ನಿಗೂಢ ರಾಂಚಿ
ಧೋನಿ ಊರ ಹೆಸರಲ್ಲೊಂದು ಸಿನಿಮಾ
Team Udayavani, Sep 27, 2019, 5:00 AM IST
ರಾಂಚಿ – ಈ ಊರಿನ ಹೆಸರು ಕೇಳುತ್ತಿದ್ದಂತೆ ನಿಮಗೆ ಕ್ರಿಕೆಟಿಗ ಎಂ.ಎಸ್.ಧೋನಿ ನೆನಪಾಗುತ್ತಾರೆ. ಈಗ ಅವರ ಊರ ಹೆಸರನ್ನೇ ಶೀರ್ಷಿಕೆಯನ್ನಾಗಿಸಿ, ಸಿನಿಮಾವೊಂದು ತಯಾರಾಗಿದೆ. ಹೌದು, “ರಾಂಚಿ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿದೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿರುವ ಪ್ರಭು ಮುಂಡುರ್ ಈ ಚಿತ್ರದ ನಾಯಕ. ಶಶಿಕಾಂತ್ ಗಟ್ಟಿ ಈ ಚಿತ್ರದ ನಿರ್ದೇಶಕರು. ರಾಂಚಿಯಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಸಿನಿಮಾ ಮಾಡಲಾಗಿದೆ ಎಂಬ ವಿವರ ಚಿತ್ರತಂಡದ್ದು. 2009ರಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕರ್ನಾಟಕದ ಒಂದಷ್ಟು ಮಂದಿ ತಂತ್ರಜ್ಞರನ್ನು ಕರೆಸಿಕೊಂಡು ಕೊಲ್ಲಲಾಗಿತ್ತು. ಈ ಅಂಶದ ಸುತ್ತ “ರಾಂಚಿ’ ಸಿನಿಮಾ ಸಾಗುತ್ತದೆಯಂತೆ.
ಚಿತ್ರದಲ್ಲಿ ಪ್ರಭು ಮುಂಡುರ್ ನಿರ್ದೇಶಕನ ಪಾತ್ರ ಮಾಡಿದ್ದಾರಂತೆ. ದಿವ್ಯ ಉರುಡುಗ ಈ ಚಿತ್ರದ ನಾಯಕಿ. ಅವರಿಲ್ಲಿ ಸಹಾಯಕ ನಿರ್ದೇಶಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಐಪಿಎಸ್ ಅಧಿಕಾರಿ ಪ್ರವೀಣ್ ಕುಮಾರ್ ಸಿಂಗ್ ಪಾತ್ರ ಪ್ರಮುಖವಾಗಿದ್ದು, ಆ ಪಾತ್ರವನ್ನು ಬಾಲಿವುಡ್ ನಟ ತೋತಾರಾಯ್ ಚೌಧರಿ ನಿರ್ವಹಿಸಿದ್ದಾರೆ. ಇನ್ನು, ಕಿರುತೆರೆಯಲ್ಲಿ ವಿಲನ್ ಆಗಿ ಮಿಂಚಿರುವ ಲಕ್ಷ್ಮಣ್ ಇಲ್ಲೂ ವಿಲನ್ ಆಗಿ ಅಬ್ಬರಿಸಿದ್ದಾರೆ.
ಚಿತ್ರಕ್ಕೆ ಮಣಿಕಾಂತ್‌ಕದ್ರಿ ಸಂಗೀತ, ಸಂದೀಪ್ ಚೌಟ -ಆಲ್ವಿನ್ ಫರ್ನಾಂಡೀಸ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. “ಡಬ್ಬಲ್ ಇಂಜಿನ್’ ಚಿತ್ರ ನಿರ್ಮಾಣ ಮಾಡಿರುವ ಅರುಣ್‌ಕುಮಾರ್.ಎನ್. ಅವರು ಗೆಳೆಯ ರುದ್ರಾನಂದ.ಆರ್.ಎನ್ ಅವರೊಂದಿಗೆ ಸೇರಿಕೊಂಡು ಸಿನಿಮಾ ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.