್ರೀಟ್‌ಮೆಂಟ್ ನೀಡಿದಂತಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರಿಂದ ಎರಡೂ ಪಕ್ಷಗಳಿಗೆ ಆದ ಹಿನ್ನಡೆ, ಹೀನಾಯ ಸೋಲು, ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧೆಗೆ ನಿರ್ಧರಿಸಿರುವುದು ಬಹುತೇಕ ತ್ರಿಕೋನ ಸ್ಪರ್ಧೆಗೆ ಕಣ ಸಜ್ಜಾದಂತಾಗಿದೆ. ಕಾಂಗ್ರೆಸ್-ಜೆಡಿಎಸ್ ನಡುವಿನ ಮತ ವಿಭಜನೆಯಿಂದ ಗೆಲುವು ಸಾಧಿಸಬಹುದು ಎಂದು ಬಿಜೆಪಿ ಲೆಕ್ಕಾಚಾರ. ಆದರೆ ಸ್ಥಳೀಯ ಮಟ್ಟದಲ್ಲಿ ರಾಜಕಾರಣ ಬೇರೆಯದೇ ಸ್ವರೂಪ ಪಡೆದರೆ ಪ್ರಬಲ ಹೋರಾಟವೇ ಇರಲಿದ್ದು ಟಫ್ ಫೈಟ್ ನಡೆಯಲಿದೆ.
ಕುಟುಂಬದವರ ಸ್ಪರ್ಧೆ?
ಅನರ್ಹ ಶಾಸಕರೆಲ್ಲರೂ ಈಗ ಮತ್ತೆ ಸುಪ್ರೀಂಕೋರ್ಟ್ ಮುಂದೆ ಹೋಗಬೇಕಾಗಿದೆ. ಅಲ್ಲಿ ಅವರ ಪರವಾಗಿ ತೀರ್ಪು ಬಾರದಿದ್ದರೆ ಉಪ ಚುನಾವಣೆಗೆ ಅನಿವಾರ್ಯವಾಗಿ ಪತ್ನಿ, ಸಹೋದರ ಸೇರಿದಂತೆ ಕುಟುಂಬ ಸದಸ್ಯರು ಅಥವಾ ನಿಷ್ಠಾವಂತ ಬೆಂಬಲಿಗರನ್ನು ಕಣಕ್ಕಿಳಿಸಬೇಕಾಗಿದೆ.
ಚುನಾವಣೆ ವಿಚಾರ ಒಂದು ಕಡೆಯಾದರೆ ಮತ್ತೂಂದು ಕಡೆ ಅವರು ಹದಿನೈದನೇ ವಿಧಾನಸಭೆಯ ಸಂಪೂರ್ಣ ಅವಧಿಗೆ ಅನರ್ಹತೆಗೊಂಡಿರುವುದರಿಂದ ಬಿಜೆಪಿ ಸರಕಾರದಲ್ಲಿ ಯಾವುದೇ ಹುದ್ದೆ ಪಡೆಯುವಂತೆಯೂ ಇಲ್ಲ. ಹೀಗಾಗಿ, ಅನರ್ಹರಿಗೆ ಇಕ್ಕಟ್ಟೇ.
ಬಿಜೆಪಿ ನಾಯಕರಿಂದಲೂ ಬೇಡಿಕೆ ಸಂಭವ
ಮತ್ತೂಂದು ಆತಂಕ ಎಂದರೆ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿಯಿಂದಲೂ ತಲಾ ಒಂದೆರಡು ಪ್ರಬಲ ಆಕಾಂಕ್ಷಿಗಳು ಇದ್ದಾರೆ. ಅನರ್ಹರು ಸ್ಪರ್ಧಿಸದಿದ್ದರೆ ನಮಗೆ ಅವಕಾಶ ಕೊಡಿಸಿ ಎಂದು ಅವರು ನಾಯಕರಿಗೆ ದುಂಬಾಲು ಬೀಳಬಹುದು.
ನೋ ಚಾನ್ಸ್ ಅಂದಿದ್ದರು ಎಸ್‌ಟಿಎಸ್
ಶನಿವಾರ ಬೆಳಗ್ಗೆಯಷ್ಟೇ ಪತ್ರಿಕೆ ಜತೆ ಮಾತನಾಡಿದ್ದ ಯಶವಂತಪುರ ಕ್ಷೇತ್ರದ ಎಸ್.ಟಿ. ಸೋಮಶೇಖರ್, ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪ್ರಕರಣ ಇತ್ಯರ್ಥವಾಗುವವರೆಗೆ ಚುನಾವಣೆ ಘೋಷಣೆ ಮಾಡಬಾರದು ಎಂದು ಮನವಿ ಮಾಡಿದ್ದೇವೆ ಎಂದಿದ್ದರು. ಅದಾದ ಅರ್ಧ ತಾಸಿನಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಹೊರಬಿದ್ದಿದೆ.
- ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.