ಶಿಸ್ತುಬದ್ಧ ಗಾಂಧಿ ನಡಿಗೆಗೆ ಸಿದ್ಧತೆ: ಹರೀಶ್
Team Udayavani, Sep 24, 2019, 5:02 AM IST
ಪುತ್ತೂರು: ಸ್ವತಂತ್ರ ಭಾರತದ ನಿರ್ಮಾಣದಲ್ಲಿ ಮಹಾತ್ಮ ಗಾಂಧೀಜಿ ನೀಡಿದ ಕೊಡುಗೆ ಸ್ಮರಣೀಯ. ಗಾಂಧೀಜಿ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಸ್ವಾತಂತ್ರÂವನ್ನು ಇಂದು ನಾವು ಅನುಭವಿಸುತ್ತಿದ್ದೇವೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.
ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಅ. 2 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ನಡೆಯ ಲಿರುವ ಗಾಂಧಿ ನಡಿಗೆಯ ಸಿದ್ಧತೆಗಳ ಕುರಿತು ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ತಲೆ ಎತ್ತಿ ನಿಂತಿದ್ದರೆ ಅದರ ಹಿಂದೆ ಗಾಂಧೀಜಿ ಅವರ ಮಹತ್ವದ ಕೊಡುಗೆ ಇದೆ. ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಪಡೆದ ಸ್ವಾತಂತ್ರÂದ ಮಹತ್ವವನ್ನು ಮರೆಯಬಾರದು ಎಂದು ಹೇಳಿದರು.
ಗಾಂಧಿ ನಡಿಗೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಮಹಾತ್ಮಾ ಗಾಂಧಿ ರಸ್ತೆ (ಎಂ.ಜಿ. ರೋಡ್)ಯಿಂದ ಗಾಂಧಿ ನಡಿಗೆ ಅಪರಾಹ್ನ 3 ಗಂಟೆಗೆ ಆರಂಭಗೊಳ್ಳಲಿದೆ. 2.30ಕ್ಕೆ ಎಲ್ಲ ಬ್ಲಾಕ್‌ಗಳಿಂದಲೂ ಕಾರ್ಯಕರ್ತರು ಆಗಮಿಸಲಿದ್ದಾರೆ. ಎಲ್ಲರೂ ಬಿಳಿ ಬಟ್ಟೆ ಧರಿಸಲಿದ್ದು, ಎಲ್ಲರ ಕೈಯಲ್ಲೂ ಚರಕ ಚಿಹ್ನೆಯ ಬಾವುಟ ಇರಲಿದೆ. ಶಿಸ್ತುಬದ್ಧ ನಡಿಗೆಯು ಎಂ.ಜಿ. ರಸ್ತೆ, ಪಿವಿಎಸ್, ಜ್ಯೋತಿ ಅಂಬೇಡ್ಕರ್ ವೃತ್ತದ ಮೂಲಕ ಹಾದು ಪುರಭವನಕ್ಕೆ ತಲುಪಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಶಿಸ್ತುಬದ್ಧ ನಡಿಗೆ
ಪ್ರತಿ ಬ್ಲಾಕ್‌ನಿಂದ ಕನಿಷ್ಠ 250 ಕಾಂಗ್ರೆಸಿಗರು ಬಿಳಿ ಉಡುಪು ಧರಿಸಿ ಭಾಗವಹಿಸಬೇಕು.
ಈಗಾಗಲೇ ಬ್ಲಾಕ್ ತಂಡಗಳ ಹೆಸರಿನಲ್ಲಿ ಲಾಟರಿ ಎತ್ತಲಾಗಿದೆ. ಬೆಳ್ತಂಗಡಿ ತಂಡ ಜಾಥಾದ ಮುಂಚೂಣಿಯಲ್ಲಿ ನಡೆಯಲಿದೆ. ಪುತ್ತೂರು ತಂಡ 4ನೇ ಸಾಲಿನಲ್ಲಿರಲಿದೆ. ಕೊನೆಯ ಸಾಲಿನಲ್ಲಿ ಮಂಗಳೂರು ತಂಡ ಇರಲಿದೆ. ಶಿಸ್ತುಬದ್ಧವಾಗಿ ನಡೆಯುವ ತಂಡಗಳಿಗೆ ಬಹುಮಾನ ನೀಡಲಾಗುತ್ತದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪ್ರತಿ ಬೂತ್‌ನಿಂದ ಇಬ್ಬರು ಕಾರ್ಯಕರ್ತರು ಪಾಲ್ಗೊಳ್ಳವಂತೆ ಮಾಡಬೇಕು. ಆಗ ಪುತ್ತೂರು ಬ್ಲಾಕ್‌ನಿಂದಲೇ 400 ಮಂದಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಉಮಾನಾಥ ಶೆಟ್ಟಿ, ಮುಖಂಡರಾದ ಧನಂಜಯ ಅಡ³ಂಗಾಯ, ಎಂ.ಬಿ. ವಿಶ್ವನಾಥ ರೈ, ಜೋಕಿಂ ಡಿ’ಸೋಜಾ, ಸುಬೋಧ್ ಆಳ್ವ, ಯಾಕೂಬ್ ದರ್ಬೆ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.