ಇವಿಎಂ ಮೆಷಿನ್ ದುರುಪಯೋಗವಾಗುತ್ತಿದೆ :ಖರ್ಗೆ ಆರೋಪ
Team Udayavani, Sep 24, 2019, 3:03 PM IST
ಬೆಂಗಳೂರು : ಕೆಲವು ಕ್ಷೇತ್ರಗಳಲ್ಲಿ ಇವಿಎಂ ಮೆಷಿನ್ ಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ, ನಾನು ಸೋತಿದ್ದೇನೆ ಅಂತ ಆರೋಪ ಮಾಡುತ್ತಿಲ್ಲ ಇದಕ್ಕೆ ಸಮರ್ಪಕ ಉದಾಹರಣೆಯೂ ನನ್ನ ಬಳಿ ಇದೆ ಎಂದ ಅವರು ಗುರುಮಿಠ್ಕಲ್ ನಲ್ಲಿ 1952 ನಿಂದ 2019 ವರೆಗೆ ಕಾಂಗ್ರೆಸ್ ಆಡಳಿತ ಇತ್ತು ಈ ಕ್ಷೇತ್ರದಲ್ಲಿ ಹಲವರು ಕಾಂಗ್ರೆಸ್ ನಲ್ಲಿ ಸ್ಪರ್ದಿಸಿ ಗೆದ್ದಿದ್ದಾರೆ ಅಲ್ಲದೆ ಕಾಂಗ್ರೆಸ್ ಸಂಸದರಿಗೆ ಗುರುಮಿಠ್ಕಲ್ ಕ್ಷೆತ್ರ ಲೀಡ್ ಕೊಟ್ಟಿದೆ ನಾನು ಶಾಸಕನಾಗಿದ್ದಾಗಲೂ ಅಲ್ಲಿ ಕಾಂಗ್ರೆಸ್ ಇತ್ತು,
ನನ್ನ ಕ್ಷೆತ್ರವನ್ನು ಚಿತ್ತಾಪುರಕ್ಕೆ ಬದಲಾವಣೆ ಮಾಡಿದ ಮೇಲೂ ಅಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು ಇಂತಹ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಬರುತ್ತೆ ಅಂದ್ರೆ ಹೇಗೆ ಸಾಧ್ಯ, ಇದೆಲ್ಲ ಬಿಜೆಪಿಯವರ ವ್ಯವಸ್ಥಿತವಾದ ಷಡ್ಯಂತರ ಅಲ್ಲದೆ ಬೇರೇನೂ ಇಲ್ಲ ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರಕ್ಕೆ ಆರ್ ಎಸ್ ಎಸ್ ನವರು ಎರಡು ವರ್ಷ ಮೊದಲೇ ಬರುತ್ತಾರೆ, ಪ್ರಧಾನಿ ಮೋದಿ ಅವರು ಕೂಡ ಹೆಚ್ಚಿನ ಒತ್ತು ನನ್ನ ಕ್ಷೇತ್ರಕ್ಕೆ ನೀಡುತ್ತಾರೆ ಅಂದರೆ ಅನುಮಾನ ಬರುವುದು ಸಹಜ ಇದು ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.