ಪ್ರದರ್ಶನದಲ್ಲಿ ಕಣ್ಮನ ಸೆಳೆದ ಹಳೆಯ ಸ್ಕೂಟರ್‌ಗಳು
ನಗರದಲ್ಲಿ ಸ್ಕೂಟರ್ ದಿನಾಚರಣೆ
Team Udayavani, Sep 23, 2019, 5:10 AM IST
ಮಹಾನಗರ: ನಗರದ ಕುದ್ರೋಳಿ ಅಳಕೆಯ ಸಿಟಿ ಅರೇನಾ ಫುಟ್‌ಬಾಲ್ ಮೈದಾನದ ಸಮೀಪದ ವಾದಿರಾಜ ನಗರದಲ್ಲಿ ರವಿವಾರ ನಡೆದ ಸ್ಕೂಟರ್ ಡೇ ಕಾರ್ಯಕ್ರಮವು ನಮ್ಮ ಹಳೆಯ ಸ್ಕೂಟರ್‌ಗಳ ಪ್ರದರ್ಶನಕ್ಕೆ ವೇದಿಕೆಯಾಯಿತು.
ದೇಶದಲ್ಲಿಯೇ ಮೊದಲ ಬಾರಿಗೆ ನಡೆದ ದಕ್ಷಿಣ ಭಾರತ ಮಟ್ಟದ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕುಂದಾಪುರದಿಂದ ಕೇರಳದ ಕೊಟ್ಟಾಯಂ ವರೆಗಿನ ಪ್ರದೇಶದ 70 ಮಂದಿ ತಮ್ಮ ಹಳೆಯ ಕ್ಲಾಸಿಕ್ ಮತ್ತು ರೆಟ್ರೋ 2- ಸ್ಟ್ರೋಕ್ ಸ್ಕೂಟರ್‌ಗಳನ್ನು ಪ್ರದರ್ಶಿಸಿದರು.
70-80ರ ದಶಕಗಳಲ್ಲಿದ್ದ ಲ್ಯಾಂಬ್ರೆಟ್ಟಾ, ವೆಸ್ಪಾ, ವಿಜಯ್‌ಸೂಪರ್ ಮತ್ತಿತರ ಬ್ರಾಂಡ್‌ಗಳ ಸ್ಕೂಟರ್‌ಗಳನ್ನು ಪ್ರದರ್ಶಿಸಲಾಗಿದ್ದು, ಆಧುನಿಕ ತಲೆ ಮಾರಿನ ಯುವಜನರೂ ಸಹಿತ ಹಲವಾರು ಮಂದಿ ಸಾರ್ವಜನಿಕರು ವೀಕ್ಷಿಸಿದರು. ಸ್ಕೂಟರ್‌ಗಳ ಮಾಲಕರು 30- 40 ವರ್ಷಗಳಷ್ಟು ಹಳೆಯ ಸ್ಕೂಟರ್‌ಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಮಂಗಳೂರು ಕ್ಲಾಸಿಕ್ ಸ್ಕೂಟರ್ ಕ್ಲಬ್ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಕರ್ನಾಟಕ ಮತ್ತು ಕೇರಳದ ಸ್ಕೂಟರ್ ಮಾಲಕರು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ, ಗೋವಾ ಮತ್ತಿತರ ರಾಜ್ಯಗಳನ್ನು ಸ್ಕೂಟರ್ ಮಾಲಕರನ್ನು ಸೇರಿಸಿಕೊಂಡು ದೊಡ್ಡ ಮಟ್ಟದ ಪ್ರದರ್ಶನವನ್ನು ಏರ್ಪಡಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.ಹಳೆಯ ಸ್ಕೂಟರ್‌ಗಳು ನಮ್ಮ ಪರಂಪರೆಯ ಸಂಕೇತ. ಅದನ್ನು ಇಂದಿನ ತಲೆಮಾರಿಗೆ ಪರಿಚಯಿಸುವುದು ಇದರ ಉದ್ದೇಶ ಎಂದವರು ವಿವರಿಸಿದ್ದಾರೆ.
ವಿವಿಧ ಸ್ಪರ್ಧೆಗಳು
ಪ್ರದರ್ಶನದಲ್ಲಿ ಭಾಗವಹಿಸಿದ ಹಳೆಯ ಸ್ಕೂಟರ್‌ಗಳ ಮಾಲಕರಿಗಾಗಿ ನಿಧಾನ ಸ್ಕೂಟರ್ ಸ್ಪರ್ಧೆ, ಸ್ಕೂಟರನ್ನು ವೇಗವಾಗಿ ದೂಡಿಕೊಂಡು ಹೋಗುವುದು, ಬಾಯಿಯಲ್ಲಿ ಚಮಚ ಲಿಂಬೆ ಹುಳಿ ಇರಿಸಿ ಸ್ಕೂಟರ್ ಚಲಾಯಿಸುವುದು, ಆತ್ಯಂತ ಹಳೆಯ ಸ್ಕೂಟರ್, ಅತ್ಯುತ್ತಮವಾಗಿ ನಿರ್ವಹಣೆ ಮಾಡಿಕೊಂಡು ಬಂದಿರುವ ಸ್ಕೂಟರ್ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಸೆ. 16ರಿಂದ 22ರ ವರೆಗೆ “ಮೊಬಿಲಿಟಿ ಸಪ್ತಾಹ’ವನ್ನು ಆಚರಿಸುತ್ತಿದ್ದು, ಇದರ ಭಾಗವಾಗಿ ಕೊನೆಯ ದಿನ ಸ್ಕೂಟರ್ ದಿನವನ್ನು ಆಚರಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.