ಚೀನ ಬ್ಯಾಡ್ಮಿಂಟನ್: ಪ್ರಶಸ್ತಿ ಉಳಿಸಿಕೊಂಡ ಮರಿನ್
Team Udayavani, Sep 23, 2019, 5:54 AM IST
ಚಾಂಗ್‌ಜೂ (ಚೀನ): ಎಂಟು ತಿಂಗಳ ವಿಶ್ರಾಂತಿ ಬಳಿಕ ಸ್ಪರ್ಧಾತ್ಮಕ ಕೂಟಕ್ಕೆ ಮರಳಿದ ಸ್ಪೇನಿನ ಕ್ಯಾರೋಲಿನ್ ಮರಿನ್ “ಚೀನ ಓಪನ್ ಬ್ಯಾಡ್ಮಿಂಟನ್’ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 3 ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಮರಿನ್, ರವಿವಾರದ ಫೈನಲ್‌ನಲ್ಲಿ ತೈವಾನಿನ ದ್ವಿತೀಯ ಶ್ರೇಯಾಂಕಿತ ಆಟಗಾರ್ತಿ ತೈ ಜು ಯಿಂಗ್ ವಿರುದ್ಧ 14-21, 21-17, 21-18 ಅಂತರದ ಜಯ ಸಾಧಿಸಿದರು.
ಪುರುಷರ ಫೈನಲ್‌ನಲ್ಲಿ ಜಪಾನಿನ ಕೆಂಟೊ ಮೊಮೊಟ ಚಾಂಪಿಯನ್ ಆಗುವ ಮೂಲಕ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದರು. ಫೈನಲ್‌ನಲ್ಲಿ ಅವರು ಇಂಡೋನೇಶ್ಯದ ಆ್ಯಂಟನಿ ಸಿನಿಸುಕ ಗಿಂಟಿಂಗ್ ವಿರುದ್ಧ 19-21, 21-17, 21-19 ಅಂತರದಿಂದ ಗೆದ್ದು ಬಂದರು.
8 ತಿಂಗಳು ಗಾಯಾಳು
ಜನವರಿಯಲ್ಲಿ ಬಲ ಮೊಣಕಾಲಿನ ನೋವಿಗೊಳಗಾಗಿದ್ದ ಕ್ಯಾರೋಲಿನಾ ಮರಿನ್ ಸತತ 8 ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದರು. ಪುನರಾಗಮನದ ಬಳಿಕ ಸಾಧಿಸಿದ ಈ ಗೆಲುವು ಅವಿಸ್ಮರಣೀಯ ಎಂಬುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಫೈನಲ್ ಪಂದ್ಯ 65 ನಿಮಿಷಗಳ ತನಕ ಸಾಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.