ಬಾಲ್ಯದ ದಿನಗಳು


Team Udayavani, Sep 27, 2019, 5:00 AM IST

k-16

ಸಾಂದರ್ಭಿಕ ಚಿತ್ರ

ನಮ್ಮೂರು ಹಳ್ಳಿ. ಅಲ್ಲಿ ಅಂಗನವಾಡಿಯಾಗಲೀ ನರ್ಸರಿ ಸ್ಕೂಲ್‌ ಆಗಲೀ ಇರಲಿಲ್ಲ. ಹಾಗಾಗಿ, ನನಗೆ 5 ವರ್ಷವಾದಾಗ ಒಂದನೆಯ ತರಗತಿಗೆ ಸೇರಿಸಿದರು. ಅಧ್ಯಾಪಿಕೆಯಾಗಿದ್ದ ನನ್ನ ತಾಯಿ ತಾನು ಶಾಲೆಗೆ ಹೋಗುವಾಗ ಹತ್ತಿರದಲ್ಲಿದ್ದ ಪ್ರಾಥಮಿಕ ಶಾಲೆಯ ಒಂದನೆಯ ತರಗತಿಯಲ್ಲಿ ನನ್ನನ್ನು ಕುಳ್ಳಿರಿಸಿ ಹೋಗುತ್ತಿದ್ದರು. ಆದರೆ, ನಾನು ಅಲ್ಲಿ ಕುಳಿತುಕೊಳ್ಳದೆ ಅವರ ಹಿಂದೆಯೇ ಓಡಿಬರುತ್ತಿದ್ದೆ. ನನಗೆ ಉಪಾಯವಾಗಿ ಮತ್ತು ಗದರಿಸಿಯೂ ಹೇಳಿ ಸೋತ ಅವರು ಕೊನೆಗೆ ನನ್ನ ಅಧ್ಯಾಪಕರ ಹತ್ತಿರ ಕೇಳಿಕೊಂಡರು. ಅವರು ಬೆತ್ತ ಹಿಡಿದು ದುರುಗುಟ್ಟಿ ನೋಡಿ ನನ್ನನ್ನು ಗದರಿಸಿದಾಗ ನನ್ನ ಹಠ ಮಾಯವಾಯಿತು.

ನನಗೆ ಒಬ್ಬಳು ಪುಟ್ಟ ತಂಗಿಯಿದ್ದಳು. ಅವಳು ಮಾತಿನ ಮಲ್ಲಿ. ಅವಳ ಮುಗ್ಧ ಮನಸ್ಸಿನ ಸ್ನಿಗ್ಧ ನುಡಿಗಳು ಎಲ್ಲರಿಗೂ ಸಂತೋಷಕೊಡುತ್ತಿದ್ದವು. ನನ್ನ ಹನ್ನೊಂದನೆಯ ವರ್ಷದಲ್ಲಿ ಉಪನಯನ ಸಂಸ್ಕಾರ ನಡೆಸಿದರು. ಈ ಸಂಭ್ರಮವನ್ನು ಬೆರಗಾಗಿ ನೋಡುತ್ತಿದ್ದ ಅವಳು ಅಮ್ಮನೊಡನೆ ತನಗೆ ಯಾವಾಗ ಉಪನಯನವೆಂದು ಕೇಳಿದಳು. ಆಗ ಅಮ್ಮ, “”ಹುಡುಗಿಯರಿಗೆ ಉಪನಯನವಿಲ್ಲ, ಮದುವೆ ಮಾತ್ರ” ಎಂದರು. “”ನನಗೆ ಯಾವಾಗ ಮದುವೆ?” ಎಂದು ಕೇಳಿದಾಗ ಅವಳಿಗೆ ಅಮ್ಮ ಎಂದರು, “”ನೀನು ದೊಡ್ಡವಳಾಗಬೇಕು, ಒಳ್ಳೆಯ ಹುಡುಗ ಸಿಗಬೇಕು” ಎಂದು. ಅದಕ್ಕೆ ಅವಳ ಪ್ರಶ್ನೆ “”ಒಳ್ಳೆಯ ಹುಡುಗ ಅಣ್ಣನೇ ಇದ್ದಾನಲ್ಲ ಅಮ್ಮ”.

ಒಮ್ಮೆ ಅಮ್ಮ ನಮ್ಮಿಬ್ಬರನ್ನೂ ಕರೆದುಕೊಂಡು ಎಲ್ಲಿಗೋ ಹೋಗುತ್ತಿದ್ದರು. ಮೂರು ಮಂದಿ ಕುಳಿತುಕೊಳ್ಳುವ ಸೀಟಿನ ಕಿಟಕಿ ಬಳಿ ನಾನೂ ನನ್ನ ಪಕ್ಕ ಅಮ್ಮನ ಮಡಿಲಲ್ಲಿ ತಂಗಿಯೂ, ಅವರ ಹತ್ತಿರ ಒಬ್ಬರು ಮುಸ್ಲಿಮ್‌ ಹೆಂಗಸೂ ಕುಳಿತಿದ್ದರು. ಬಸ್‌ಸ್ಟಾಪ್‌ಗ್ಳಲ್ಲಿ ನಿಂತಾಗಲೆಲ್ಲ ಆ ಮಹಿಳೆ ತನ್ನ ಬುರ್ಖಾ ಮೇಲಕ್ಕೆತ್ತಿ ತಾನು ಇಳಿಯುವ ಸ್ಟಾಪ್‌ ಬಂತೆ? ಎಂದು ಕಿಟಕಿಯಿಂದ ಇಣುಕಿ ನೋಡುತ್ತಿದ್ದರು. ಆಗ ನನ್ನ ತಂಗಿಗೆ ನಾವು ಮನೆಯಲ್ಲಿ ಮುಖಕ್ಕೆ ಮುಸುಕಿ ಹಾಕಿ ತೆಗೆಯುತ್ತ, “ಕೂ… ಅದಾ…’ ಎನ್ನುತ್ತಿದ್ದ ಆಟ ನೆನಪಾಗಿ ಅವರು ಬುರ್ಖಾ ಹಾಕಿದಾಗ “ಕೂ…’ ಎನ್ನುತ್ತಲೂ, ತೆಗೆದಾಗ “ಅದಾ’ ಎನ್ನುತ್ತಲೂ ಇದ್ದಳು. ಇದನ್ನು ನೋಡಿ ಆ ಹೆಂಗಸೂ ನಗತೊಡಗಿದರು. ಅವಳಿಗೆ ಮೂರು ವರ್ಷವಾದಾಗ ವಿದ್ಯಾರಂಭ ಮಾಡಲು ನಿಶ್ಚಯಿಸಿದೆವು. ವಿದ್ಯಾರಂಭ ಮಾಡುವಾಗ ಅಕ್ಕಿಯ ಮೇಲೆ ಬರೆಯುವುದನ್ನು ನಾವು “ಅಕ್ಕಿಯಲ್ಲಿ ಹಿಡಿಸುವುದು’ ಎನ್ನುತ್ತಿದ್ದೆವು. ಹಿಂದಿನ ದಿನ ನಾವು ನಾಳೆ ಪುಟ್ಟಿಯನ್ನು ಅಕ್ಕಿಯಲ್ಲಿ ಹಿಡಿಸುವುದು ಎನ್ನುವುದನ್ನು ಕೇಳಿ ಅವಳು ಹೆದರಿ, “ನನ್ನನ್ನು ಅಕ್ಕಿಯಲ್ಲಿ ಹಿಡಿಸಬೇಡಿ. ದೋಸೆಯಲ್ಲಾದರೂ ಆದೀತು’ ಎಂದು ಅಳತೊಡಗಿದ್ದಳು.

ವರುಣ
10ನೇ ತರಗತಿ
ಕೆನರಾ ಹೈಸ್ಕೂಲ್‌, ಮಂಗಳೂರು

ಟಾಪ್ ನ್ಯೂಸ್

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

hdk-office

Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್‌ಡಿಕೆ

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.