ಸೋಲೇ ಗೆಲುವಿನ ಮೆಟ್ಟಿಲಾಗಲಿ…


Team Udayavani, Sep 23, 2019, 5:16 AM IST

Super-Man

ಗೆಲುವು ಮತ್ತು ಯಶಸ್ಸಿಗೆ ಕಾರಣವಾಗಬಲ್ಲ ಅಂಶಗಳು ಯಾವುವು? ನಿರಂತರ ಪ್ರಯತ್ನ, ಕಠಿನ ಪರಿಶ್ರಮ, ಶ್ರದ್ಧೆ. ಇವೆಲ್ಲದರ ಜತೆ ಸೋಲು ಮತ್ತು ಸೋಲಿನ ಭಯ. ಹೌದು, ಬದುಕು ಒಡ್ಡಿದ ಪರೀಕ್ಷೆಯಲ್ಲಿ ನಾವು ಇನ್ನೇನು ಸೋಲುತ್ತೇವೆ ಎನ್ನುವ ಭಯ ಕಾಡಿದಾಗ ಅದರಿಂದ ಹೊರಬರಲು ಇನ್ನಿಲ್ಲದ ಪ್ರಯತ್ನ ಪಡುತ್ತೇವಲ್ಲ ಆಗ ಗೆಲುವಿನ ದಡ ಸೇರುತ್ತೇವೆ. ಇದೇ ಕಾರಣಕ್ಕೆ ಸೋಲೇ ಗೆಲುವಿನ ಸೋಪಾನ ಎನ್ನುತ್ತಾರೆ.

ಸೋಲನ್ನೇ ಮೆಟ್ಟಿಲಾಗಿಸಿಕೊಳ್ಳಿ
ಸೋಲು ಎಂದಿಗೂ ನಮ್ಮ ಆತ್ಮ ಸ್ಥೈರ್ಯವನ್ನು ಕುಗ್ಗಬಾರದು. ಬದಲಾಗಿ ಗೆಲುವಿನ ಛಲ ಮೂಡಿಸುವಂತಾಗಬೇಕು. ಯಾವುದಾದರೂ ಕೆಲಸಕ್ಕೆ ಹೊರಟು ಅದರಲ್ಲಿ ವಿಫ‌ಲರಾದಿರಿ ಎಂದಿಟ್ಟುಕೊಳ್ಳಿ. ಅಷ್ಟಕ್ಕೇ ಸುಮ್ಮನಾಗಬೇಡಿ. ಮುಂದಿನ ಬಾರಿ ಮತ್ತೂಮ್ಮೆ ಪ್ರಯತ್ನಿಸಿ. ಹಿಂದಿನ ಬಾರಿ ಯಾವ ಕಾರಣಕ್ಕೆ ನಿಮ್ಮ ಯತ್ನ ವಿಫ‌ಲವಾಯಿತು. ಎಡವಲು ಕಾರಣವೇನು ಎನ್ನುವುದರ ಕುರಿತು ಚಿಂತಿಸಿ. ಆ ತಪ್ಪು ಮರುಕಳಿಸದಂತೆ ಯಾವ ರೀತಿ ಕಾರ್ಯ ನಿರ್ವಹಿಸಬಹುದು ಎನ್ನುವುದನ್ನು ಲೆಕ್ಕ ಹಾಕಿ. ಅನಂತರ ಹೊರಡಿ. ಸಂಶಯ ಬೇಡ. ಆಗ ಗೆಲುವು ನಿಮ್ಮದೇ.

ಗೆಲುವಿನ ದಡ ಸೇರಿಸಲಿ
ಶಾಲಾ ದಿನಗಳನ್ನು ನೆನಪು ಮಾಡಿಕೊಳ್ಳಿ. ನಮಗೆ ಯಾವುದಾದರೂ ಕಷ್ಟ ಅಥವಾ ಇಷ್ಟ ಇಲ್ಲದ ವಿಷಯ ಇದ್ದರೆ ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ಆದರೆ ಪರೀಕ್ಷೆ ಸಮಯದಲ್ಲಿ ಮಾತ್ರ ಜಾಗೃತರಾಗುತ್ತೇವೆ. ಎಲ್ಲ ವಿಷಯಗಳಲ್ಲಿ ಉತ್ತಮ ಅಂಕ ಬಂದು ಇದರಲ್ಲಿ ಫೇಲ್‌ ಆದರೆ ಎನ್ನುವ ಭಯದಲ್ಲೇ ಅಧ್ಯಯನ ನಡೆಸುತ್ತೇವೆ. ಹಗಲು-ರಾತ್ರಿ ಕಷ್ಟ ಪಟ್ಟು ಶ್ರದ್ಧೆಯಿಂದ ಓದಿ ತೇರ್ಗಡೆಯಾಗಿ ನಿಟ್ಟುಸಿರು ಬಿಡುತ್ತೇವೆ. ಇಲ್ಲಿ ನಮ್ಮ ಗೆಲುವಿಗೆ ಪ್ರೇರಣೆ ಯಾಗಿದ್ದು ಸೋತರೆ ಮುಂದೇನು ಎನ್ನುವ ಭಯ. ಒಂದು ಸೋಲು ಬಂದಾಗ ತಲೆ ಮೇಲೆ ಕೈ ಹೊತ್ತು ಕೂರುವ ಬದಲು ಮರಳಿ ಯತ್ನ ಮಾಡಬೇಕು. ಮನೆಯ ಮೂಲೆಯಲ್ಲಿನ ಜೇಡರ ಬಲೆಯನ್ನು ನಾವು ಕಿತ್ತರೂ ಮತ್ತೆ ಮತ್ತೆ ನೇಯುವಂತೆ…

ಶ್ರಮ ನಿರರ್ಥಕವಲ್ಲ
ನಾವು ಗೆಲುವಿಗಾಗಿ ಶ್ರಮ ಪಡದೆ ಸೋಲಿನ ಭೀತಿಯಿಂದ ಹಿಂದೇಟು ಹಾಕಿದರೆ ಅದು ದೊಡ್ಡ ತಪ್ಪಾಗುತ್ತದೆ. ಏನಾದರೂ ಆಗಲಿ ಒಂದು ಕೈ ನೋಡುತ್ತೇವೆ ಎನ್ನುವ ಮನಸ್ಥಿತಿ ಹೊಂದಿರಬೇಕು. ಒಂದು ವೇಳೆ ಸೋತರೂ ಅದು ನಮಗೆ ದೊಡ್ಡ ಪಾಠವನ್ನೇ ಕಲಿಸಿರುತ್ತದೆ. ಅನುಭವವೇ ಗುರು ತಾನೆ? ನಾವು ಗೆಲುವಿಗಾಗಿ ಶ್ರಮ ಪಡದೆ ಸೋಲಿನ ಭೀತಿಯಿಂದ ಹಿಂದೇಟು ಹಾಕಿದರೆ ಅದು ದೊಡ್ಡ ತಪ್ಪಾಗುತ್ತದೆ. ಏನಾದರೂ ಆಗಲಿ ಒಂದು ಕೈ ನೋಡುತ್ತೇವೆ ಎನ್ನುವ ಮನಸ್ಥಿತಿ ಹೊಂದಿರಬೇಕು. ಒಂದು ವೇಳೆ ಸೋತರೂ ಅದು ನಮಗೆ ದೊಡ್ಡ ಪಾಠವನ್ನೇ ಕಲಿಸಿರುತ್ತದೆ. ಅನುಭವವೇ ಗುರು ತಾನೆ?

- ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Ashok-Rai

Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್‌ ಕುಮಾರ್‌ ರೈ

MDMA

Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!

Efforts to restore trust with China: Army chief Dwivedi

Army chief: ಚೀನ ಜತೆ ವಿಶ್ವಾಸ ಪುನಸ್ಥಾಪನೆಗೆ ಪ್ರಯತ್ನ: ಸೇನಾ ಮುಖ್ಯಸ್ಥ ದ್ವಿವೇದಿ

Dina Bhavishya

Daily Horoscope; ಹೆಚ್ಚಿನವರಿಗೆ ಮಿಶ್ರಫ‌ಲ ಕೊಡುವ ದಿನ

Bengaluru: ಕಂಬಳ ಪ್ರಶ್ನಿಸಿ ಅರ್ಜಿ ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ

Bengaluru: ಕಂಬಳ ಪ್ರಶ್ನಿಸಿ ಅರ್ಜಿ ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Ashok-Rai

Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್‌ ಕುಮಾರ್‌ ರೈ

MDMA

Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!

Efforts to restore trust with China: Army chief Dwivedi

Army chief: ಚೀನ ಜತೆ ವಿಶ್ವಾಸ ಪುನಸ್ಥಾಪನೆಗೆ ಪ್ರಯತ್ನ: ಸೇನಾ ಮುಖ್ಯಸ್ಥ ದ್ವಿವೇದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.