ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ವೇತನ ವಿತರಣೆ
ಬಂಟರ ಯಾನೆ ನಾಡವರ ಸಂಘ
Team Udayavani, Sep 26, 2019, 5:57 AM IST
ಕುಂಬಳೆ: ಬಂಟರ ಯಾನೆ ನಾಡವರ ಸಂಘ ಮಂಜೇಶ್ವರ ಫಿರ್ಕಾ ಉಪ್ಪಳ ಇದರ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನವು ಉಪ್ಪಳ ರಾಮಕೃಷ್ಣ ವಿದ್ಯಾಲಯದಲ್ಲಿ ಜರಗಿತು. ಬಂಟರ ಯಾನೆ ನಾಡವರ ಸಂಘ ಮಂಜೇಶ್ವರ ಫಿರ್ಕಾ ಉಪ್ಪಳ ಘಟಕಾಧ್ಯಕ್ಷ ಕೆ. ದಾಸಣ್ಣ ಆಳ್ವ ಕುಳೂರುಬೀಡು ಅಧ್ಯಕ್ಷತೆ ವಹಿಸಿದರು.
ಕಾಸರಗೋಡು ಜಿಲ್ಲಾ ಬಂಟರ ಸಂಘದ ಕಾರ್ಯದರ್ಶಿ ಎಂ. ದಾಮೋ ದರ ಶೆಟ್ಟಿ ಮಜಿಬೈಲು, ಬಂಟರ ಯಾನೆ ನಾಡವರ ಮಾತೃಸಂಘದ ಕಾಸರಗೋಡು ತಾಲೂಕು ಸಮಿತಿ ಸಂಚಾಲಕ ರಘು ಶೆಟ್ಟಿ ಕುಂಜತ್ತೂರು, ತಾಲೂಕು ಸಮಿತಿ ಸಂಚಾಲಕ ಮುಕ್ತಾನಂದ ರೈ, ಬಂಟರ ಯಾನೆ ನಾಡವರ ಮಾತೃಸಂಘದ ಕಾಸರ ಗೋಡು ತಾಲೂಕು ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯೆ ಲತಾ ಬಾಲಕೃಷ್ಣ ರೈ, ವರ್ಕಾಡಿ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ದೇವಪ್ಪ ಶೆಟ್ಟಿ ಚಾವಡಿಬೈಲುಗುತ್ತು, ಪೈವಳಿಕೆ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ಡಿ. ಭಾಸ್ಕರ ರೈ ಮಂಜಲೋ¤ಡಿ, ಮಂಗಲ್ಪಾಡಿ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಮುಟ್ಟ, ಮೀಂಜ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ಜಗದೀಶ ಶೆಟ್ಟಿ ಎಲಿಯಾಣ,ಮಂಜೇಶ್ವರ ಪಂಚಾಯತ್ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ದಾಮೋದರ ಶೆಟ್ಟಿ ಕುಂಜತ್ತೂರು ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮಂಗಲ್ಪಾಡಿ, ಪೈವಳಿಕೆ, ಮೀಂಜ, ವರ್ಕಾಡಿ, ಮಂಜೇಶ್ವರ ಪಂಚಾಯತ್‌ಗಳಲ್ಲಿ ಕಳೆದ ಎಸ್‌ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಅಂಕದಲ್ಲಿ ತೇರ್ಗಡೆಯಾದ ಸಮಾಜದ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು. ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕುಳೂರುಬೀಡು ದಾಸಣ್ಣ ಆಳ್ವ ಸ್ವಾಗತಿಸಿದರು.ಸದಾನಂದ ಶೆಟ್ಟಿ ತಲೆಕ್ಕಳ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.