ಜರೀನ್‌ ಖಾನ್‌ಗೂ ಕಾಡಿತ್ತಂತೆ ಕಾಸ್ಟಿಂಗ್‌ ಕೌಚ್‌ ಭೂತ!


Team Udayavani, Sep 27, 2019, 5:00 AM IST

x-22

ಬಾಲಿವುಡ್‌ನ‌ಲ್ಲಿ ಆಗಾಗ್ಗೆ ಕಾಸ್ಟಿಂಗ್‌ ಕೌಚ್‌, ಮಿಟೂ ವಿಷಯಗಳು ಸದ್ದು ಮಾಡುವುದು ಹೊಸದೇನಲ್ಲ. ಪ್ರತಿವರ್ಷ ಹತ್ತಾರು ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಹೇಳಿಕೊಳ್ಳುತ್ತಾರೆ. ಇನ್ನು ಅದೆಷ್ಟೋ ನಟಿಯರು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಲು ಹಿಂದೇಟು ಹಾಕುವುದರಿಂದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಾರದೇ ಹೋಗುತ್ತವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ‌ಲ್ಲಿ ಕಾಸ್ಟಿಂಗ್‌ ಕೌಚ್‌ ಮತ್ತು ಮಿಟೂನಂತಹ ವಿಷಯಗಳ ಬಗ್ಗೆ ನಟಿಯರು ತಮಗಾದ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುವ ವ್ಯಕ್ತಿಗಳನ್ನು ಮುಲಾಜಿಲ್ಲದೆ ಸಾರ್ವಜನಿಕವಾಗಿ ಎಳೆದುತರುತ್ತಿದ್ದಾರೆ. ಅಲ್ಲದೆ ಮುಂದೆ ಬರಲಿರುವ ನಟಿಯರಿಗೂ ಇಂತಹ ವಿಷಯಗಳ ವಿರುದ್ಧ ಹೇಗೆ ವರ್ತಿಸಬೇಕು, ಪ್ರತಿಕ್ರಿಯಿಸಬೇಕು ಎನ್ನುವುದನ್ನು ತೋರಿಸಿಕೊಡುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನ‌ಲ್ಲಿ ಮತ್ತೂಬ್ಬ ನಟಿ ಜರೀನ್‌ ಖಾನ್‌ ಕೂಡ ತಾನು ಎದುರಿಸಿದ ಕಾಸ್ಟಿಂಗ್‌ ಕೌಚ್‌ ಪರಿಸ್ಥಿತಿಯನ್ನು ಎಲ್ಲರೆದುರು ಮುಕ್ತವಾಗಿ ತೆರೆದಿಟ್ಟಿದ್ದಾರೆ.

ಸಲ್ಮಾನ್‌ ಖಾನ್‌ ಅಭಿನಯದ ವೀರ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಜರೀನ್‌ ಖಾನ್‌ ನಂತರ ರೆಡಿ, ಹೌಸ್‌ ಫ‌ುಲ…-2 ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ ಚೆಲುವೆ. ಸದ್ಯ ಬಾಲಿವುಡ್‌ ಬೇಡಿಕೆಯ ನಟಿಯರ ಪಟ್ಟಿಯಲ್ಲಿರುವ ಜರೀನ್‌ ಖಾನ್‌ ಚಿತ್ರರಂಗಕ್ಕೆ ಬರುವ ಮುನ್ನ ತನಗಾದ ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.

ಜರೀನ್‌ ಚಿತ್ರರಂಗಕ್ಕೆ ಕಾಲಿಡುವ ಹೊಸದರಲ್ಲಿ ಬಾಲಿವುಡ್‌ ನಿರ್ದೇಶಕರೊಬ್ಬರು “ಕಿಸ್ಸಿಂಗ್‌ ದೃಶ್ಯಗಳನ್ನು ರಿಹರ್ಸಲ್‌ ಮಾಡೋಣ ಬಾ’ ಎಂದು ಜರೀನ್‌ ಖಾನ್‌ಗೆ ಕರೆದಿದ್ದರಂತೆ. ನಿರ್ದೇಶಕರು ಹೇಳಿದ ತಕ್ಷಣ ಒಮ್ಮೆ ಶಾಕ್‌ ಆದ ಜರೀನ್‌ ಖಾನ್‌ ನಂತರ “ನಾನು ಯಾವುದೇ ಕಿಸ್ಸಿಂಗ್‌ ದೃಶ್ಯವನ್ನು ರಿಹರ್ಸಲ್‌ ಮಾಡುವುದಿಲ್ಲ’ ಎಂದು ಖಡಕ್‌ ಆಗಿ ಹೇಳಿದ್ದರಂತೆ. ಅಲ್ಲದೆ ಮತ್ತೂಂದು ಘಟನೆಯಲ್ಲಿ ನಿರ್ದೇಶಕರೊಬ್ಬರು, “ಸ್ನೇಹಿತೆಗಿಂತ ಹೆಚ್ಚಿನ ಸಂಬಂಧ ನನ್ನ ಜೊತೆ ಹೊಂದಿರಬೇಕು’ ಎಂದು ಕೇಳಿದ್ದರಂತೆ. ಆದರೆ, ಜರೀನ್‌ ಖಾನ್‌ ಯಾವುದಕ್ಕೂ ಒಪ್ಪಿಗೆ ನೀಡಿಲ್ಲವಂತೆ. “ಅದಾದ ಬಳಿಕ ಬಾಲಿವುಡ್‌ನ‌ಲ್ಲಿ ತನಗೆ ಬರಬೇಕಾದ ಹಲವು ಅವಕಾಶಗಳು ಕೈತಪ್ಪಿ ಹೋಯಿತು. ಆದರೆ ಪ್ರತಿಭೆ ಮತ್ತು ಪರಿಶ್ರಮವಿದ್ದರೆ ನಮಗೆ ಸಿಗಬೇಕಾಗಿರುವುದು ಸಿಗುತ್ತದೆ ಎಂಬ ನಂಬಿಕೆ ನನಗಿತ್ತು. ಆ ನಂತರ ವೀರ್‌ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆ ಚಿತ್ರ ಇಡೀ ಚಿತ್ರರಂಗವೇ ನನ್ನನ್ನು ಗುರುತಿಸುವಂತೆ ಮಾಡಿತು’ ಎಂದಿದ್ದಾರೆ ಜರೀನ್‌. ಸದ್ಯ ಜರೀನ್‌ ಖಾನ್‌ ತನಗಾದ ಅನುಭವವನ್ನು ನೇರವಾಗಿ ಹೇಳಿ ಕೊಂಡಿರುವುದಕ್ಕೆ ಸೋಶಿಯಲ್‌ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜರೀನ್‌ ಖಾನ್‌ ನೇರ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಟಾಪ್ ನ್ಯೂಸ್

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.