ಹ್ಯೂಸ್ಟನ್‌ನಲ್ಲಿ ಪ್ರಧಾನಿ ಊಟಕ್ಕೆ ಸ್ಪೆಷಲ್ “ನಮೋ ಥಾಲಿ’
Team Udayavani, Sep 22, 2019, 5:00 PM IST
ಹ್ಯೂಸ್ಟನ್: ಅಮೆರಿಕದಲ್ಲಿ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೌಡಿ ಮೋದಿ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅವರು ಉಳಿದುಕೊಂಡಿರುವ ಹೋಟೆಲ್‌ನಲ್ಲೀಗ ಇಡೀ ತಂಡಕ್ಕೆ ಆಹಾರ ತಯಾರು ಮಾಡುವ ಹೊಣೆ ಹೊತ್ತುಕೊಂಡಿರುವುದು ಖ್ಯಾತ ಬಾಣಸಿಗರಾದ ಕಿರಣ್ ವರ್ಮಾ ಅವರು. ಪ್ರಧಾನಿ ಮೋದಿ ಅವರಿಗಾಗಿಯೇ ಅವರು ಹಲವು ಖಾದ್ಯಗಳನ್ನು ತಯಾರು ಮಾಡುವುದಾಗಿ ಹೇಳಿದ್ದಾರೆ.
ನಮೋ ಥಾಲಿ ಎಂದವರು ಇದಕ್ಕೆ ಹೆಸರು ಇಟ್ಟಿದ್ದು, ಪ್ರಧಾನಿ ಸಸ್ಯಾಹಾರಿಗಳಾಗಿರುವುದರಿಂದ ಎಲ್ಲ ಆಹಾರ ಸಸ್ಯಾಹಾರ ಮತ್ತು ಸಾತ್ವಿಕವಾಗಿರಲಿದೆ ಎಂದು ಹೇಳಿದ್ದಾರೆ. ಅಲ್ಲದೇ ದೇಸೀ ಶುದ್ಧ ತುಪ್ಪದಲ್ಲೇ ಆಹಾರ ತಯಾರು ಮಾಡುವುದಾಗಿ ಹೇಳಿದ್ದಾರೆ. ಹಲವು ವಿಧದ ಚಟ್ನಿಗಳೂ ಇದರಲ್ಲಿ ಇವೆಯಂತೆ.
ನಮೋ ಥಾಲಿಯಲ್ಲಿ ವಿಶೇಷವಾಗಿ ರಸ್‌ಮಲೈ, ಶ್ರೀಖಂಡ, ಕ್ಯಾರೆಟ್ ಹಲ್ವಾ, ಬಾದಾಮ್ ಹಲ್ವಾ, ಖೀಚಡಿ, ಖಚೋರಿ, ಮೇಥಿ ತೆಪ್ಲಾ ಮುಂತಾದ ಹಲವು ವೈವಿಧ್ಯಗಳು ಇರಲಿವೆಯಂತೆ.
ಪ್ರಧಾನಿ ನರೇಂದ್ರ ಮೋದಿಯವರು ವಿಶೇಷವಾಗಿ ಯಾವುದೇ ಖಾದ್ಯ ಮಾಡಬೇಕೆಂದು ಸೂಚಿಸದಿದ್ದರೂ, ಅವರ ಬಯಕೆಗಳನ್ನು ಗಮನಿಸಿ ಖಾದ್ಯ ತಯಾರು ಮಾಡುವುದಾಗಿ ಕಿರಣ್ ಹೇಳಿದ್ದಾರೆ. ಅಮೆರಿಕಕ್ಕೆ ಆಗಮಿಸಿದ ಹಲವು ವಿವಿಐಪಿಗಳಿಗೆ ಕಿರಣ್ ಅವರು ಬಾಣಸಿಗರಾಗಿದ್ದು, ಪ್ರಧಾನಿ ಅವರಿಗೂ ಅಡುಗೆ ಮಾಡುವುದು ಗೌರವ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.