ದಲಿತರಿಗೆ ನ್ಯಾಯ ಕಲಿಸಿದ ಎಚ್‌ಆರ್‌ಪಿ ಅಧಿಕಾರಿ
ಸರ್ವೆಯರ್‌ಗಳ ನಿರ್ಲಕ್ಷ್ಯದಿಂದಾಗಿ ಎಚ್‌ಆರ್‌ಪಿ ಸಂತ್ರಸ್ತರಿಗೆ ಮಂಜೂರಾಗಿದ್ದ ದಲಿತರ ಭೂಮಿ
Team Udayavani, Sep 26, 2019, 7:30 PM IST
ಸುಧೀರ್ ಎಸ್.ಎಲ್
ಸಕಲೇಶಪುರ: ತಾಲೂಕಿನಲ್ಲೆಡೆ ಕೇವಲ ಹೇಮಾವತಿ ಮುಳುಗಡೆ ಯೋಜನೆಯ ಪುನರ್ವಸತಿ ಯೋಜನೆ (ಎಚ್‌ಆರ್‌ಪಿ) ಹಗರಣಗಳ ಸುದ್ದಿಗಳೇ ಹೆಚ್ಚಾಗಿದ್ದು, ಈ ನಡುವೆ ಹೇಮಾವತಿ ಪುರ್ನವಸತಿ ಭೂ ಸ್ವಾಧೀನಾಧಿಕಾರಿ ಕ್ಯಾಪ್ಟನ್ ಶ್ರೀನಿವಾಸ್ ಗೌಡ ಎಚ್ ಆರ್‌ಪಿಯಿಂದ ನೋವುಂಡ ಕೆಲವು ಬಡ ದಲಿತ ಕುಟುಂಬಗಳಿಗೆ ಬೆಳಕು ತೋರಿದ್ದಾರೆ.
ತಾಲೂಕಿನ ಯಸಳೂರು ಹೋಬಳಿ, ಹೇರೂರು ಗ್ರಾಮದ ಸ.ನಂ.49ರಲ್ಲಿ ಹೇಮಾವತಿ ಜಲಾಶಯ ಯೋಜನೆ 2012- 13ನೇ ಸಾಲಿನಲ್ಲಿ ಮುಳುಗಡೆ ಸಂತ್ರಸ್ತ ರಾದ ಜಿ.ಟಿ.ಹರೀಶ್ ಬಿನ್ ತಿಮ್ಮೇಗೌಡ, ಶೋಭಾ ಕೋಂ ತಿಮ್ಮೇಗೌಡ, ಚನ್ನಕೇಶವ ಬಿನ್ ಟ್ಟಸ್ವಾಮಿಗೌಡ, ಟಿ.ಎಚ್.ಪುಷ್ಪಾ ಕೋಂ ತಿಮ್ಮಪ್ಪಗೌಡ, ಯೋಗೇಶ್ ಬಿನ್ ರಂಗೇಗೌಡ, ಎಸ್.ಆರ್.ಮಂಜುನಾಥ್ ಬಿನ್ ರಾಜೇಗೌಡ ಅವರಿಗೆ ತಲಾ 4 ಎಕರೆಯಂತೆ ಎಚ್‌ಆರ್‌ಪಿ ಯಲ್ಲಿ ಜಮೀನು ಮಂಜೂರಾತಿ ಮಾಡಲಾಗಿ ಜೊತೆಗೆ ಮಂಜೂರಾತಿಯಂತೆ ಸಾಗುವಳಿ ಪತ್ರ ನೀಡಿ ಖಾತೆ ಮಾಡಲಾಗಿತ್ತು. ಫಲಾನುಭವಿಗಳು ತಮಗೆ ಮಂಜೂರಾದ ಜಾಗದಲ್ಲೇ ಭೂಮಿ ಸಾಗುವಳಿ ಮಾಡುತ್ತಿದ್ದರೂ ಸರ್ವೆಯರ್‌ಗಳು ಹಣ ಪಡೆದು ಕೂತಲ್ಲೇ ಸರ್ವೆ ಸ್ಕೆಚ್ ಮಾಡಿದ್ದರು.
ವಾಸ್ತವವಾಗಿ ಗ್ರಾಮದ ಸರ್ವೆ ನಂ. 49ರಲ್ಲಿ ಪರಿಶಿಷ್ಟ ಜಾತಿಯ ಗೌರಮ್ಮ ಕೋಂ ನಿಂಗಯ್ಯ, ಹುಲ್ಲುಕೊಡಯ್ಯ ಬಿನ್ ಕೋಮರಯ್ಯ, ಕೃಷ್ಣಯ್ಯ ಬಿನ್ ತಿಪ್ಪಯ್ಯ, ವಿಶಾಲ ಕೋಂ ರಮೇಶ್ ಮತ್ತು ಹೊನ್ನಮ್ಮ ಕೋಂ ರಾಜಯ್ಯ ಅವರು ತಲಾ 3 ಎಕರೆಯಂತೆ ಸುಮಾರು 60-70 ವರ್ಷದಿಂದಲೂ ಸದರಿ ಸರ್ವೆ ನಂಬರ್ ಜಾಗದಲ್ಲಿ ಕಾಫಿ ಸಾಗುವಳಿ ಮಾಡಿಕೊಂಡಿದ್ದು, ಈ ಜಾಗಕ್ಕೆ ಮಂಜೂರಾತಿಗಾಗಿ ನಮೂನೆ -53 ರಲ್ಲಿ ಕಂದಾಯ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಶಾಸಕರ ನೇತೃತ್ವದ ಭೂಮಂಜೂರಾತಿ ಸಮಿತಿಯ 1ನೇ ಸಭೆಯಲ್ಲಿ ಮಂಜೂರು ಮಾಡಿಸಿಕೊಂಡಿದ್ದರು. ಸ.ನಂ.49ರಲ್ಲಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡುವ ಸಂದರ್ಭದಲ್ಲಿ ದಲಿತರು ಸ್ವಾಧೀನ ಹೊಂದಿರುವ ಸ್ಥಳವನ್ನು ಮಂಜೂರಾತಿ ಮಾಡಲಾಗಿದ್ದು ಇದರಿಂದ ದಲಿತ ಕುಟುಂಬಗಳು ಕಳೆದ ಹಲವಾರು ತಿಂಗಳಿನಿಂದ ಆತಂಕದ ಪರಿಸ್ಥಿತಿ
ಎದುರಿಸುತ್ತಿತ್ತು. ಹಲವು ಬಾರಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದರೂ ಸಹ ಯಾರು ಸ್ಪಂದಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮುಗ್ಧ ದಲಿತ ಕುಟುಂಬಗಳ ಸಮಸ್ಯೆಯ ಕುರಿತು ಹೇಮಾವತಿ ಪುರ್ನವಸತಿ ಭೂ ಸ್ವಾಧೀನಾಧಿಕಾರಿ ಕ್ಯಾಪ್ಟನ್ ಶ್ರೀನಿವಾಸ್ ಗೌಡರವರ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಖುದ್ದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಶ್ರೀನಿವಾಸಗೌಡರ ಎದುರು ಹಾಜರಿದ್ದ ಬಡ ದಲಿತ ಕುಟುಂಬದ ಮಹಿಳೆಯರು ಕಣ್ಣೀರು ಹಾಕಿ ತಮ್ಮ ನೋವನ್ನು ಹೇಳಿಕೊಳ್ಳಲು ಮುಂದಾದಾಗ ಎಲ್ಲರನ್ನೂ ಅಧಿಕಾರಿ ಸಂತೈಸಿದರು. ದಲಿತರ ಜಾಗದಲ್ಲಿ ಭೂಮಿ ಪಡೆದವರನ್ನು ಹಾಗೂ ಸಾಗುವಳಿ ಮಾಡುತ್ತಿರುವ ದಲಿತ ಕುಟುಂಬದವರು ತಮ್ಮ ಕಚೇರಿಗೆ ಬರಲು ಹೇಳಿದ್ದು, ದಲಿತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ದಲಿತರಿಗೆ ನೀಡಿ ಸಂತ್ರಸ್ತರಿಗೆ ಇದೇ ಸರ್ವೆ ನಂ.ನಲ್ಲಿ ನಲ್ಲಿ ಬೇರೆ ಕಡೆ ನೀಡುವ ಸಾಧ್ಯತೆಯಿದೆ.
ಒಟ್ಟಾರೆಯಾಗಿ ಕ್ಯಾಪ್ಟನ್ ಶ್ರೀನಿವಾಸ ಗೌಡರವರ ಈ ಕಾರ್ಯದಿಂದ ನೊಂದ ದಲಿತ ಕುಟುಂಬಗಳಲ್ಲಿ ಹೊಸ ಆಶಾ ಕಿರಣ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura; ಜಪ್ತಿ: ಅಂಗಡಿಗೆ ಬೆಂಕಿ: ‘ದ್ವೇಷದ ಕಿಡಿ’ ಎಂಬ ಶಂಕೆ; ದೂರು
Puttur: ಮಹಿಳೆಗೆ ಬೈಕ್ ಢಿಕ್ಕಿ; ಸವಾರನಿಗೆ ಶಿಕ್ಷೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್ ಹೇಳಿದ್ದೇನು?
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.