ಸೆ. 29ರಿಂದ ದಹಿಸರ್‌ “ದಸರೋತ್ಸವ’

Team Udayavani, Sep 24, 2019, 6:18 PM IST

mumbai-tdy-1

ಮುಂಬಯಿ, ಸೆ. 23: ಗೌಡ ಸಾರಸ್ವತ್‌ ಬ್ರಾಹ್ಮಣ್‌ ಸಭಾ ದಹಿಸರ್‌ ಬೊರಿವಲಿ ಇದರ ಸಾರಸ್ವತ ಕಲ್ಚರಲ್‌ ಮತ್ತು ರಿಕ್ರಿಯೇಶನ್‌ ಸೆಂಟರ್‌ನ 12ನೇ ವಾರ್ಷಿಕ ನವರಾತ್ರಿ ಉತ್ಸವವು ಸೆ. 29 ರಿಂದ ಅ. 8ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ದೈವಕ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಕೃಪಾನುಗ್ರಹ ಹಾಗೂ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ದಹಿಸರ್‌ ಪೂರ್ವದ ಎನ್‌. ಎಲ್‌. ಕಾಂಪ್ಲೆಕ್ಸ್‌ನ ಸಾರಸ್ವತ ಕಲ್ಚರಲ್‌ ಆ್ಯಂಡ್‌ ರಿಕ್ರಿಯೇಷನ್‌ ಸೆಂಟರ್‌ ಮೈದಾನದಲ್ಲಿ ನಿರ್ಮಾಣಗೊಂಡಿರುವ ಮಾಧವೇಂದ್ರ ಸಭಾಗೃಹದಲ್ಲಿ ಉತ್ಸವವು ಜರಗಲಿದೆ.

ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಅಭಯಹಸ್ತಗಳಿಂದ ಸಮರ್ಪಿತಗೊಂಡ ಸ್ವರ್ಣ ಮುಕುಟದೊಂದಿಗೆ ವಜ್ರ, ಚಿನ್ನಾಭರಣಗಳಿಂದ ಅಲಂಕೃಗೊಳ್ಳುವ ದೇವಿಯನ್ನು ರಜತ ಪ್ರಭಾವಳಿಯಲ್ಲಿ ಪ್ರತಿಷ್ಠಾಪಿಸಿ ಒಂಭತ್ತು ದಿನಗಳ ಕಾಲ ಪೂಜಿಸಲಾಗುವುದು.

ಸೆ. 2 ರಂದು ಬೆಳಗ್ಗೆ 9 ರಿಂದ ಶ್ರೀಹರಿ ಗುರು ಸೇವಾ ಪ್ರತಿಷ್ಠಾನವು ಶ್ರೀದೇವಿಯ ಪ್ರತಿಮೆಯನ್ನು ಸಮರ್ಪಿಸಿದ ಬಳಿಕ ಉತ್ಸವದ ಒಂಬತ್ತು ದಿನಗಳಲ್ಲೂ ದೇವಿಯನ್ನು ವಿಭಿನ್ನ ರೂಪಳಿಂದ ಶೃಂಗರಿಸಿ ಆರಾಧಿಸಲಾಗುವುದು. ಸೆ. 29 ರಂದು ಸರಸ್ವತಿದೇವಿ ಆರಾಧನೆಯೊಂದಿಗೆ ಆದಿಗೊಂಡು ಬಳಿಕ ಕ್ರಮವಾಗಿ ಶಾಂತಾದುರ್ಗಾ, ಚಾಮುಂಡೇಶ್ವರಿ, ಅನ್ನಪೂರ್ಣೆàಶ್ವರಿ, ಚಂಡಿಕಾ ದೇವಿ, ಮಹಾಲಕ್ಷ್ಮೀ, ದುರ್ಗಾ ಪರಮೇಶ್ವರಿ, ಮಹಾಕಾಳಿ, ವೈಷ್ಣೋದೇವಿ ಹಾಗೂ ವಿಜಯದಶಮಿಯ ದಿನ ಶಾರದಾ ದೇವಿಯನ್ನು ಆರಾಧಿಸಲಾಗುವುದು.

ದಿನಂಪ್ರತಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಂಚಾಮೃತ ಅಭಿಷೇಕ, ಚಂಡಿಕಾ ಹವನ, ತುಲಾಭಾರ ಸೇವೆ, ಪಂಚನೈವೇದ್ಯ ಮಹಾಭೋಗ, ಮಧ್ಯಾಹ್ನ ಪೂಜೆ, ದುರ್ಗಾ ನಮಸ್ಕಾರ, ದೀಪಾರಾಧನೆ, ಪುಷ್ಪಾಲಂಕಾರ ಸೇವೆ, ರಂಗಪೂಜೆ, ರಾತ್ರಿ ಪೂಜೆ, ಅ. 3 ರಂದು ಲಕ್ಷಿ¾à ನಾರಾಯಣ ಹೃದಯ ಹವನ, ಅ. 6 ರಂದು ಮಹಾಕಾಳಿ ದೇವಿಯ ಆರಾಧನೆ, ಪೂರ್ವಾಹ್ನ ಸಾಮೂಹಿಕ ಕುಂಕುಮಾರ್ಚನೆ ಸೇವೆ, ಸಂಜೆ ದೀಪೋತ್ಸವ ಮತ್ತು ಪ್ರಸಾದ ಸೇವೆ, ಅ. 7 ರಂದು ಮಹಾ ಚಂಡಿಕ ಹವನ, ಸಂಜೆ ವಾಹನ ಪೂಜೆ, ಆಯುಧ ಪೂಜೆ ನೆರವೇರಲಿದೆ. ದಿನಂಪ್ರತಿ ಆಗಮಿಸುವ ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಲಿದೆ. ಅ. 2 ರಂದು ಪೂರ್ವಾಹ್ನ 10 ರಿಂದ ಅಪರಾಹ್ನ 4 ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಪ್ರಕೃತಿ ಚಿಕಿತ್ಸೆ, ರಕ್ತದಾನ ವೈದ್ಯಕೀಯ ಸೇವಾ ಕಾರ್ಯಕ್ರಮ ನಡೆಯಲಿದೆ.

ಅ. 8 ರಂದು ವಿಜಯದಶಮಿ ದಿನ ಶಾರದಾ ದೇವಿಯನ್ನು ಪೂಜಿಸಲಾಗುವುದು. ಬೆಳಗ್ಗೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸಂಜೆ 5 ರಿಂದ ವಿಸರ್ಜನಾ ಮೆರವಣಿಗೆ ನೇರವೇರಲಿದೆ ಎಂದು ನವರಾತ್ರಿ ಉತ್ಸವದ ಪ್ರಧಾನ ಸಂಘಟಕ, ಜಿಎಸ್‌ಬಿ ಸಭಾದ ಉಪಾಧ್ಯಕ್ಷ ಮನೋಹರ್‌ ವಿ. ಕಾಮತ್‌ ತಿಳಿಸಿದ್ದಾರೆ.

ಜಿಎಸ್‌ಬಿ ಸಭಾದ ಸಂಚಾಲಕರಾದ ಕೆ. ಶ್ರೀನಿವಾಸ ಪ್ರಭು, ಜಿ. ಡಿ. ರಾವ್‌, ಗಣೇಶ್‌ ವಿ. ಪೈ, ಶೋಭಾ ವಿ. ಕುಲ್ಕರ್ಣಿ, ಸಗುಣಾ ಕೆ. ಕಾಮತ್‌, ಗೌರವ ಕಾರ್ಯಾಧ್ಯಕ್ಷ ಕೆ. ಆರ್‌. ಮಲ್ಯ, ಅಧ್ಯಕ್ಷ ಎಂ. ಯು. ಪಡಿಯಾರ್‌, ಉಪಾಧ್ಯಕ್ಷ ಸಾಣೂರು ಮನೋಹರ್‌ ವಿ. ಕಾಮತ್‌, ಗೌರವ ಪ್ರಧಾನ ಕಾರ್ಯದರ್ಶಿ ವಿಷ್ಣು ಆರ್‌. ಕಾಮತ್‌, ಗೌರವ ಕೋಶಾಧಿಕಾರಿ ಮೋಹನ್‌ ಎ. ಕಾಮತ್‌, ಜೊತೆ ಕಾರ್ಯದರ್ಶಿಗಳಾದ ಗುರುಪ್ರಸಾದ್‌ ವಿ. ಪೈ ಮತ್ತು ಜಯೇಶ್‌ ಎಚ್‌. ಪ್ರಭು, ಜೊತೆ ಕೋಶಾಧಿಕಾರಿ ಪಿ. ಎಸ್‌. ಕಾಮತ್‌, ಇತರ ಪದಾಧಿಕಾರಿಗಳು ಹಾಗೂ ಸದಸ್ಯರ ಸೇವೆಯೊಂದಿಗೆ ನಡೆಸಲ್ಪಡುವ ಈ ಉತ್ಸವದಲ್ಲಿ ಸಮಸ್ತ ಭಕ್ತರು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ಪ್ರಕಟನೆ ತಿಳಿಸಿದೆ.

ಮಾಹಿತಿ: ರೋನ್ಸ್ಬಂಟ್ವಾಳ್

ಟಾಪ್ ನ್ಯೂಸ್

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

Supreme Court upheld the validity of the UP Madarsa Act

Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Congress: ಜಮೀರ್‌ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ‌ ದೂರು

Bid for 2036 Olympics: Official application from India to IOC

Olympics; 2036ರ ಒಲಿಂಪಿಕ್ಸ್‌ಗೆ ಬಿಡ್‌: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ

R.Ashok

Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್‌ ರಾಜೀನಾಮೆಗೆ ಬಿಜೆಪಿ ಪಟ್ಟು

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.