ವಕೀಲರು ಸಮಾಜ ಸೇವೆಗೂ ಮುಂದಾಗಲಿ
Team Udayavani, Sep 24, 2019, 1:36 PM IST
ಚಿಕ್ಕಮಗಳೂರು: ವಕೀಲರು ತಮ್ಮ ವೃತ್ತಿ ಜೀವನದ ನಡುವೆಯೂ ಸಮಾಜ ಸೇವೆಗೆ ಸಮಯನೀಡಬೇಕೆಂದು ಹಿರಿಯ ವಕೀಲ ಟಿ.ಎಂ. ಕೃಷ್ಣಮೂರ್ತಿ ಕರೆ ನೀಡಿದರು.
ನಗರದ ಮಧುವನ ಬಡಾವಣೆಯ ಸಮರ್ಪಣಾ ಸಭಾಂಗಣದಲ್ಲಿ ನಡೆದ ಅಖೀಲ ಭಾರತೀಯ ಅಧಿವಕ್ತಾ ಪರಿಷತ್ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಯಾವುದೇ ಪ್ರತಿಫಲಾಪೇಕ್ಷೆ ನಿರೀಕ್ಷಿಸದೆ ರಾಷ್ಟ್ರ ಸೇವೆಗೆ ಮುಂದಾಗಬೇಕು. ಭ್ರಷ್ಟಾಚಾರವನ್ನು ತೊಲಗಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಹಿಂದೆ ರಾಷ್ಟ್ರೀಯ ಸ್ವಯಂಸೇವಕರು ಆಜನ್ಮ ಭ್ರಹ್ಮಚಾರಿಗಳಾಗಿದ್ದರು. ಅವರ ಜೀವನವನ್ನು ರಾಷ್ಟ್ರ ಸೇವೆಗೆ ಮಾತ್ರ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು.
ಹಿಂದೆ ಹಲವು ಸಂಘಟನೆಗಳು ದೇಶಸೇವೆಗೆಂದು ಹುಟ್ಟಿಕೊಂಡರು ಯಾವುದೂ ಶಾಶ್ವತವಾಗಿ ಉಳಿಯಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಬೆರಳೆಣಿಕೆಯಷ್ಟು ಸಂಘಟನೆಗಳು ಮಾತ್ರ ಉಳಿದಕೊಂಡಿವೆ ಎಂದರು. ಯುವ ವಕೀಲರು ಅಧಿವಕ್ತಾ ಸಂಘಟನೆಗೆ ಸೇರಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನಡೆಸಬೇಕು. ನಮ್ಮ ಜಿಲ್ಲೆಯಲ್ಲೂ ಸಂಘಟನೆ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ಯಾವುದೇ ಹಿಂಜರಿಕೆ ಇಲ್ಲದೇ ಸಮಾಜದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧಿವಕ್ತಾ ದಕ್ಷಿಣ ಭಾರತೀಯ ಪ್ರಾಂತ ಕಾರ್ಯದರ್ಶಿ ಎಲ್.ಎನ್.ಹೆಗ್ಡೆ ಮಾತನಾಡಿ, 1997 ರಲ್ಲಿ ಅಧಿವಕ್ತಾ ಸಂಘಟನೆ ಆರಂಭಗೊಂಡಿದೆ. ಇದರಲ್ಲಿ ಹಲವು ವಕೀಲರು ಸ್ವಯಂ ಸೇವಕರಾಗಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಎದ್ದು ನಿಂತು ಸ್ವಯಂ ಪ್ರೇರಿತರಾಗಿ ಹೋರಾಟ ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಭಾರತದ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂದರು. ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ವಕೀಲರ ಪಾತ್ರ ಮಹತ್ವದ್ದಾಗಿತ್ತು. ಆಗ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ನಿಷೇಧ ಹೇರಲಾಗಿತ್ತು. ಅದರ ವಿರುದ್ಧ
ಹಲವು ಸಂಘಟನೆಗಳು ಹುಟ್ಟಿಕೊಂಡವು. ಕೆಲವೇ ದಿನಗಳಲ್ಲಿ ಅವು ಮಾಸಿ ಹೋದವು. ಆದರೆ, ಆರ್ ಎಸ್‌ಎಸ್ ಮಾತ್ರ ಮಹತ್ತರ ಹೆಜ್ಜೆಗಳನ್ನು ಇಟ್ಟು ದೇಶದ ಏಕತೆ ಹಾಗೂ ಬಲಿಷ್ಠತೆಗೆ ಶ್ರಮಿಸಿದೆ ಎಂದರು.
ಅಧಿವಕ್ತಾ ಸಮಾವೇಶಗಳು ದೇಶದ ಹಲವು ಕಡೆಗಳಲ್ಲಿ ನಡೆದು ಅದರಿಂದ ಹಲವರು ಪ್ರೇರಣಗೊಳ್ಳುವಂತಾಯಿತು. ಹೋರಾಟ ಮಾತ್ರವೇ ಸಮಾಜ ಸೇವೆಯಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಅದನ್ನು ಪರಿಹರಿಸುವುದು ಸಹ ಸಮಾಜ ಸೇವೆಯಾಗುತ್ತದೆ ಎಂದರು.
ಜಮ್ಮು, ಕಾಶ್ಮೀರದ ಆರ್ಟಿಕಲ್ 370 ವಿರುದ್ಧ ಹಿಂದಿನಿಂದಲೂ ಹೋರಾಟ ನಡೆದುಕೊಂಡೇ ಬಂದಿತ್ತು. ಈಗ ಅದು ರದ್ದಾಗಿರುವುದು ಶ್ಲಾಘನೀಯ. ಯುವ ವಕೀಲರು ಅಧಿವಕ್ತಾ ಸಂಘಟನೆಯಲ್ಲಿ ಸೇರಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಅಧಿವಕ್ತಾದ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ರಾವ್, ರಾಜ್ಯ ಕಾರ್ಯದರ್ಶಿ ಅನಂತಮೂರ್ತಿ, ತಾಲೂಕು ಅಧ್ಯಕ್ಷ ಭರತ್, ಸಿದ್ಧಪ್ಪ, ಹೇಮಂತ್ ಹಾಗೂ ರಘು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.