ಮನೆಯಲ್ಲೇ ಮಾಡಬಹುದಾದ ವ್ಯಾಯಾಮಗಳು
Team Udayavani, Sep 24, 2019, 5:34 AM IST
ದಿನನಿತ್ಯದ ಬ್ಯುಸಿ ವೇಳಾಪಟ್ಟಿಯಿಂದಾಗಿ ಅನೇಕರಿಗೆ ಜಿಮ್‌ಗೆ ತೆರಳಿ ವ್ಯಾಯಾಮ ಮಾಡುಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಟ್ಟರೇ ಫಿಟ್‌ನೆಸ್ ಕಾಯ್ದುಕೊಳ್ಳಬಹುದು. ಕೆಲವೊಂದು ವ್ಯಾಯಾಮಗಳನ್ನು ಮನೆಯಲ್ಲೇ ಮಾಡಬಹುದಾದ ಕಾರಣ ಜಿಮ್‌ಗೆ ಹೋಗಲೇಬೇಕಾದ ಅನಿವಾರ್ಯತೆ ಇಲ್ಲ. ಮನೆಯಲ್ಲೇ ಮಾಡಬಹುದಾದ ವ್ಯಾಯಾಮಗಳ ಕುರಿತು ಇಲ್ಲಿದೆ ಮಾಹಿತಿ.
ಸರಳ ವ್ಯಾಯಾಮ
ಮನೆಯಲ್ಲೇ ಟಿವಿ ನೋಡುತ್ತಾ, ನಿಂತÇÉೆ ಮ್ಯೂಸಿಕ್ ಕೇಳುತ್ತಾ ಜಾಗಿಂಗ್ ಮಾಡಿ. ಇದು ಕೂಡ ಕೊಬ್ಬು ಕರಗಿಸುತ್ತದೆ. ವಾತಾವರಣ ಚೆನ್ನಾಗಿದ್ದರೆ ಮನೆಯ ಅಂಗಳದÇÉೆ ವಾಕ್ ಮಾಡಿ. ಇಲ್ಲವಾದಲ್ಲಿ ಮನೆಯಲ್ಲಿರುವ ಮೆಟ್ಟಿಲುಗಳನ್ನು ವೇಗವಾಗಿ ಹತ್ತಿ ಇಳಿಯಿರಿ. ಎರೋಬಿಕ್ಸ್ ಕೂಡ ಮಾಡಬಹುದು.
ಹೊಟ್ಟೆ ಭಾಗದ ವ್ಯಾಯಾಮ
ಅಬಾxಮಿನೀಲ್ ಮಾಂಸಖಂಡಗಳ ಸ್ಟ್ರೆಂಥ್‌ಗಾಗಿ ಕ್ರಂಚಸ್ ವ್ಯಾಯಾಮ ಮಾಡಿ. ಕಾಲನ್ನು ಸ್ವಲ್ಪ ಬಾಗಿಸಿ. ತಲೆಯ ಮುಂಭಾಗದಿಂದ ಕೆಳಕ್ಕೆ ಕೈಗಳನ್ನು ತಂದು ತಲೆ ಲಿಫ್ಟ್ ಮಾಡಿ. ಕಾಲನ್ನು 90 ಡಿಗ್ರಿ ಇರುವಂತೆ ನೇರ ಮಾಡಿ. ನಿಮ್ಮ ಕೈಗಳು ನಿಮ್ಮ ಸೊಂಟದ ಕೆಳಗೆ ಬರಲಿ. ಹಾಗೇ ಲೋವರ್ ಬಾಡಿ ಮೇಲಕ್ಕೆ ಲಿಫ್ಟ್ ಮಾಡಿ.
ಸ್ಕ್ವಾಟ್ಸ… ವ್ಯಾಯಾಮ
ಕಾಲಿನ ಮಾಂಸಖಂಡಗಳು ಗಟ್ಟಿಗೊಳ್ಳಲು ಸ್ಕ್ವಾಟ್ಸ… ವ್ಯಾಯಾಮ ಉತ್ತಮ. ಕಾಲನ್ನು ವೈಡಾಗಿ ಇಟ್ಟುಕೊಳ್ಳಿ. ನಿಮ್ಮ ಕೈಗಳು ಲಾಕ್ ಆಗಲಿ. ಮೊಣಕಾಲು ಮಡಚುವಂತೆ ಮಾಡಿ ಕುಳಿತುಕೊಳ್ಳುವ ಪೋಸಿಷನ್ ಮಾಡಿ. ಆದರೆ ಕುಳಿತುಕೊಳ್ಳಬಾರದು. ನಿಮ್ಮ ಕೈಗಳನ್ನು ಸ್ಪ್ರೆàಟ್ ಆಗಿ ಮುಂದೆ ಚಾಚಿ, ಎರಡು ವಾಟರ್ ಬಾಟಲ್‌ಗಳನ್ನು ಎರಡು ಕೈಗಳಲ್ಲಿ ಹಿಡಿಯಿರಿ.
ಮಸ್ಸಲ್ ಸ್ಟ್ರೆಂಥ್‌ಗೆ
ನೆಲದ ಮೇಲೆ ಹೊಟ್ಟೆ ಕೆಳಗಿರುವಂತೆ ಮಲಗಿ. ಪುಶ್ ಅಪ್ಸ್ ಮಾಡಿ. ಕಾಲಿನ ಬೆರಳು ಮತ್ತು ಕೈಗಳ ಮೇಲೆ ದೇಹವನ್ನು ಮೇಲಕ್ಕೆ ಲಿಫ್ಟ್ ಮಾಡಿ. 10ರ ವರೆಗೂ ಕೌಂಟ್ ಮಾಡಿ. ಅನಂತರ ದೇಹವನ್ನು ಕೆಳಗಿಳಿಸಿ. ಹೀಗೆ 20 ಬಾರಿ ಮಾಡಿ. ಇದು ಅಪ್ಪರ್ ಬಾಡಿ ಮಸಲ್ಸ…, ಎದೆಭಾಗ, ಭುಜ, ಮಾಂಸಖಂಡಗಳು ಗಟ್ಟಿಗೊಳ್ಳಲು ಸಹಕರಿಸುತ್ತವೆ. ನಿಮ್ಮ ಕಾಲಿಗೆ ಸ್ಟ್ರೆಂಥ್ ಬರಲು ಲೆಫ್ಟ್ ರೈಟ… ಎಂದು ಹೇಳಿಕೊಳ್ಳುತ್ತಾ ಒಂದೇ ಕಡೆ ನಿಂತು ನಡೆಯುವಂತೆ ಮಾಡಿ.
ಕಾರ್ಡಿಯೋ ವ್ಯಾಯಾಮ
ಬಾಲ್ಯದ ಸಮಯದಲ್ಲಿ ಜಂಪ್ ಮಾಡುತ್ತಾ ಇದ್ದಿದ್ದನ್ನು ನೆನಪು ಮಾಡಿಕೊಳ್ಳಿ. ಯೋಚಿಸದೇ ಹತ್ತಾರು ಬಾರಿ ಜಂಪ್ ಮಾಡಿ. ಇದು ಗೆùಟ್ಕಾರ್ಡಿಯೋ ವ್ಯಾಯಾಮವಾದಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.