ಪಟ್ಟಣ ಸೌಂದರ್ಯಿಕರಣ 6 ಕೋಟಿ
Team Udayavani, Sep 24, 2019, 3:51 PM IST
ತಾಳಿಕೋಟೆ: ಪಟ್ಟಣದ ಸೌಂದರ್ಯಿಕರಣ ದೃಷ್ಟಿಯಿಂದ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿ ಮುಖ್ಯಭಾಗದ ಎಲ್ಲ ರಸ್ತೆಗಳಲ್ಲಿ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿತು.
ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಎಸ್. ಪಾಟೀಲ, ಕಿರಿಯ ಅಭಿಯಂತರ ಜಿ.ವೈ. ಮುರಾಳ ಅವರು ಪುರಸಭೆ ಸದಸ್ಯರೊಂದಿಗೆ ಕೆಪಿಟಿಸಿಎಲ್ ಕಚೇರಿ ಹತ್ತಿದ ಜಾನಕಿ ಹಳ್ಳದಿಂದ ಬಸ್ ಘಟಕದವರೆಗೆ ಹಾಗೂ ವಿಜಯಪುರ ಸರ್ಕಲ್‌ದಿಂದ ಶಿವಾಜಿ ವೃತ್ತದವರೆಗೆ ಯಾವ ಯಾವ ಕೆಲಸ ಆಗಬೇಕೆನ್ನುವುದರ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಪತ್ರಿಕೆಯೊಂದಿಗೆ ಜಿ.ಎಸ್ .ಪಾಟೀಲ ಮಾತನಾಡಿ, ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ತಾಳಿಕೋಟೆ ಪಟ್ಟಣ ಹೈಟೆಕ್ ಸಿಟಿಯನ್ನಾಗಿಸಲು ಮುಖ್ಯ ರಸ್ತೆಗಳಲ್ಲಿ ಏನೇನು ಕೊರತೆಗಳಿಗೆ ಅವುಗಳ ಪಟ್ಟಿ ಮಾಡಿ ಅಂದಾಜು ಪತ್ರಿಕೆ ಸಲ್ಲಿಸಲು ಸೂಚಿಸಿದ್ದಾರೆ.
ಈ ಕಾರಣದಿಂದ ಜಾನಕಿ ಹಳ್ಳದಿಂದ ಬಸ್ ಘಟಕದವರೆಗೆ ರಸ್ತೆ ಅಗಲೀಕರಣದ ಜೊತೆಗೆ ದುರಸ್ತಿ, ವಿಜಯಪುರ ವೃತ್ತದಿಂದ ಶಿವಾಜಿ ಚೌಕಿನವರೆಗೆ ರಸ್ತೆ ಅಗಲೀಕರಣ ಹಾಗೂ ಸಂಪೂರ್ಣ ಸಿಸಿ ರಸ್ತೆ ನಿರ್ಮಾಣ ಮಾಡುವುದರೊಂದಿಗೆ ಎಡ ಬಲದಲ್ಲಿ ಟೈಲ್ಸ್, ಫುಟ್‌ಪಾತ್ ನಿರ್ಮಿಸುವದು ಮತ್ತು ವಿದ್ಯುತ್ ದೀಪ ಅಳವಡಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು. ಪುರಸಭೆ ಮುಖ್ಯಾ ಧಿಕಾರಿ ಸುರೇಶ ನಾಯಕ, ಸದಸ್ಯರಾದ ವಾಸುದೇವ ಹೆಬಸೂರ, ಮುತ್ತಣ್ಣ ಚಮಲಾಪುರ, ಜಯಸಿಂಗ್ ಮೂಲಿಮನಿ, ನಿಂಗರಾಜ ಕುಂಟೋಜಿ, ಮಾಜಿ ಸದಸ್ಯ ಪ್ರಕಾಶ ಹಜೇರಿ ಹಾಗೂ ಮಂಜು ಶೆಟ್ಟಿ, ದತ್ತು ಹೆಬಸೂರ, ರಾಜಶೇಖರ ಪಾಟೀಲ, ಶಂಬು ಹಂದಿಗನೂರ, ಕಾಶೀನಾಥ ಮಬ್ರುಮಕರ, ಸನಾ ಕೆಂಭಾವಿ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.