ಕೊರಿಯಾ ಓಪನ್: ಸಿಂಧು ಮೇಲೆ ಭರವಸೆ
Team Udayavani, Sep 24, 2019, 5:20 AM IST
ಇಂಚೆಯಾನ್: ವಿಶ್ವ ಚಾಂಪಿಯನ್ ಕಿರೀಟ ಏರಿಸಿಕೊಂಡ ಬಳಿಕ “ಚೀನ ಓಪನ್’ನಿಂದ ಬೇಗನೇ ಹೊರಬಿದ್ದ ಪಿ.ವಿ. ಸಿಂಧು ಮುಂದೆ ಈಗ ಮತ್ತೂಂದು ಸವಾಲು ಎದುರಾಗಿದೆ. ಮಂಗಳವಾರದಿಂದ “ಕೊರಿಯಾ ಓಪನ್ ಸೂಪರ್-500 ಬ್ಯಾಡ್ಮಿಂಟನ್’ ಪಂದ್ಯಾವಳಿ ಆರಂಭವಾಗಲಿದ್ದು, ಪ್ರಸಕ್ತ ಋತುವಿನ ಮೊದಲ ಬಿಡಬ್ಲ್ಯುಎಫ್ ವರ್ಲ್ಡ್
ಟೂರ್ ಪ್ರಶಸ್ತಿ ಭಾರತೀಯಳಿಗೆ ಒಲಿದೀತೇ ಎಂಬುದೊಂದು ಕುತೂಹಲ.
2017ರಲ್ಲಿ ಕೊರಿಯಾ ಓಪನ್ ಚಾಂಪಿಯನ್ ಆಗಿದ್ದ ಪಿ.ವಿ. ಸಿಂಧು, 400,000 ಡಾಲರ್ ಬಹುಮಾನ ಮೊತ್ತದ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಚೀನೀ ಮೂಲದ ಅಮೆರಿಕನ್ ಆಟಗಾರ್ತಿ ಬೀವೆನ್ ಜಾಂಗ್ ವಿರುದ್ಧ ಆಡಲಿದ್ದಾರೆ. ಬಸೆಲ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯ ಹಾದಿಯಲ್ಲಿ ಜಾಂಗ್ ಅವರಿಗೆ ಸಿಂಧು ಸೋಲಿನ ರುಚಿ ತೋರಿಸಿದ್ದರು.
ಮೊದಲ ಸುತ್ತು ದಾಟಿದರೆ ಸಿಂಧು ಮತ್ತೆ ಥಾಯ್ಲೆಂಡ್‌ನ ಪೊರ್ಣಪವೀ ಚುಚುವಾಂಗ್ ಅವರನ್ನು ಎದುರಿಸುವ ಸಾಧ್ಯತೆ ಇದೆ. ಚೀನ ಓಪನ್‌ನಲ್ಲಿ ಚುಚುವಾಂಗ್ ಅವರೇ ಭಾರತೀಯ ಆಟಗಾರ್ತಿಯನ್ನು ಹೊರದಬ್ಬಿದ್ದರು.
ಸೈನಾ ಕೂಡ ಕಣದಲ್ಲಿ
8ನೇ ಶ್ರೇಯಾಂಕದ ಸೈನಾ ನೆಹ್ವಾಲ್ ಕೂಡ ಕಣದಲ್ಲಿದ್ದಾರೆ. ಆದರೆ ಇತ್ತೀಚಿನ ಗಾಯದ ಸಮಸ್ಯೆಗಳು ಅವರ ಫಾರ್ಮ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ಕಳೆದ ವಾರದ ಚೀನ ಓಪನ್ ಸೇರಿದಂತೆ ಮಲೇಶ್ಯ ಓಪನ್, ನ್ಯೂಜಿಲ್ಯಾಂಡ್ ಓಪನ್, ಸುದೀರ್ಮನ್ ಕಪ್ ಕೂಟಗಳಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದರು. ಸೈನಾ ಅವರ ಮೊದಲ ಸುತ್ತಿನ ಎದುರಾಳಿ ಕೊರಿಯಾದ ಕಿಮ್ ಗಾ ಯುನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
Hockey: ಇಂದಿನಿಂದ ಜೂ. ಏಷ್ಯಾ ಕಪ್ ಹಾಕಿ; ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress Politics: ಡಿಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಭೇಟಿ: ಹೈಕಮಾಂಡ್ ಜತೆ ಚರ್ಚೆ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
By Election Result: ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ: ಬಿ.ವೈ.ವಿಜಯೇಂದ್ರ
Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ
EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.