ಮೆಟ್ರೋ ನಿಲ್ದಾಣಗಳಲ್ಲಿ ಬಸ್‌ ಮಾಹಿತಿ?


Team Udayavani, Sep 25, 2019, 3:09 AM IST

metro

ಬೆಂಗಳೂರು: “ನಮ್ಮ ಮೆಟ್ರೋ’ ಪ್ರಯಾಣಿಕರಿಗೊಂದು ಖುಷಿ ಸುದ್ದಿ. ಇನ್ಮು ಮುಂದೆ ಪ್ರಯಾಣ ಮುಗಿಸಿ ಮೆಟ್ರೋ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಬಸ್‌ ಆಗಮನದ ನಿಖರ ಮಾಹಿತಿ ನೀಡಲಿದೆ. ಇದರಿಂದ ಬಸ್‌ಗಳಿಗಾಗಿ ಕಾಯುವ ಗೋಳು ತಪ್ಪಲಿದೆ.

ಜಿಪಿಎಸ್‌ ಆಧಾರಿತ ಮೆಟ್ರೋ ನಿಲ್ದಾಣದ ಎಲ್ಲ 40 ನಿಲ್ದಾಣಗಳಲ್ಲಿ ಬಸ್‌ ಆಗಮನದ ನಿಖರ ಮಾಹಿತಿ ನೀಡುವ ಎಲ್‌ಇಡಿ ಫ‌ಲಕಗಳನ್ನು ಅಳವಡಿಸಲು ಬಿಎಂಟಿಸಿ ಮುಂದಾಗಿದ್ದು, ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದೊಂದಿಗೆ ಮಾತುಕತೆ ನಡೆಸಿದೆ. ನೆನೆಗುದಿಗೆ ಬಿದ್ದಿರುವ ಚತುರ ಸಾರಿಗೆ ವ್ಯವಸ್ಥೆಯಲ್ಲಿ ಈಗಷ್ಟೇ ಸುಧಾರಣೆ ಕಂಡುಬಂದಿದ್ದು, ತಿಂಗಳ ಅಂತರದಲ್ಲಿ ಈ ಪ್ರಯಾಣಿಕ ಮಾಹಿತಿ ಫ‌ಲಕಗಳನ್ನು ಪ್ರಾಯೋಗಿಕವಾಗಿ ಅಳವಡಿಸಲು ಉದ್ದೇಶಿಸಲಾಗಿದೆ.

40 ನಿಲ್ದಾಣಗಳಲ್ಲೂ ಅಳವಡಿಕೆ?: ಪ್ರತಿ ನಿಲ್ದಾಣದಲ್ಲಿ ತಲಾ ಕನಿಷ್ಠ ಎರಡು 40 ಇಂಚು ಗಾತ್ರದ ಎಲ್‌ಇಡಿ ಮಾಹಿತಿ ಫ‌ಲಕಗಳ ಅಳವಡಿಕೆಗೆ ಚಿಂತನೆ ನಡೆದಿದ್ದು, ಬಸ್‌ಗಳಲ್ಲಿರುವ ಜಿಪಿಎಸ್‌ ವ್ಯವಸ್ಥೆ ದುರಸ್ತಿಗೊಳ್ಳುತ್ತಿದ್ದಂತೆ ಒಂದಕ್ಕೊಂದು “ಲಿಂಕ್‌’ ಮಾಡಲಾಗುವುದು. ಆ ಮೂಲಕ ನಿಖರ “ರಿಯಲ್‌ ಟೈಮ್‌’ ಸೇವೆಗೆ ಕಲ್ಪಿಸಲಾಗುವುದು. ಆದರೆ ಮೆಟ್ರೋ ನಿಲ್ದಾಣಗಳಲ್ಲಿ ಈ ಫ‌ಲಕಗಳನ್ನು ಅಳವಡಿಸುವುದರಿಂದ, ಬಿಎಂಆರ್‌ಸಿಎಲ್‌ ಅನುಮತಿ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ.

ಮುಂದಿನ ಒಂದೆರಡು ದಿನಗಳಲ್ಲಿ ನಿಗಮದ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. ಪ್ರಸ್ತುತ ಮೆಟ್ರೋ ಪ್ರಯಾಣಿಕರಿಗೆ ಮುಖ್ಯವಾಗಿ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಅಗತ್ಯವಿದೆ. ಆದರೆ, ಇದಕ್ಕಾಗಿ 155 ಸಂಪರ್ಕ ಬಸ್‌ ಸೇವೆಗಳನ್ನು ಕಲ್ಪಿಸಲಾಗಿದ್ದು, ನಿತ್ಯ ಇವುಗಳು 1,900 ಟ್ರಿಪ್‌ಗ್ಳನ್ನು ಪೂರೈಸುತ್ತಿವೆ. ಆದರೆ, ಮಾಹಿತಿ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರಿಗೆ ಉಪಯೋಗ ಆಗುತ್ತಿಲ್ಲ.

ಸಾಮಾನ್ಯವಾಗಿ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಯಾವ ಬಸ್‌ ಎಷ್ಟೊತ್ತಿಗೆ ಬರುತ್ತದೆ ಎಂಬ ಮಾಹಿತಿ ಫ‌ಲಕಗಳಿಲ್ಲ. ಅಷ್ಟೇ ಅಲ್ಲ, ಆ ಮಾಹಿತಿ ನೀಡುವ ಸಿಬ್ಬಂದಿಯೂ ಅಲ್ಲಿಲ್ಲ. ಹಾಗೂ ನಿಗಮದ ಸಿಬ್ಬಂದಿಗೂ ಗೊತ್ತಿಲ್ಲ. ಪರಿಣಾಮ ಜನ ಅನಿವಾರ್ಯವಾಗಿ ಬಸ್‌ ಬದಲಿಗೆ ಆಟೋ ಅಥವಾ ಕ್ಯಾಬ್‌ಗಳತ್ತ ಮುಖಮಾಡುತ್ತಿದ್ದಾರೆ. ಆದ್ದರಿಂದ ಡಿಜಿಟಲ್‌ ಫ‌ಲಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಬಿಎಂಟಿಸಿ ಸಂಚಾರ ವಿಭಾಗದ ಅಧಿಕಾರಿಯೊಬ್ಬರು ವಿವರಿಸಿದರು.

ಆದಾಯ ಹೆಚ್ಚುವ ನಿರೀಕ್ಷೆ: ಸಾಮಾನ್ಯ ಮಾರ್ಗಗಳಲ್ಲಿನ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ (ಪ್ಯಾಸೆಂಜರ್‌ ಲೋಡ್‌) ಸರಾಸರಿ 40 ಇದ್ದು, ಇದರಿಂದ ಪ್ರತಿ ಕಿ.ಮೀ. 30 ರೂ.ಗೂ ಅಧಿಕ ಆದಾಯ ಬರುತ್ತದೆ. ಆದರೆ, ಮೆಟ್ರೋ ಸಂಪರ್ಕ ಸೇವೆಗಳಲ್ಲಿ ಪ್ಯಾಸೆಂಜರ್‌ ಲೋಡ್‌ 30 ಇದ್ದು, ಸರಾಸರಿ ಆದಾಯ ಪ್ರತಿ ಕಿ.ಮೀ. 22ರಿಂದ 23 ರೂ. ಇದೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಈ ವ್ಯತ್ಯಾಸ ನಿರಂತರವಾಗಿದೆ. ಒಂದು ವೇಳೆ ಬಸ್‌ ಆಗಮನದ ಬಗ್ಗೆ ಮಾಹಿತಿ ನೀಡುವ ಫ‌ಲಕಗಳನ್ನು ಅಳವಡಿಸಿದರೆ ಸಹಜವಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದ್ದು, ಆ ಮೂಲಕ ಸಂಸ್ಥೆಯ ಆದಾಯ ಕೂಡ ಏರಿಕೆ ಆಗಲಿದೆ. ಸದ್ಯ 10 ಟಿಟಿಎಂಸಿ, ಪ್ರಮುಖ ಬಸ್‌ ನಿಲ್ದಾಣಗಳು ಸೇರಿದಂತೆ 160 ಕಡೆಗಳಲ್ಲಿ ಈಗಾಗಲೇ ಈ ಮಾದರಿಯ ಎಲ್‌ಇಡಿ ಫ‌ಲಕಗಳನ್ನು ಅಳವಡಿಸಲಾಗಿದೆ.

ನಿಖರ ಮಾಹಿತಿ ಕೊರತೆ: ವರ್ಷದ ಹಿಂದೆಯೇ ಈ ಯೋಜನೆ ರೂಪಿಸಲಾಗಿತ್ತು. ಪ್ರಾಯೋಗಿಕವಾಗಿ ಒಂದು ಕಡೆ ಪರಿಚಯಿಸಲಾಗಿತ್ತು ಎನ್ನಲಾಗಿದೆ. ಆದರೆ, ಐಟಿ ವ್ಯವಸ್ಥೆ ನಿರ್ವಹಣೆ ಮಾಡುವ ಕಂಪನಿಯು ಆರ್ಥಿಕ ಮುಗ್ಗಟ್ಟು ಎದುರಿಸಿದ ಬೆನ್ನಲ್ಲೇ ವ್ಯವಸ್ಥೆ ನೆನೆಗುದಿಗೆ ಬಿದ್ದಿತು. ಇದಲ್ಲದೆ, ಜಿಪಿಎಸ್‌ ಸೇವೆ ಇಲ್ಲದಿರುವುದರಿಂದ ಈ ಬಸ್‌ ಆಗಮನದ ನಿಖರ ಮಾಹಿತಿ ಸಮರ್ಪಕವಾಗಿ ಸಿಗುತ್ತಿಲ್ಲ.

ಜಾಹೀರಾತು ಆಲೋಚನೆ: 160 ಕಡೆಗಳಲ್ಲಿರುವ ಎಲ್‌ಇಡಿ ಫ‌ಲಕಗಳನ್ನು ಬಿಎಂಟಿಸಿಯು ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿದ್ದು, ಇದರಿಂದ ಪ್ರತಿ ಫ‌ಲಕದಿಂದ ತಲಾ 4 ಸಾವಿರ ರೂ.ಗಳಂತೆ ಟೆಂಡರ್‌ ಪಡೆದ ಏಜೆನ್ಸಿಯೇ ತಿಂಗಳಿಗೆ ಹಣ ಪಾವತಿ ಮಾಡುತ್ತದೆ. ಈ ಫ‌ಲಕಗಳಲ್ಲಿ ಶೇ. 50 ಬಿಎಂಟಿಸಿ ಬಸ್‌ಗಳ ಮಾಹಿತಿ ಹಾಗೂ ಸಂಸ್ಥೆಯ ಸೇವೆಗಳ ಬಗ್ಗೆ ಬಿತ್ತರಿಸಿದರೆ, ಉಳಿದ ಶೇ. 50 ಅವಧಿ ಜಾಹೀರಾತು ಪ್ರಸಾರ ಮಾಡಲಾಗುತ್ತದೆ. ಇದೇ ಮಾದರಿಯನ್ನು ಮೆಟ್ರೋ ನಿಲ್ದಾಣಗಳಲ್ಲೂ ಅನುಸರಿಸುವ ಯೋಚನೆ ಇದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಎಲ್‌ಇಡಿ ಫ‌ಲಕಗಳಲ್ಲಿ ಜಾಹೀರಾತು ಕೂಡ ನೀಡಬಹುದು. ಇದರಿಂದಲೂ ಆದಾಯ ಹೆಚ್ಚಲಿದೆ.

ರೈಲಿನಲ್ಲೂ ಮಾಹಿತಿ?: ನಿಲ್ದಾಣದಲ್ಲಿ ಮಾತ್ರವಲ್ಲ ಮೆಟ್ರೋ ರೈಲಿನಲ್ಲಿರುವ ಮಾಹಿತಿ ಫ‌ಲಕಗಳಲ್ಲೂ ಫೀಡರ್‌ ಬಸ್‌ ಸೇವೆಗಳು ಹಾಗೂ ಬಿಎಂಟಿಸಿ ಬಗ್ಗೆ ಮಾಹಿತಿ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಮನವಿ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಪ್ರಯಾಣಿಕರಿಗೂ ಅನುಕೂಲ ಆಗಲಿದೆ. ರೈಲುಗಳಲ್ಲಿ ಪ್ರಸ್ತುತ ಪ್ರವಾಸೋದ್ಯಮ, ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುವ ಚಿತ್ರಗಳನ್ನು ಬಿತ್ತರಿಸಲಾಗುತ್ತಿದೆ.

ಮೆಟ್ರೋ ಸಂಪರ್ಕ ಸೇವೆಗಳನ್ನು ಮರುವಿನ್ಯಾಸ ಮಾಡಿ, ಎಲ್ಲೆಲ್ಲಿ ಹೆಚ್ಚು ಬೇಡಿಕೆ ಇದೆ? ಎಲ್ಲಿ ಕಡಿಮೆ ಇದೆ? ಇದೆಲ್ಲವನ್ನೂ ಅಧ್ಯಯನ ಮಾಡಲಾಗುವುದು. ಐಟಿಎಸ್‌ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಶುರುವಾದರೆ, ಆಗ ಒಂದಕ್ಕೊಂದು ಲಿಂಕ್‌ ಮಾಡಬಹುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಬಿಎಂಆರ್‌ಸಿಎಲ್‌ ಜತೆಗೂ ನಿರಂತರ ಸಂಪರ್ಕದಲ್ಲಿದ್ದೇವೆ.
-ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.