ಬಿಪಿ-ಶುಗರ್‌ಗೆ ಸ್ಟೀವಿಯಾ ಪಕ್ಕಾ ಮದ್ದು: ಡಾ| ಕೋಟಿಕಲ್
ಪ್ರತಿ ಕೆಜಿ ಸ್ಟೀವಿಯಾ ಎಲೆಗಳಿಗೆ 100 ರೂ. ದರದಲ್ಲಿ ಮಾರಾಟ
Team Udayavani, Sep 25, 2019, 1:42 PM IST
ಬಸವಕಲ್ಯಾಣ: ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಹಲ್ಲು ನೋವು ನಿವಾರಣೆಗೆ ಸ್ಟೀವಿಯಾ ಎಂಬ ಬೆಳೆ ರಾಮಬಾಣವಾಗಿದೆ ಎಂದು ಬಾಗಲಕೋಟೆ ವಿಜ್ಞಾನಗಳ ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ| ವೈ.ಕೆ. ಕೋಟಿಕಲ್ ಹೇಳಿದರು.
ಬಾಗಲಕೋಟೆ ವಿಜ್ಞಾನಗಳ ತೋಟಗಾರಿಕೆ ವಿಶ್ವವಿದ್ಯಾಲಯ, ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕಾ ಮಹಾವಿದ್ಯಾಲಯ, ತೋಟಗಾರಿಕೆ ಇಲಾಖೆ ಮತ್ತು ಬೆಂಗಳೂರು ಉದ್ಯಾನ ಹರ್ಬೋ ಮ್ಯಾಟ್ರಿಕ್ಸ್ ಪ್ರೈ. ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಮಲ್ಲಿಕಾರ್ಜುನವಾಡಿ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಔಷಧ ಬೆಳೆಗಳ ಬೇಸಾಯ ಸಂಸ್ಕೃರಣೆ ಮತ್ತು ಮಾರುಕಟ್ಟೆ ಕುರಿತು ನಡೆದ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೀದರ ಜಿಲ್ಲೆಯ ಕೆಲವು ಕಡೆ ರೈತರು ಸ್ಟೀವಿಯಾ ಎಂಬ ಬೆಳೆ ಬೆಳೆಸುತ್ತಿದ್ದಾರೆ. ಇದು ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಹಲ್ಲು ನೋವು ನಿವಾರಣೆಗೆ ತುಂಬಾ ಸಹಾಯವಾಗುತ್ತದೆ. ಸ್ಟೀವಿಯಾ ಸಸಿ ಎಲೆಗಳು ಸಕ್ಕರೆಗಿಂತ ಶೇ. 200ಪಟ್ಟು ರುಚಿಯಾಗಿರುತ್ತದೆ. ಇದನ್ನು ಪುಡಿ(ಪೌಡರ್), ದ್ರಾವಣ(ಲಿಕ್ವಿಡ್) ಮತ್ತು ಹನಿ(ಡ್ರಾಪ್) ತರಹ ಮಾಡಿ ಮಾರಲಾಗುತ್ತಿದೆ. ಹೀಗಾಗಿಯೇ ಬೆಂಗಳೂರು ಉದ್ಯಾನ ಹರ್ಬೋ ಮ್ಯಾಟ್ರಿಕ್ಸ್ ಪ್ರೈ. ಲಿಮಿಟೆಡ್ ಹಾಗೂ ರಾಮದೇವ ಆಯುರ್ವೇದ್ ಸಂಸ್ಥೆಗಳಲ್ಲಿ ಔಷಧಿಗಾಗಿ ಸ್ಟೀವಿಯಾ ಸಸಿ ಎಲೆಗಳನ್ನು ಬಳಸಲಾಗುತ್ತಿದೆ. ಎಲೆಗಳು 100 ರೂ. ಪ್ರತಿ ಕೆಜಿಗೆ ಮಾರಾಟವಾದರೆ, ಪೌಡರ್ 5 ಸಾವಿರ ರೂ.
ಕೆಜಿಯಂತೆ ಮಾರಾಟವಾಗುತ್ತದೆ ಎಂದು ಹೇಳಿದರು.
ಈಗಿನ ಅಲೋಪತಿಕ್ ಔಷ ಧಿಗಳಿಂದ ಒಂದಿಲ್ಲ ಒಂದು ಅಡ್ಡಪರಿಣಾಮ ಬೀರುತ್ತದೆ. ಹೀಗಾಗಿ ನಾವು ಮತ್ತೆ ವೈದಿಕ ಶಾಸ್ತ್ರಗಳಿಂದ ಪ್ರಾರಂಭವಾದ ಆಯುರ್ವೇದ ಪದ್ಧತಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರತಿಯೊಂದು ಸಸಿಯಲ್ಲಿ ಒಂದಿಲ್ಲ ಒಂದು ಔಷಧಿ ಗುಣ ಇರುತ್ತದೆ. ಹೀಗಾಗಿ ರೈತರು ಔಷ ಧಿ ಸಸಿ ಬೆಳೆಸಬೇಕು. ಇದರಿಂದ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೀದರ ಜಿಪಂ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಮಾತನಾಡಿ, ರೈತರು ಔಷಧಿ ಸಸ್ಯ ಬೆಳೆಯುವಲ್ಲಿ ಆಸಕ್ತಿ ತೋರಿಸಿದರೆ ಅಂಥ ರೈತರಿಗೆ ನಮ್ಮ ಇಲಾಖೆಯಿಂದ ಸಹಾಯಧನ ಜತೆಗೆ ಪ್ರತಿಯೊಂದು ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.
ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡಾ| ರವೀಂದ್ರ ಮುಲಗೆ ಮಾತನಾಡಿ, ರೈತರು ಯಾವುದೇ ಔಷ ಧ ಸಸ್ಯ ಬೆಳೆ ಬೆಳೆಯಬೇಕಾದರೆ ಮೊದಲು ಮಾರಾಟಗಾರರ ಜತೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ| ಮಹಮ್ಮದ್ ಫಾರೂಕ್ ಆಯುರ್ವೇದ್ ಚಿಕಿತ್ಸೆಯಲ್ಲಿ ಔಷ ಧಿ ಬೆಳೆಗಳ ಬಳಕೆ, ಡಾ| ಮಲ್ಲಿಕಾರ್ಜುನ ವಾಲಿಕಾರ ಸ್ಟೀವಿಯಾ ಹಾಗೂ ಅಶ್ವಗಂಧ ಆಧುನಿಕ ಬೇಸಾಯ ತಾಂತ್ರಿಕತೆಗಳು, ಡಾ| ವಿ.ಪಿ. ಸಿಂಗ್ ಔಷಧಿ ಬೆಳೆಗಳ ಮಾರುಕಟ್ಟೆ ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ರಾಜೇಶ್ವರ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹೊಸಮನಿ, ಉಪಾಧ್ಯಕ್ಷ ಸತೀಶ ಪೋಸ್ತರ, ಡಾ| ಎಂ.ಎಸ್. ಲೋಕೇಶ ಆನಂದ ಹುಲಿಯಾಳ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂತೋಷ ತಾಂಡೂರ ಇದ್ದರು. ವಿಸ್ತರಣಾ ಮುಂದಾಳು ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವಿಷಯ ತಜ್ಞ ಡಾ| ಶ್ರೀನಿವಾಸ ಎನ್. ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.