ಈ ಊರಿನಲ್ಲಿ ಮೂಲ ಸೌಲಭ್ಯವೂ ಇಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರ ದತ್ತು ಗ್ರಾಮವಿದು
Team Udayavani, Sep 24, 2019, 5:30 AM IST
ಅನಾರೋಗ್ಯಪೀಡಿತ ರಾಮಣ್ಣ ಅವರನ್ನು ಹೊತ್ತು ಆಸ್ಪತ್ರೆಗೆ ಸಾಗಿಸಲಾಯಿತು.
ಸುಬ್ರಹ್ಮಣ್ಯ: ರಸ್ತೆಯಿಲ್ಲದೇ ಅನಾರೋಗ್ಯ ಪೀಡಿತರನ್ನು ಜನರು ಹೊತ್ತೂಯ್ಯುವ ದೃಶ್ಯ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಆಗಾಗ್ಗೆ ಕಾಣ ಸಿಗುತ್ತದೆ. ಆದರೆ ಅಂಥ ದೃಶ್ಯ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲೂ ಕಾಣಸಿಗುತ್ತದೆ.
ಇಲ್ಲಿ ಹಿಡಿ ಉಪ್ಪು ತರಬೇಕಿದ್ದರೂ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ತೆರಳಬೇಕು. ಚಿಮಿಣಿ ದೀಪಗಳೇ ಗತಿ. ವಾಸಕ್ಕೆ ಪ್ಲಾಸ್ಟಿಕ್ ಹೊದಿಕೆಯ ಮನೆಗಳು. ವಾಹನ ಸಂಪರ್ಕವೂ ಇಲ್ಲದ ಈ ಊರಿನಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ನಗರಕ್ಕೆ ಹೊತ್ತೂಯ್ಯಬೇಕು. ಗರ್ಭಿಣಿಯರು ಪ್ರಸವಕ್ಕೂ ಕೆಲವು ತಿಂಗಳು ಮೊದಲೇ ಊರು ತೊರೆಯಬೇಕು.
ಇತ್ತೀಚೆಗೆ ಪಡಿಕ್ಕಲಾಯದ ರಾಮಣ್ಣ ಪೂಜಾರಿ (72) ಅನಾ ರೋಗ್ಯಕ್ಕೆ ಒಳಗಾಗಿದ್ದರು. ಮನೆ ತನಕ ವಾಹನ ತರಲು ರಸ್ತೆ ಇಲ್ಲದ್ದರಿಂದ ಸ್ಥಳೀಯರು ಅವರನ್ನು ಕಾಡು ದಾರಿಯಲ್ಲಿ ಅರ್ಧ ದಾರಿ ತನಕ ಹೊತ್ತೂಯ್ದು ಬಳಿಕ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಪರಿಸರದಲ್ಲಿ 30ಕ್ಕೂ ಅಧಿಕ ಮನೆಗಳಿವೆ. ಬಳ್ಪ ಮುಖ್ಯ ಪೇಟೆ ಯಿಂದ ಇಲ್ಲಿಗೆ 3 ಕಿ.ಮೀ. ದೂರ ವಿದ್ದು ರಸ್ತೆ ಅಭಿವೃದ್ಧಿಯಾಗಿಲ್ಲ. ಕಾರ್ಜ, ಆಲ್ಕಬೆ, ಗೆಜ್ಜೆ ಕಣRಲ್, ನೀರಜರಿ, ಎಣ್ಣೆಮಜಲು, ಪಲ್ಲತ್ತಡ್ಕ ಬೀದಿಗುಡ್ಡೆ, ಕಾಯರ್ತಡ್ಕ ಮೊದಲಾದ ಪ್ರದೇಶಗಳ ಸ್ಥಿತಿಯೂ ಹೀಗೆಯೇ ಇದೆ. ತುರ್ತು ಸಂದರ್ಭಗಳಲ್ಲಿ ಪರದಾಟ ಪಡಲೇಬೇಕು.
ಇಂಥ ಚಿತ್ರಣ ಇರುವುದು ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿದ್ದರೂ ಮೂಲ ಸೌಕರ್ಯಗಳ ಕೊರತೆಯಿಂದ ಮುಕ್ತ ವಾಗಿಲ್ಲ. ಸಂಸದ ನಳಿನ್ ಕುಮಾರ್ ಕಟೀಲು ಈ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ.
ಆ ಬಳಿಕ ಖಾಸಗಿ ಕಂಪೆನಿಗಳ ಪ್ರಾಯೋಜಕತ್ವದಲ್ಲಿ ಬ್ಯಾಂಕ್, ಬಸ್ ತಂಗುದಾಣ, ಅಂಗನವಾಡಿ ಮೇಲ್ದರ್ಜೆ ಗೇರಿಸಿದ್ದು ಬಿಟ್ಟರೆ ಬೇರೆ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಖಾಸಗಿ ಕಂಪೆನಿಗಳ ಸಹಿತ ವಿವಿಧ ಮೂಲಗಳಿಂದ ಗ್ರಾಮಕ್ಕೆ ಇದುವರೆಗೆ ಹರಿದು ಬಂದಿರುವ ಅನುದಾನ 6,27,17,001 ರೂ. ಮಾತ್ರ. ಉಳಿದಂತೆ ಗ್ರಾಮಕ್ಕೆಂದು ವಿಶೇಷ ಅನುದಾನಗಳು ಇಲ್ಲಿಗೆ ಹರಿದು ಬಂದಿಲ್ಲ ಎಂಬುದು ಗ್ರಾಮಸ್ಥರ ಅಳಲು.
998 ಕುಟುಂಬ
ಬಳ್ಪ ಗ್ರಾಮದಲ್ಲಿ 998 ಕುಟುಂಬಗಳಿವೆ. ಪ.ಜಾತಿ ಮತ್ತು ಪಂಗಡಗಳ 8 ಕಾಲನಿಗಳಿವೆ. ಕೃಷಿ ಅವಲಂಬಿಸಿರು ವವರು, ಕೂಲಿ ಕಾರ್ಮಿಕರೇ ಅಧಿಕ. ಹಲವು ಮನೆಗಳಿಗೆ ಇಂದಿಗೂ ಪ್ಲಾಸ್ಟಿಕ್ ಹೊದಿಕೆಯೇ ಛಾವಣಿ. 46 ಮನೆಗಳಿಗೆ ಶೌಚಾಲಯ ಇಲ್ಲ. ವಿದ್ಯುತ್ ಇದ್ದರೂ ಹೆಸರಿಗಷ್ಟೇ; ಬಳಕೆಗೆ ಸಿಗುವುದು ಕೆಲವೇ ತಾಸು. ಬಿಎಸ್ಸೆನ್ನೆಲ್ ಮೊಬೈಲ್ ಟವರ್ ಇದ್ದರೂ ಸ್ತಬ್ಧ. ವೈದ್ಯಕೀಯ ಸೇವೆ ಬೇಕಿದ್ದರೆ 30 ಕಿ.ಮೀ. ದೂರದ ಸುಳ್ಯ ಅಥವಾ 60 ಕಿ.ಮೀ. ದೂರದ ಪುತ್ತೂರಿಗೆ ತೆರಳಬೇಕು. ನಡುರಾತ್ರಿ ಅನಾರೋಗ್ಯ ಕಾಣಿಸಿಕೊಂಡರೆ ಕಷ್ಟ ಹೇಳತೀರದು. ಪ್ರಸವದ ಸಮಯ ತಾಯಿ ಮನೆಗೆ ಬರುವ ಗರ್ಭಿಣಿಯರು ಹೆರಿಗೆಗೆ ಸಾಕಷ್ಟು ದಿನಗಳ ಮುನ್ನವೇ ಊರು ತೊರೆದು ಅನ್ಯರ ಮನೆಗಳಲ್ಲಿ ಉಳಿದುಕೊಳ್ಳುತ್ತಾರೆ. ರಸ್ತೆ ಸರಿ ಇಲ್ಲವೆಂಬ ಕಾರಣಕ್ಕೆ ಕಾಂಜಿ ಎಂಬಲ್ಲಿನ ಗರ್ಭಿಣಿ ಯರಿಬ್ಬರು ತವರಿಗೆ ಬರಲು ಹಿಂದೇಟು ಹಾಕಿದ್ದರು.
ಬಳ್ಪ ಸಂಸದರ ಆದರ್ಶ ಗ್ರಾಮ ವೆಂದು ಆಯ್ಕೆ ಯಾ ದಾಗ ಊರು ಅಭಿವೃದ್ಧಿಯಾಗ ಬಹು ದೆಂದು ನಿರೀಕ್ಷಿಸಲಾಗಿತ್ತು. ಆಶ್ವಾಸನೆ ಗಳು ಭರ ವಸೆ ಗಳಾಗಿಯೇ ಉಳಿದಿವೆ. ಮನೆ ಪಕ್ಕದ ನಿವಾಸಿ ಯೊಬ್ಬರು ಕಾಯಿಲೆಯಿಂದ ಬಳಲಿ ದಾಗ ಅವರನ್ನು ನಾವೇ ಹೊತ್ತು ಆಸ್ಪತ್ರೆಗೆ ಸಾಗಿ ಸಿದ್ದೇವೆ.
– ತುಳಸಿ ಪೂಜಾರಿ, ಸ್ಥಳೀಯರು
ಸಮಸ್ಯೆಯ ವಿಚಾರ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಈಗಷ್ಟೇ ಅರಿವಿಗೆ ಬಂದಿದೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
– ಎಸ್. ಅಂಗಾರ, ಶಾಸಕರು, ಸುಳ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.