ದೊಡ್ಡವರ ಬಾಲ್ಯವಿವಾಹ!


Team Udayavani, Sep 27, 2019, 5:14 AM IST

x-24

“ನೋಡಿ, ಅವರವರ ಹಣೆ ಬರಹದಲ್ಲಿ ಭಗವಂತ ಯಾರ ಜೊತೆ ಮದುವೆ ಅಂತ ನಿಶ್ಚಯಿಸಿದ್ದಾನೋ, ಯಾರಿಗ್ಗೊತ್ತು? ಸುಮ್ಮನೆ ಮಾವನ ಮಕ್ಕಳ ಜೊತೆ ಹೆಸರಿಟ್ಟು , ನನ್ನ ಮಕ್ಕಳಿಗೆ ಸಂಬಂಧ ಕಟ್ಟಬೇಡಿ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಏನೇನೋ ಹೇಳಿ, ಅವರ ಮನಸ್ಸು ಕಡಡುವುದು ಬೇಡ. ಮಕ್ಕಳು ಮಕ್ಕಳಾಗಿಯೇ ಆಟವಾಡಿಕೊಂಡಿರಲಿ’ ಎಂದು ನಮ್ಮಮ್ಮ, ನಾವು ಚಿಕ್ಕವರಿದ್ದಾಗ ಯಾರಾದರೂ ನಮ್ಮ ಮದುವೆ ಬಗ್ಗೆ ತಮಾಷೆ ಮಾಡುತ್ತಿದ್ದರೆ ಮುಲಾಜಿಲ್ಲದೆ ಹೇಳುತ್ತಿದ್ದಳು.

“ನನ್ನ ಮಗನನ್ನ ಮದುವೆ ಆಗ್ತಿಯೇನೆ?’, “ನೋಡೋ, ಇವಳೇ ನಿನ್ನ ಹೆಂಡ್ತಿ’ ಅಂತೆಲ್ಲ ಮಕ್ಕಳೆದುರು ತಮಾಷೆ ಮಾಡುವುದು ಅಮ್ಮನಿಗೆ ಹಿಡಿಸುತ್ತಿರಲಿಲ್ಲ. ಆಗ ಅದರರ್ಥ ಸರಿಯಾಗಿ ಆಗದಿದ್ದರೂ, ಈಗ, ಅಮ್ಮ ಯಾಕೆ ಹಾಗೆ ಹೇಳುತ್ತಿದ್ದಳೆಂದು ಅರ್ಥವಾಗುತ್ತಿದೆ.

ಇತ್ತೀಚೆಗೆ ದೊಡ್ಡ ಹೊಟೇಲೊಂದಕ್ಕೆ ಹೋಗಿದ್ದೆವು. ನಮ್ಮ ಪಕ್ಕದ ಟೇಬಲ್‌ನಲ್ಲಿ ಒಂದು ದೊಡ್ಡ ಗುಂಪು ಮೊದಲೇ ಆಸೀನವಾಗಿತ್ತು. ಕನಿಷ್ಠ ಐದಾರು ಫ್ಯಾಮಿಲಿಗಳಿದ್ದಿರಬಹುದು. ಮಕ್ಕಳೆಲ್ಲ ಗದ್ದಲ ಮಾಡುತ್ತಿದ್ದರು. ಅದರಲ್ಲೊಂದು ಚಿಕ್ಕ ಹುಡುಗಿ, ಎಂಟತ್ತು ವರ್ಷದವಳಿರಬಹುದು, ತುಂಬಾ ಮುದ್ದಾಗಿದ್ದಳು. ಎಲ್ಲರೂ ಅವಳನ್ನು ಮುದ್ದು ಮುದ್ದಾಗಿ ಮಾತನಾಡಿಸುತ್ತಿದ್ದರು. ಇದ್ದಕ್ಕಿದ್ದಂತೆ ಅವರಲ್ಲೊಬ್ಬರು ತಮ್ಮ ಆರು ಅಥವಾ ಏಳನೇ ತರಗತಿ ಓದುತ್ತಿದ್ದ ಮಗನಿಗೆ ಎದ್ದು ನಿಲ್ಲಲು ಹೇಳಿ, ಪಕ್ಕಕ್ಕೆ ಈ ಮುದ್ದು ಹುಡುಗಿಯನ್ನು ನಿಲ್ಲಿಸಿ, “ನೋಡ್ರೀ, ಈ ಜೋಡಿ ಹೇಗಿದೆ ಹೇಳಿ? ಯಾರು ಏನಾದರೂ ಅನ್ನಲಿ, ನಾವಿಬ್ಬರೂ ಗೆಳೆಯರ ಜಾತಿ ಬೇರೆಯೇ ಆದರೂ, ಈಕೇನೇ ಮುಂದೆ ನನ್ನ ಸೊಸೆಯಾಗುವವಳು. ಏನು ಹೇಳ್ತೀಯಾ?’ ಎಂದು ಆ ಹುಡುಗಿಯ ತಂದೆಯನ್ನು ಕೇಳಿದಾಗ, ಅವರು ಸ್ವಲ್ಪ ಗಲಿಬಿಲಿಗೊಂಡು ಪೆಚ್ಚುಮೋರೆಯಲ್ಲಿ ನಕ್ಕರು. ಆ ಪುಟ್ಟ ಹುಡುಗ ನಾಚಿಕೆಯಿಂದ ತಲೆತಗ್ಗಿಸಿದ್ದ. ಆ ಮುದ್ದು ಹುಡುಗಿಯ ಮೊಗದಲ್ಲಿ ಏನೂ ಅರ್ಥವಾಗದ ಮುಗ್ಧ ಮಂದಹಾಸ.

ಮಗಳನ್ನು ಸರ್ಕಾರಿ ಕೆಲಸದಲ್ಲಿದ್ದ ತನ್ನ ತಮ್ಮನಿಗೇ ಕೊಟ್ಟು ಮದುವೆ ಮಾಡಬೇಕೆಂದು ಆಕೆಯ ಹಠ. ಆದರೆ, ಆ ಹುಡುಗನಿಗೆ ಈ ಮದುವೆಯಲ್ಲಿ ಆಸಕ್ತಿ ಇರಲಿಲ್ಲ. ನಾನೇ ಎತ್ತಿ ಆಡಿ ಬೆಳೆಸಿದ ಹುಡುಗಿ, ಇವಳೊಂದಿಗೆ ಮದುವೆ ಬೇಡ ಎಂಬ ತಮ್ಮನ ಮಾತನ್ನು ಕಡೆಗಣಿಸಿ, ಜಿದ್ದಿಗೆ ಬಿದ್ದು ಮದುವೆ ಮಾಡಿದಳು. ಆತ ಸಂಸಾರ ಮಾಡಲಾರೆ ಎಂದು ಸಿಟ್ಟಾಗಿ, ಬೇರೆ ಊರಿಗೆ ಟ್ರಾನ್ಸ್‌ಫ‌ರ್‌ ತೆಗೆದುಕೊಂಡು ಹೋದಾಗ, ಆತನ ಆಫೀಸಿಗೇ ಹೋಗಿ, ಮೇಲಧಿಕಾರಿಗಳನ್ನು ಸಂಪರ್ಕಿಸಿ, ತನ್ನ ಮಗಳಿಗಾದ ಅನ್ಯಾಯವನ್ನು ಎಲ್ಲರೆದುರಿಗೆ ಹೇಳಿ ಗೋಳಾಡಿದಳು. ಎಲ್ಲರೂ ಬುದ್ಧಿ ಹೇಳಿ ಕೊನೆಗೂ ಆ ಜೋಡಿ ಒಂದಾಗುವಂತೆ ಮಾಡಿದರು. ಈಗ ಮುದ್ದಾದ ಇಬ್ಬರು ಮಕ್ಕಳು ಅವರಿಗೆ. ಜೀವನವೂ ಚೆನ್ನಾಗಿದೆ. ಆದರೆ, ಮತ್ತೂಂದು ಇಂಥದ್ದೇ ಪ್ರಕರಣದಲ್ಲಿ ಸಿಟ್ಟಿಗೆದ್ದ ಹುಡುಗ, ಬೇರೆ ಹೆಂಗಸರ ಸಹವಾಸ ಮಾಡಿ, ಮಾರಣಾಂತಿಕ ಕಾಯಿಲೆಗೆ ತಾನೂ ಬಳಿಯಾಗಿ, ಕುಟುಂಬವನ್ನೂ ಅದರ ಸುಳಿಗೆ ಸಿಲುಕಿಸಿಬಿಟ್ಟ. ಸೋದರಮಾವನೊಡನೆ ಬಾಳಲು ಸಾಧ್ಯವಿಲ್ಲದೆಂದು ಸಾರಾಸಗಟಾಗಿ ನಿರಾಕರಿಸಿ, ಹುಡುಗಿಯೇ ಮನೆಬಿಟ್ಟು ಆಶ್ರಮ ಸೇರಿಕೊಂಡ ಘಟನೆ ನನ್ನ ಕಣ್ಣೆದುರೇ ನಡೆದಿದೆ.

ಮದುವೆ ಆಟ ಎಷ್ಟು ಸರಿ?
ತೊಟ್ಟಿಲಿನಲ್ಲಿ ಹಾಕಿದ ದಿನದಿಂದಲೇ ಸೋದರ ಸಂಬಂಧದೊಂದಿಗೋ, ಸೋದರ ಮಾವನೊಂದಿಗೋ ಜೋಡಿ ಮಾಡುವವರು ಕೆಲವರಾದರೆ, ಇನ್ನೂ ಕೆಲವರು, ಆತ್ಮೀಯ ಸ್ನೇಹಿತರ ಮಗ/ಮಗಳನ್ನು ತೋರಿಸಿ ನಿನ್ನ ಗಂಡನೆಂದೋ, ಹೆಂಡತಿಯೆಂದೋ ಮಕ್ಕಳಿಗೆ ಕೀಟಲೆ ಮಾಡುತ್ತಾರೆ. ಅದು ತಮಾಷೆಯೇ ಆದರೂ, ಕೆಲವು ಮಕ್ಕಳು ಮನಸ್ಸಿನಲ್ಲಿಯೇ ಆಸೆ ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ. ಮುಂದೆ, ಇಬ್ಬರೂ ಪರಸ್ಪರ ಇಷ್ಟಪಟ್ಟರೆ ಚಿಂತೆಯಿಲ್ಲ. ಏಕಮುಖ ಪ್ರೀತಿಯಾದರೆ ಮುಗಿಯಿತು ಕಥೆ. ಇದೇ ವಿಷಯ ಮುಂದೆ ಎರಡು ಕುಟುಂಬಗಳ ನಡುವೆ ದ್ವೇಷಕ್ಕೆ ತಿರುಗಿ ಅನರ್ಥವಾಗಿರುವುದೂ ಉಂಟು, ಮಕ್ಕಳು ಖನ್ನತೆಗೆ ಜಾರಿ, ಬಾಳನ್ನು ಗೋಳು ಮಾಡಿಕೊಂಡಿರುವುದೂ ಇದೆ.

ಹೀಗೆ ದೊಡ್ಡವರೇ ನಿಶ್ಚಯಿಸಿದ ಮದುವೆಗೆ ಮಕ್ಕಳು ಒಪ್ಪಿಕೊಳ್ಳದಿದ್ದರೆ, ಉಪವಾಸ ಮಾಡಿಯೋ, ಸಾಯುತ್ತೇನೆಂದು ಹೆದರಿಸಿಯೋ, ಇದೇ ನನ್ನ ಕೊನೆಯಾಸೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿಯೋ ಮದುವೆಗೆ ಒಪ್ಪಿಸುವುದು ಹಿರಿಯರಿಗೆ ಗೊತ್ತಿದೆ. ಅವರ ಆಲೋಚನೆಯ ಉದ್ದೇಶ ಒಳ್ಳೆಯದೇ ಇದ್ದರೂ, ಮುಂದೆ ಬಾಳಿ ಬದುಕಬೇಕಾದವರು ಮಕ್ಕಳೇ ತಾನೆ? ಆಟವಾಡಿಕೊಂಡಿರುವ ಮಕ್ಕಳ ಮನಸ್ಸಿನಲ್ಲಿ ಗಂಡ-ಹೆಂಡತಿ, ಮದುವೆ, ಸಂಸಾರ ಅಂತೆಲ್ಲಾ ಕಲ್ಪನೆ ಮೂಡಿಸುವ ಮುನ್ನ ಎಚ್ಚರ ವಹಿಸಬೇಕಲ್ಲವೆ?

ನಳಿನಿ ಟಿ. ಭೀಮಪ್ಪ

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.