ಅನುದಾನ ವಾಪಸಾಗಿದೆ, ಸಧ್ಯಕ್ಕೆ ತೇಪೆ ಹಾಕ್ತೇವೆ

ನಾಗರಿಕರ ಅನುಕೂಲಕಾಗಿ ಜೋಡಿ ರಸ್ತೆ ಗುಂಡಿಗೆ ಸದ್ಯಕ್ಕೆ ತೇಪೆ ಭಾಗ

Team Udayavani, Sep 24, 2019, 4:53 PM IST

Udayavani Kannada Newspaper

ಕೋಲಾರ: ರಸ್ತೆ ಅಗಲೀಕರಣ ಕಾಮಗಾರಿ ಅನುದಾನ ಸರ್ಕಾರ ವಾಪಸ್‌ ಪಡೆದುಕೊಂಡಿರುವುದರಿಂದ ಸದ್ಯಕ್ಕೆ ಗುಂಡಿಗಳಿಗೆ ತೇಪೆ ಹಚ್ಚುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಪೌರಾಯುಕ್ತ ಜೆ. ಶಿವಪ್ರಕಾಶ್‌ ಹೇಳಿದರು.

ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ಪೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ತುರ್ತಾಗಿ ತೇಪೆ ಹಚ್ಚುವುದು, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಹಾಗೂ ಸ್ವತ್ಛತಾ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.

ನನೆಗುದಿಗೆ ಬಿದ್ದ ಕಾಮಗಾರಿ: ನಗರದ ಸುತ್ತಲೂ ಇರುವ ಜೋಡಿ ರಸ್ತೆ ಅಗಲೀಕರಣ ಮಾಡಿ ಚರಂಡಿ, ಫುಟ್ಪಾತ್‌ ಸೇರಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ಸಂಬಂಧ ಸಭೆ ನಡೆಸಿ, ಕಟ್ಟಡ ತೆರವುಗೊಳಿಸಲು ಅಳತೆ ಮಾಡಿ ಗುರುತು ಹಾಕಲಾಗಿತ್ತು. ಗಣೇಶ ಹಬ್ಬ ಮುಗಿಯುತ್ತಿದ್ದಂತೆಯೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ನೆರೆ ಪರಿಹಾರಕ್ಕೆ ಅನುದಾನ ಕೊರತೆ ನೆಪವೊಡ್ಡಿ ಕೋಲಾರಕ್ಕೆ ಬಿಡುಗಡೆ ಮಾಡಿದ್ದ ಅನುದಾನ ವಾಪಸ್‌ ಪಡೆದುಕೊಂಡಿದ್ದರಿಂದ ರಸ್ತೆ ಅಗಲೀಕರಣ ಕಾಮಗಾರಿ ನನೆಗುದಿಗೆ ಬೀಳುವಂತಾಗಿದೆ.

8.8 ಲಕ್ಷ ರೂ.ನಲ್ಲಿ ದುರಸ್ತಿ: ಇದರಿಂದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮತ್ತು ಪೌರಾಯುಕ್ತ ಜೆ. ಶಿವಪ್ರಕಾಶ್‌ ಇತರ ಅಧಿಕಾರಿಗಳು ಇತ್ತೀಚಿಗೆ ಸಭೆ ಸೇರಿ ಕೋಲಾರದಲ್ಲಿ ಹದೆಗೆಟ್ಟಿರುವ ರಸ್ತೆಗಳನ್ನು ತೇಪೆ ಹಾಕುವ ಮೂಲಕವಾದರೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ನಗರಸಭೆಯ ವಿವಿಧ ಯೋಜನೆಗಳಲ್ಲಿ ಉಳಿಕೆ  ಯಾಗಿದ್ದ 8.8 ಲಕ್ಷ ರೂ. ಅನ್ನು ಕ್ರೋಡೀಕರಿಸಿ ಈ ಅನುದಾನದಲ್ಲಿ ರಸ್ತೆಗಳಿಗೆ ತೇಪೆ ಹಾಕುವ ಕಾಮಗಾರಿ ಕೈಗೆತ್ತಿಕೊಳ್ಳಲು ಟೆಂಡರ್‌ ಕರೆಯಲಾಗಿದೆ ಎಂದು ಪೌರಾಯುಕ್ತರು ವಿವರಿಸಿದರು. ಈ ಕಾಮಗಾರಿಯಲ್ಲಿ ಬೈಪಾಸ್‌ನಿಂದ ಗಡಿಯಾರ

ಗೋಪುರವರೆಗಿನ ರಸ್ತೆ, ಆನಂತರ ಗಡಿಯಾರ ಗೋಪುರದಿಂದ ಬಂಗಾರಪೇಟೆ ವೃತ್ತದ ಕಡೆಗೆ, ಬಸ್‌ ನಿಲ್ದಾಣದಿಂದ ಮೆಕ್ಕೆ ವೃತ್ತದವರೆಗೆ, ಬಂಗಾರಪೇಟೆ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗಿನ ಜೋಡಿ ರಸ್ತೆಯ ಹಳ್ಳಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ ಕಾರಂಜಿಕಟ್ಟೆ ಮತ್ತು ನಗರದ ಇತರೇ ಭಾಗದ ರಸ್ತೆಗಳನ್ನು 14 ನೇ ಫೈನಾನ್ಸ್‌ ಯೋಜನೆಯಡಿ ಬರುವ ಅನುದಾನದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಕಸ ವಿಲೇವಾರಿ: ಕೋಲಾರ ನಗರದಲ್ಲಿ ಪ್ರತಿ ನಿತ್ಯವೂ 60 ರಿಂದ 70 ಟನ್‌ ಕಸ ಉತ್ಪತ್ತಿಯಾಗುತ್ತಿದ್ದು, ಒಣ ಹಾಗೂ ಹಸಿ ಕಸವೆಂಬುದಾಗಿಯೇ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಕೆಲವು ವಾರ್ಡ್ ಗಳಲ್ಲಿ ಮನೆ ಮನೆ ಪ್ರಚಾರ ನಡೆಸಲಾಗುತ್ತಿದೆ. ಹೀಗೆ ಸಂಗ್ರಹಿಸುವ ಹಸಿ ಕಸವನ್ನು ಮಣಿಘಟ್ಟ ರಸ್ತೆಯ ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.

ಒಣ ಕಸವನ್ನು ಮುಳಬಾಗಿಲು ರಸ್ತೆಯಲ್ಲಿರುವ ಪೊಂಬರಹಳ್ಳಿಯಲ್ಲಿ ಜಿಲ್ಲಾಧಿಕಾರಿ ಮಂಜೂರು ಮಾಡಿರುವ ಏಳೆಂಟು ಎಕರೆ ಜಾಗಕ್ಕೆ ಕಾಂಪೌಂಡ್‌ ಹಾಕಿಸಿ, ಅಲ್ಲಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ಪೌರಾಯುಕ್ತರು ವಿವರಿಸಿದರು. ಕಸ ವಿಲೇವಾರಿಗಾಗಿ 17 ಮಿನಿ ಟ್ರಕ್‌ ಖರೀದಿಸಲಾಗುತ್ತಿದೆ. ಈಗಾಗಲೇ 11 ವಾಹನಗಳು ಆಗಮಿಸಿವೆ. ಸದ್ಯಕ್ಕೆ ಕಸ ವಿಲೇವಾರಿಗಾಗಿ 5 ಟ್ರ್ಯಾಕ್ಟರ್‌, 3 ಟಿಪ್ಪರ್‌ ಹಾಗೂ 6 ಸರಕು ಸಾಗಣೆ ಆಟೋ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಆದಾಯ ಸಂಗ್ರಹ: ನಗರಸಭೆಯ ಆದಾಯವನ್ನು ಕ್ರೂಢೀಕರಿಸುವ ಸಲುವಾಗಿ ಪ್ರತಿ ನಿತ್ಯವೂ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೂ ತೆರಿಗೆ ಸಂಗ್ರಹಿಸುವ ಕಾರ್ಯದಲ್ಲಿ ಮಗ್ನವಾಗುವಂತೆ ನಗರಸಭೆ ಅಧಿಕಾರಿ ಸಿಬ್ಬಂದಿಗೆ ಸೂಚಿಸಲಾಗಿದೆ. ಇದರಿಂದ ತೆರಿಗೆ ಸಂಗ್ರಹಣೆ ಹೆಚ್ಚಾಗಿ ನಗರಸಭೆ ಆದಾಯ ಹೆಚ್ಚಿ ಅಭಿವೃದ್ಧಿ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಚೇರಿ ಕೆಲಸ: ನಗರಸಭೆ ಕೆಲಸ ಕಾರ್ಯಗಳು ಮಧ್ಯವರ್ತಿಗಳಿಲ್ಲದೆ ನಡೆಯುವುದಿಲ್ಲವೆಂಬ ಆರೋಪ ಸಾರ್ವಜನಿಕ ವಲಯದಲ್ಲಿತ್ತು. ಈ ವ್ಯವಸ್ಥೆ ತಡೆಯುವ ಸಲುವಾಗಿ ಸಾರ್ವಜನಿಕರು ಇನ್ನು ಮುಂದೆ ಮಧ್ಯಾಹ್ನ 3 ರಿಂದ ಸಂಜೆಯವರೆಗೂ ನಗರಸಭೆಗೆ ಖುದ್ದು ಭೇಟಿ ನೀಡಿ, ತಮ್ಮ ಕಚೇರಿ ಕೆಲಸ ಕಾರ್ಯಗಳಾದ ಖಾತೆ ಬದಲಾವಣೆ, ಜನನ, ಮರಣ ಪ್ರಮಾಣ ಪತ್ರ ಪಡೆಯುವುದು ಇತ್ಯಾದಿ ಕೆಲಸ ಮಾಡಿಸಿ ಕೊಳ್ಳಬಹುದು. ಈ ಅವಧಿಯಲ್ಲಿ ನಾವೂ ಸೇರಿದಂತೆ ಕಚೇರಿಯ ಅಧಿಕಾರಿ, ಸಿಬ್ಬಂದಿ ನಗರಸಭೆ ಯಲ್ಲಿ ಇರುವು ದಾಗಿವಿವರಿಸಿ, ಸಾರ್ವಜನಿಕರು ತಮ್ಮ ಕೆಲಸಗಳು ಆಗದಿದ್ರೆ ನೇರವಾಗಿ ಭೇಟಿಯಾಗಿ ಮಧ್ಯಾಹ್ನದ ವೇಳೆ ಚರ್ಚಿಸಬಹುದು ಎಂದು ಹೇಳಿದರು.

 

-ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.