ಅನಧಿಕೃತ ಲೇಔಟ್ ವಿರುದ್ಧ ಬುಡಾ ಸಮರ
Team Udayavani, Sep 24, 2019, 11:07 AM IST
ಬೆಳಗಾವಿ: ಕುಂದಾನಗರಿ ಬೆಳಗಾವಿ ನಗರ ಸ್ಮಾರ್ಟ್ ಸಿಟಿಯ ಪಟ್ಟ ಅಲಂಕರಿಸಿದರೂ ಅನಧಿಕೃತ ಬಡಾವಣೆಗಳ ಭೂತದ ಕಾಟದಿಂದ ಹೊರಬಂದಿಲ್ಲ. ನಗರದಲ್ಲಿ ನಾಯಿ ಕೊಡೆಯಂತೆ ತಲೆ ಎತ್ತುತ್ತಿರುವ ಅನಧಿಕೃತ ಲೇಔಟ್‌ಗಳಿಗೆ ಮೂಗುದಾರ ಹಾಕಿ ಸಮರ ಸಾರಲು ಮುಂದಾಗಿರುವ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಸೋಮವಾರ ಒಂದೇ ದಿನ 21 ಲೇಔಟ್‌ಗಳನ್ನು ತೆರವುಗೊಳಿಸಿದೆ.
ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ಅವರನ್ನೊಳಗೊಂಡ ತಂಡ ಸೋಮವಾರ ಬೆಳಗ್ಗೆ ದಾಳಿ ನಡೆಸಿ ಜೆಸಿಬಿ ಮೂಲಕ ಅನಧಿಕೃತ ಲೇಔಟ್‌ಗಳನ್ನು ನೆಲಸಮಗೊಳಿಸಿದೆ. ಇಲ್ಲಿಯ ಗಾಂಧಿನಗರ, ಬಸವನ ಕುಡಚಿ, ವಡಗಾಂವ, ಅನಗೋಳ ಹಾಗೂ ಪೀರನವಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಒಟ್ಟು 21 ಅನಧಿಕೃತ ಲೇಔಟ್‌ಗಳನ್ನು ತೆರವುಗೊಳಿಸಿದೆ.
ದೀಪಕರಾವ ಶ್ರೀಪಾಲ ಪಾಟೀಲ, ಜೀನಪ್ಪ ನೇಮಿನಾಥ ಪಾಟೀಲ, ವಿಘ್ನೇಶ್ವರ ಕೋ ಆಪ್ ಸೊಸೈಟಿ, ಸಂಜಯ ಪರಶುರಾಮ ಶಿಂಧೆ, ರವಿ ಪಾಟೀಲ, ಕಿತ್ತೂರ ಅಸೋಸಿಯೇಟ್ಸ್, ಯಲ್ಲಪ್ಪ ಪಾಟೀಲ, ಅಸ್ಲಮ ಇಸ್ಮಾಯಿಲ್ ಅತ್ತಾರ, ಸುರೇಶ ಬಾಳಪ್ಪ ಗುಂಟಪ್ಪನವರ, ಪುಂಡಲೀಕ ಗೋವಿಂದ ಧಾಮಣೇಕರ, ಗಂಗಾಧರ ಅಜೀತ ಕಳ್ಳಿಮನಿ, ಬಶೀರ ಅಹ್ಮದ ಇಮ್ರಾನ ತಾಶೀಲ್ದಾರ, ಬಂದೇನವಾಜ ಅಬ್ದುಲಸತ್ತಾರ ಬಾಳೇಕುಂದ್ರಿ, ಶ್ರೇಯಸ ಧರ್ಮಪ್ಪ ಕಲಕುಪ್ಪಿ, ಗುಂಡೋಜಿ ಶಿವಾಜಿರಾವ ಹಲಗೇಕರ,ಆದೀಲಬೇಗ್ ಅನ್ವರಬೇಗ್ ನಿಜಾಮಿ, ಸುಲೇಮಾನ ಅಲ್ಲಾಭಕ್ಷ ಅವಟಿ, ಆನೀಸ್‌ಅಹ್ಮದ ಇಬ್ರಾಹಿಂ ಖೋತವಾಲ, ಮೊಹ್ಮದಸಾಧಿಕ ಅಲ್ಲಾಭಕ್ಷ ಮುಲ್ಲಾ,
ಅಸ್ಲಮ್ ಅತ್ತಾರ ಎಂಬವರ ಅನಧಿಕೃತ ಲೇಔಟ್‌ಗಳು ತೆರವುಗೊಂಡಿವೆ. ಈ ಲೇಔಟ್‌ಗಳನ್ನು ಗುರುತಿಸಿ ಅಂಥ ಮಾಲೀಕರಿಗೆ 2-3 ಬಾರಿ ನೋಟಿಸ್‌ಗಳನ್ನು ಕಳುಹಿಸಲಾಗಿತ್ತು. ಆದರೆ ಯಾರೊಬ್ಬರೂ ನೋಟಿಸ್‌ಗೆ ಉತ್ತರ ನೀಡಿರಲಿಲ್ಲ. ಜತೆಗೆ ವಿಚಾರಣೆಗೆ ಕೂಡ ಹಾಜರಾಗಿರಲಿಲ್ಲ. ಹೀಗಾಗಿ ಸರ್ಕಾರದ ನಿಯಮಾವಳಿ ಪ್ರಕಾರ ನಮ್ಮ ಸಿಬ್ಬಂದಿಗಳೊಂದಿಗೆ ಹೋಗಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ತಿಳಿಸಿದ್ದಾರೆ.
ಬುಡಾ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಅಧಿಕೃತ ದಾಖಲೆಗಳನ್ನು ಪಡೆದುಕೊಳ್ಳದೇ ಸಿಕ್ಕ ಸಿಕ್ಕಲ್ಲಿ ಜಾಗ ಖರೀದಿಸಿರುವ ಅಕ್ರಮ ಕುಳಗಳು ಲೇಔಟ್‌ಗಳನ್ನು ನಿರ್ಮಿಸಿದ್ದಾರೆ. ಮಾರುಕಟ್ಟೆಯ ದರಕ್ಕಿಂತಲೂ ಕಡಿಮೆ ದರಕ್ಕೆ ಜಾಗ ಮಾರಾಟ ಮಾಡುತ್ತಿದ್ದಾರೆ. ಈ ಆಸೆಗೆ ಬಿದ್ದು ಜನರು ಮುಂಗಡ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಆದರೆ ಇವು ಅನಧಿಕೃತ ಎಂಬುದು ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ.
100 ರೂ. ಬಾಂಡ್ ಮೇಲೆ ಜಾಗಗಳನ್ನು ಮಾರಾಟ ಮಾಡುವ ಜಾಲ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ಅವರು, ಅನಧಿಕೃತ ಲೇಔಟ್‌ಗಳ ಆಸೆಗೆ ಬಿದ್ದು ಜಾಗ ಖರೀದಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರೂ ಜನರು ಎಚ್ಚೆತ್ತುಕೊಂಡಿರಲಿಲ್ಲ ಎಂದು ನಸಲಾಪುರೆ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.