ನೀವು ಚಾರಣ ಪ್ರಿಯರೇ? ಹಾಗಾದರೆ ನೀವು ಮಾಡಬೇಕಾಗಿದ್ದಿಷ್ಟು?
Team Udayavani, Sep 22, 2019, 5:30 PM IST
ಮಳೆಗಾಲ ಅಂದರೆ ಮನಸ್ಸಲ್ಲಿ ಅದೆನೋ ರೋಮಾಂಚನ, ಮೈಮನಗಳಲ್ಲಿ ಏನೋ ಒಂಥರಾ ಪುಳಕ. ಪ್ರಕೃತಿ ಹಸಿರು ಸೀರೆ ಕಂಗೊಳಿಸುವ ಸಮಯ, ಬಾನಾಡಿಗಳ ಚಿಲಿಪಿಲಿ ಕಲರವ ಇಂಥ ಅನುಭವಗಳನ್ನು ಪರಿಸರದ ಮೇಲಿರುವ ಪ್ರೇಮಿಗಳು ಮಾತ್ರ ಅನುಭವಿಸಲು ಸಾಧ್ಯ. ಮಳೆ ಅಂದ್ರೆನೇ ಹಾಗೇ ಎನೋ ಒಂಥರಾ ಪುಳಕ. ಈ ಮಳೆಗಾದಲ್ಲಿ ಪ್ರಕೃತಿ ಮೈದುಂಬಿ ನಿಂತಿರುತ್ತಾಳೆ. ಹಸಿರು ಉಟ್ಟ ಬೆಟ್ಟ, ಗುಡ್ಡ, ಮಂಜಿನ ವೈಭವ, ಝುಳು ಝುಳು ಹರಿಯುವ ನೀರಿನ ನಾದ, ಹಕ್ಕಿಗಳ ಚಿಲಿಪಿಲಿ ಎಂಥವರನ್ನು ಪ್ರಕೃತಿ ಕೈಬೀಸಿ ಕರೆಯುತ್ತದೆ. ಯುವ ಮನಸ್ಸುಗಳಿಗೆ, ಚಾರಣ ಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ ಕಾಡು, ಬೆಟ್ಟ, ಗುಡ್ಡಗಳಲ್ಲಿ ಸುತ್ತಿ ಕಳೆದುಹೋಗಬೇಕೆಂಬ ಆಸೆ. ನಿಜವಾದ ಜೀವನದ ಅನುಭವ ಪಡೆಯಬೇಕಾದರೆ ನೀವು ಕಾಡಿನ ಒಳಗೆ ಹೊಕ್ಕಿ ಬರಬೇಕು. ಚಾರಣ ಹೋಗುವುದು ಕೆಲವರಿಗೆ ಹವ್ಯಾಸವಾಗಿರುತ್ತದೆ. ಇನ್ನು ಕೆಲವರಿಗೆ ಕುತೂಹಲವಾಗಿರುತ್ತದೆ. ಚಾರಣ ಮಾಡುವುದು ಹೇಳಿಷ್ಟು ಸುಲಭವಲ್ಲ. ಚಾರಣ ಮಾಡುವಾಗ ಜಾಗೃತೆ ಕೂಡ ವಹಿಸಬೇಕಾಗುತ್ತದೆ.
ಚಾರಣ ಹೇಗಿದ್ರೆ ಚಂದ
ಚಾರಣ ಹೋಗುವುದು ಸುಲಭದ ಮಾತಲ್ಲ. ಹುಲ್ಲುಗಾವಲು, ಕಾಡುಗಲ್ಲಿ ನಡೆದು, ಬೆಟ್ಟಗುಡ್ಡಗಳನ್ನು ಹತ್ತಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬೇಕು. ಚಾರಣ ಸಂದರ್ಭ ಹಲವಾರು ಘಟನೆಗಳು ಕೂಡ ಎದುರಾಗಬಹುದು. ವಿಷಭರಿತ ಹಾವು, ಕಲ್ಲು ಮಣ್ಣು, ಕಾಡು ಪ್ರಾಣಿಗಳು ಕೂಡ ಎದುರಾಗಬಹುದು . ಹಾಗಾಗಿ ಚಾರಣ ಹೋಗುವುದಾರೆ ಪೂರ್ವ ಸಿದ್ದತೆಯೂ ಅತೀ ಮುಖ್ಯ. ಮನಬಂದತೆ ದಿಢೀರನೆ ಪ್ಲಾನ್ ಹಾಕಿ ಚಾರಣ ಹೋಗುವುದು ಸೂಕ್ತವಲ್ಲ. ಇದಕ್ಕೆ ಹಲವು ದಿನಗಳ ಪೂರ್ವ ಸಿದ್ದತೆಯೂ ಮುಖ್ಯವಾಗಿ ಬೇಕಾಗುತ್ತದೆ. ಇನ್ನು ಚಾರಣ ಮಾಡುವಾಗ ಪರಿಸರವನ್ನು ಪ್ರೀತಿಸುವ ಮನಸ್ಸು ನಮ್ಮಲ್ಲಿ ಬೇಕು. ಅಕ್ಕ ಪಕ್ಕದ ವಸ್ತುಗಳು, ಹಕ್ಕಿಗಳು, ನದಿ ತೊರೆಗಳು , ಹಣ್ಣುಗಳು, ಹೂವುಗಳನ್ನು ಕಾಡಿನ ಇಂಚಿಂಚನ್ನು ನಾವು ಕಣ್ತುಂಬಿಕೊಳ್ಳಬೇಕು.
ಚಾರಣದ ಮುಂಜಾಗ್ರತೆಗಳು
ನೀವು ಚಾರಣ ಹೋಗಬಯಸುವುದಾದರೇ ಮೊದಲೇ ಚಾರಣ ಹೋಗುವ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ. ಸಾಧ್ಯವಾದರೆ ಚಾರಣ ಪ್ರದೇಶದ ಸಮೀಪವಿರುವ ಹಳ್ಳಿನ ಜನರಿಂದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಿ. ಅಲ್ಲಿ ನಿಮಗೆ ಊಟ, ತಿಂಡಿ ಇತರ ವ್ಯವಸ್ಥೆ ಇದೆಯೇ ಎಂಬುದನ್ನು ತಿಳಿದುಕೊಂಡು ನಿಮಗೆ ಸೂಕ್ತವಾದ ಪರಿಸರಕ್ಕೆ ಹಾನಿಯಾಗದ ವಸ್ತುಗಳನ್ನು ನೀವು ತೆಗೆದುಕೊಂಡು ಹೋಗಿ. ನೀರಿನ ಬಾಟಲ್, ಚಾಕು, ಹಣ್ಣು ಹಂಪಲು, ಲಘು ಆಹಾರ, ನಿಮಗೆ ಕಾಡಿನಲ್ಲೇ ಉಳಿದುಕೊಳ್ಳಬೇಕಾದರೆ ಟೆಂಟ್ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಳ್ಳುವುದು ಸೂಕ್ತ.
ಹುಚ್ಚು ಮೋಜು ಮಸ್ತಿಗೆ ಮುಂದಾಗಬೇಡಿ
ಪರಿಸರವನ್ನು ಪ್ರೀತಿಸುವ ಮನಸ್ಥಿತಿಯವರು ನಿಜವಾಗಿ ಕಾಡಿನ ಸುಖ ಅನುಭವಿಸಬೇಕು ಎನ್ನುವವರು ಕಾಡಿನ ಸೌಂದರ್ಯವನ್ನು ಕಣ್ತುಂಬಿ ಕೊಳ್ಳುವವರು ಮಾತ್ರ ಚಾರಣಕ್ಕೆ ಹೋಗಿ. ಹುಚ್ಚು ಮೋಜು, ಮಸ್ತಿಗೆ, ಹುಚ್ಚು ಅಪಾಯಕಾರಿ ಸೆಲ್ಫಿಗೆ, ಹುಚ್ಚು ಸಾಹಸಕ್ಕೆ ಮುಂದಾಗಬೇಡಿ. ನಿಮ್ಮ ಹುಚ್ಚಾಟಕ್ಕೆ ಕಾಡು ಪ್ರದೇಶಗಳು ಸೂಕ್ತವಲ್ಲ. ಪ್ಲಾಸ್ಟಿಕ್‌ಗಳನ್ನು, ಬಾಟಲ್‌ಗಳನ್ನು ಅಲ್ಲಲ್ಲಿ ಬಿಸಾಡಬೇಡಿ. ನಾವು ಪರಿಸರದ ಸೌಂದರ್ಯ ಅನುಭವಿಸಬೇಕೇ ವಿನಃ ಯಾವುದೇ ರೀತಿಯ ಹಾನಿ ಮಾಡಬಾರದು. ಕಾಡಿನಲ್ಲಿ ಬೊಬ್ಬೆ ಹಾಕುವುದರಿಂದ ಕಾಡಿನ ಪ್ರಾಣಿಗಳ ಗಮನ ನಮ್ಮ ಮೇಲೆ ಬೀಳಬಹುದು. ಇದು ಅಪಾಯಕಾರಿಯಾಗಬಹುದು.
ಯಾವ ಸಮಯ ಸೂಕ್ತ
ವಿಪರೀತ ಮಳೆ ಬರುವ ಸಮಯ ಚಾರಣಕ್ಕೆ ಹೋಗುವುದು ಸೂಕ್ತವಲ್ಲ. ಚಾರಣ ಸಪ್ಟೆಂಬರಿನಿಂದ ಫೆಬ್ರವರಿ ತಿಂಗಳವರೆಗೆ ಟ್ರೆಕ್ಕಿಂಗ್ ಗೆ ಸೂಕ್ತ ಸಮಯ. ವಿಪರೀತ ಮಳೆಯ ಸಮಯದಲ್ಲಿ ಚಾರಣ ಹೋದರೆ ಗುಡ್ಡಕುಸಿತ, ಸಿಡಿಲು, ಮುಂತಾದ ಪ್ರಾಕೃತಿಕ ವಿಕೋಪಗಳು ಉಂಟಾಗುವ ಸಂಭವವಿರುತ್ತದೆ.
ಬೆಸ್ಟ್ ಚಾರಣ ತಾಣಗಳು
ಚಾರಣ ಹೋಗಲು ಕರ್ನಾಟಕದಲ್ಲಿ, ಅದರಲ್ಲೂ
ಮಳೆನಾಡಿನ ಪ್ರದೇಶಗಳಲ್ಲಿ ಹಲವಾರು ಚಾರಣ ತಾಣಗಳಿವೆ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಬುಡನ್ ಗಿರಿ , ಕೆಮ್ಮಣ್ಣು ಗುಂಡಿಯ ಝಡ್ ಪಾಯಿಂಟ್ , ಸಿರಿಸಿಯ ದಾಂಡೇಲಿ,ಯಾನ, ಕುಮಾರ ಪರ್ವತ, ಪುಪ್ಪಗಿರಿ ಬೆಟ್ಟ, ಕೊಡಚಾದ್ರಿ ಮುಂತಾದ ತಾಣಗಳು ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳಗಳು.
ಜೀವನದಲ್ಲಿ ಒಂದು ಬಾರಿಯಾದರೂ ಕಾಡಿನ ಸೌಂದರ್ಯವನ್ನು ಅನುಭವಿಸಬೇಕು. ಕಾಡಿನಲ್ಲಿರುವ ಜೀವನ ಪಾಠ, ಅನುಭವ ಬೇರೆಲ್ಲೂ ಸಿಗಲಾರದು.
ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.