ಗ್ರಾಮೀಣ ಜನರಿಗೆ ಕೇಳಿಸದ ಮಂಗಳೂರು ಆಕಾಶವಾಣಿ
ಪ್ರಧಾನಿಗೆ ಅಂಚೆ ಕಾರ್ಡ್ ಹಕ್ಕೊತ್ತಾಯದ ಹಂತ
Team Udayavani, Sep 27, 2019, 5:19 AM IST
ಉಡುಪಿ: ಪ್ರಧಾನಿಯವರ “ಮನ್ ಕಿ ಬಾತ್’ ಜನಪ್ರಿಯವಾದರೂ ತಾಂತ್ರಿಕ ಕಾರಣಗಳಿಗಾಗಿ ಗ್ರಾಮೀಣ ಜನರಿಂದ ದೂರವಾದ ಆಕಾಶ ವಾಣಿಯನ್ನು ಮತ್ತೆ ಅದೇ ಹಳಿಗೆ ತರಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಅಂಚೆ ಕಾರ್ಡ್ ಚಳವಳಿ ಆರಂಭವಾಗಿದೆ.
ಗ್ರಾಮೀಣ ಜನರಿಗೆ ತಲುಪದೆ ನಾಲ್ಕು ವರ್ಷಗಳಾದವು
ವಿವಿಧ ವರ್ಗಗಳ ಜನರಿಗೆ ಮುದ ನೀಡುವ ಜತೆ ಜಾಗೃತಿಯನ್ನೂ ಮೂಡಿ ಸುತ್ತಿದ್ದ ಮಂಗಳೂರು ಆಕಾಶವಾಣಿ ದ.ಕ., ಉಡುಪಿ, ಕಾಸರಗೋಡು ಸಹಿತ ಉದ್ದಗಲದ ಗ್ರಾಮೀಣ ಜನರಿಗೆ ತಲುಪದೆ ನಾಲ್ಕು ವರ್ಷಗಳಾಗಿವೆ. ಸರಿಸುಮಾರು ಇದೇ ಅವಧಿಯಲ್ಲಿ ಜನಪ್ರಿಯಗೊಂಡ “ಮನ್ ಕಿ ಬಾತ್’ ಕಾರ್ಯಕ್ರಮವನ್ನೂ ಕೇಳಲು ಈ ಜನರಿಗೆ ಸಾಧ್ಯವಾಗುತ್ತಿಲ್ಲ.
“ಮನ್ ಕೀ ಬಾತ್’ ಆರಂಭವಾದ ಬಳಿಕ ಆಕಾಶವಾಣಿಗೆ ಮತ್ತೆ ಬೇಡಿಕೆ ಶುರುವಾಗಿತ್ತು. ಎಫ್ಎಂ ರೇಡಿಯೋ ಆರಂಭವಾದ ಬಳಿಕ ಕಾರುಗಳಲ್ಲಿಯೂ ಇದರ ಆಲಿಕೆ ಸಾಧ್ಯವಾಯಿತು. ಆದರೆ ಇದನ್ನು ಆಲಿಸಲು ಬೇಕಾದ ವ್ಯವಸ್ಥೆಗಳು ಆಗಿಲ್ಲ.
ಇದಕ್ಕೆ ಕಾರಣ ಮಂಗಳೂರು ಆಕಾಶವಾಣಿಯ ಬ್ರಹ್ಮಾವರದ ಉಪಕೇಂದ್ರದಲ್ಲಿದ್ದ 100 ಮೀ. ಎತ್ತರದ ಬೃಹತ್ ಟವರ್ 2015ರ ಎಪ್ರಿಲ್ 21ರಂದು ಕುಸಿದು ಬಿದ್ದದ್ದು. ಬಿದ್ದ ಟವರ್‌ನ್ನು ಎತ್ತಿ ಹಿಡಿಯಲು ಅಥವಾ ಪರ್ಯಾಯ ತಂತ್ರಜ್ಞಾನವನ್ನು ಅಳವಡಿಸಲು ಸರಕಾರ ಮುಂದೆ ಬಂದಿಲ್ಲವಾದ ಕಾರಣ ಈಗ ಆಕಾಶವಾಣಿ ಸದ್ದು ಕೇಳಿಸುವುದು ಕುಸಿದಿದೆ. ಕರಾವಳಿಯ ಮೂಲ್ಕಿಯಿಂದ ಬೈಂದೂರು ಶಿರೂರು ವರೆಗೆ, ಅತ್ತ ಬೆಳ್ತಂಗಡಿ, ಸುಳ್ಯ, ಇನ್ನೊಂದತ್ತ ವಿಶಾಲ ಕಾಸರಗೋಡು ಪ್ರದೇಶದ ಜನರಿಗೆ ಮಂಗಳೂರು ಆಕಾಶವಾಣಿ ಲಭ್ಯವಿಲ್ಲ. ಕುಸಿದು ಬಿದ್ದ ಟವರ್‌ನ್ನು ಮತ್ತೆ ಎತ್ತಬೇಕಾದರೆ ದುಬಾರಿ. ಇದು ಮೀಡಿಯಂ ವೇವ್ ತಂತ್ರಜ್ಞಾನ ಆಧಾರಿತವಾದುದು. ಈಗ ಇದಕ್ಕೆ ಸೂಕ್ತವಾದ ರೇಡಿಯೋಗಳೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದರ ಬದಲು ಈಗ ಚಾಲ್ತಿಯಲ್ಲಿರುವ ಎಫ್ಎಂ ರೇಡಿಯೋ ತಂತ್ರಜ್ಞಾನದ ಟ್ರಾನ್ಸ್ ಮೀಟರ್ ಅಳವಡಿಸಿದರೆ ಗ್ರಾಮೀಣ ಜನರಿಗೆ ಮಂಗಳೂರು ಆಕಾಶವಾಣಿಯ ಗತಕಾಲದ ವೈಭವ ಮರುಕಳಿಸೀತು. ಈಗ ಮೊಬೈಲ್ ಆ್ಯಪ್‌ನಲ್ಲಿ ಆಕಾಶವಾಣಿಯನ್ನು ಕೇಳಲು ಸಾಧ್ಯವಿದ್ದರೂ ಗ್ರಾಮೀಣ ಪ್ರದೇಶವನ್ನು ಅಷ್ಟು ಸುಲಭದಲ್ಲಿ ತಲುಪಲು ಸಾಧ್ಯವಿಲ್ಲ.
ಸಿಬಂದಿ ಕೊರತೆ, ದುರ್ಬಲವಾಗುತ್ತಿದೆ
ಮೂಲಗಳ ಪ್ರಕಾರ ಕೇವಲ ಟವರ್ ಪುನರುಜ್ಜೀವನದ ಪ್ರಶ್ನೆಯಲ್ಲ. ಮಂಗಳೂರು ಆಕಾಶವಾಣಿಯೇ ಭವಿಷ್ಯದಲ್ಲಿ ಇನ್ನಿಲ್ಲವಾಗುವ ಭಯ ವಿದೆ. ಸುಮಾರು 15 ವರ್ಷಗಳ ಹಿಂದೆ ಮಂಗಳೂರು ಆಕಾಶವಾಣಿ ಯಲ್ಲಿ ಸುಮಾರು 150 ಸಿಬಂದಿಗಳಿದ್ದರೆ ಈಗ 50ಕ್ಕೆ ಇಳಿದಿದೆ. ವರ್ಗಾವಣೆ, ನಿವೃತ್ತಿಯಾದಾಗ ಬದಲಿ ನೇಮಕ ಗಳಿಲ್ಲ. ತುಳು ವಿಭಾಗದಲ್ಲಿದ್ದ ಡಾ| ಸದಾನಂದ ಪೆರ್ಲ ಕಲಬುರಗಿಗೆ, ನಾಟಕ ವಿಭಾಗದಲ್ಲಿದ್ದ ಡಾ| ಬಿ.ಎಂ. ಶರಭೇಂದ್ರಸ್ವಾಮಿ ರಾಯಚೂರಿಗೆ, ಕೊಂಕಣಿ ಕಾರ್ಯಕ್ರಮದಲ್ಲಿದ್ದ ಕನ್ಸೆಪಾr ಫೆರ್ನಾಂಡಿಸ್ ಬೆಂಗಳೂರಿಗೆ, ಫ್ಲೋರಿನ್ ರೋಚ್ ಕಾರವಾರಕ್ಕೆ ವರ್ಗಾವಣೆ ಗೊಂಡಿದ್ದಾರೆ. ನಿರ್ದೇಶಕರಾಗಿದ್ದ ವಸಂತ ಕುಮಾರ್ ಪೆರ್ಲ, ಕೃಷಿರಂಗದಲ್ಲಿದ್ದ ಎತ್ತಿದ ಕೈ ಎನಿಸಿದ್ದ ಸದಾನಂದ ಹೊಳ್ಳ ನಿವೃತ್ತಿಯಾಗಿದ್ದಾರೆ. ಹೀಗೆ ಮುಂದುವರಿದರೆ ಪ್ರಧಾನಿಯವರು “ಮನ್ ಕಿ ಬಾತ್’ ನಡೆಸಿದರೂ, ಅದಕ್ಕೆ ಜನಪ್ರಿಯತೆ ಇದ್ದರೂ ಸರಕಾರದ ಅಸಡ್ಡೆ ನೀತಿಯಿಂದ ಕೇಳುವ ಜನರಿಲ್ಲದೆ ಹೋಗುವ ಸಾಧ್ಯತೆ ಇದೆ. ಆಕಾಶವಾಣಿ ದನಿ ಮತ್ತೆ ಗ್ರಾಮೀಣ ಪ್ರದೇಶವನ್ನು ತಲುಪುವಂತಾಗಲು ಪ್ರಧಾನಿಯವರಿಗೆ ಬರೆಯುವ ಅಂಚೆ ಕಾರ್ಡ್ ಚಳವಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಟಾರ್ ಕಾರ್ಡ್ ಬರೆದು ಮುಂದಡಿ ಇಟ್ಟಿದ್ದಾರೆ. ಇಂತಹ ಕಾರ್ಡ್‌ಗಳು ಎಷ್ಟು ಸಂಖ್ಯೆಯಲ್ಲಿ ಪ್ರಧಾನಿ ಕಚೇರಿಯನ್ನು ತಲುಪುತ್ತದೋ ಅಷ್ಟು ವೇಗದಲ್ಲಿ ಆಕಾಶವಾಣಿ ದನಿ ಜನರಿಗೆ ಕೇಳಬಹುದು.
ಮೀಡಿಯಂ ವೇವ್ ತಂತ್ರಜ್ಞಾನದ ಟವರ್ ಸ್ಥಾಪನೆಗಿಂತ ಎಫ್ಎಂ ಟ್ರಾನ್ಸ್‌ಮೀಟರ್ ಸ್ಥಾಪನೆ ಸೂಕ್ತವಾಗಿದೆ. ಎಫ್ಎಂ ಟ್ರಾನ್ಸ್ ಮೀಟರ್ ಸ್ಥಾಪನೆಗೆ ಪ್ರಸ್ತಾವನೆ ಹೋಗಿದೆ. ಇತ್ತೀಚಿಗೆ ದಕ್ಷಿಣ ವಲಯದ ಎಂಜಿನಿಯರಿಂಗ್ ವಿಭಾಗ ಮತ್ತು ಕಾರ್ಯಕ್ರಮ ವಿಭಾಗದ ಮುಖ್ಯಸ್ಥರು ಬೇರೆ ಬೇರೆ ಕಾರಣಗಳಿಗೆ ಮಂಗಳೂರಿಗೆ ಬಂದಾಗ ವಿಷಯವನ್ನು ಪ್ರಸ್ತಾವಿಸಿದ್ದೇವೆ. ನಾವಿದರ ಬಗ್ಗೆ ಪಸ್ಯೂì ಮಾಡುತ್ತೇವೆ ಎಂದು ಹೇಳಿದ್ದಾರೆ.
– ಉಷಾಲತಾ, ಮುಖ್ಯಸ್ಥರು, ಮಂಗಳೂರು ಆಕಾಶವಾಣಿ
ಜನರ ಬೇಡಿಕೆ ಇದ್ದಲ್ಲಿ ಟವರ್ ಮರು ಸ್ಥಾಪಿಸಬಹುದು.
– ವಸಂತ ಕುಮಾರ ಪೆರ್ಲ,
ನಿವೃತ್ತ ಮಂಗಳೂರು ಆಕಾಶವಾಣಿ ನಿರ್ದೇಶಕರು
ಚಳವಳಿಯಿಂದ ಪ್ರಯೋಜನ
ಈಗ ಅಂಚೆ ಕಾರ್ಡ್ ಚಳವಳಿ ನಡೆಯುತ್ತಿರುವುದರಿಂದ ಪ್ರತಿಯೊಬ್ಬ ನಾಗರಿಕರು ತಮ್ಮ ಬೇಡಿಕೆಯನ್ನು ಪ್ರಧಾನಮಂತ್ರಿಯವರಿಗೆ ಕಾರ್ಡ್ ಮೂಲಕ ತಿಳಿಸಬೇಕು. ಹಿಂದೆ ಪ್ರಧಾನಿಯವರಿಗೆ ಪತ್ರ ಬರೆದು ಒತ್ತಾಯಿಸಿದಾಗ ಅವರು ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮಕ್ಕಾಗಿ ಸೂಚಿಸಿದ್ದರು. ಯಾವ ರೀತಿಯಲ್ಲಿಯೂ ಇದು ಮುಂದೆ ಹೋಗಿಲ್ಲ. ಹೀಗಾಗಿ ಈ 2ನೇ ಹಂತದ ಜನರ ಹಕ್ಕೊತ್ತಾಯದ ಚಳವಳಿ ಪ್ರಯೋಜನ ತಂದೀತು.
– ರಾಮಕೃಷ್ಣ ಖಾರ್ವಿ, ಅಧ್ಯಕ್ಷರು, ಜನಾರ್ದನ ಮರವಂತೆ, ಸ್ಥಾಪಕ ಅಧ್ಯಕ್ಷರು, ಪ್ರಕಾಶ್ ಪಡಿಯಾರ್, ಸದಸ್ಯ, ಸಾಧನಾ ಸಮಾಜ ಸೇವಾ ವೇದಿಕೆ, ಮರವಂತೆ
ಕೇಂದ್ರದ ಮೇಲೆ ಪ್ರಭಾವ ಬೀರಿದರೆ ಮಾತ್ರ ಸಾಧ್ಯ
ಜನಪ್ರತಿನಿಧಿಗಳಿಗೆ ಮನವಿ ಮಾಡಿ ಪತ್ರ ಬರೆದರೆ ಅವರು ಅದಕ್ಕೆ ತಮ್ಮ ಒಂದು ಪತ್ರವನ್ನು ಬರೆದು ಕೇಂದ್ರದ ಸಚಿವಾಲಯಕ್ಕೆ ರವಾನಿಸುತ್ತಾರೆ. ಇಂತಹ ಯಾವ ಪತ್ರಗಳೂ ಪ್ರಬಲ ಇಚ್ಛಾಶಕ್ತಿಯನ್ನು ಹೊಂದಿರುವುದಿಲ್ಲ. ಎಷ್ಟೋ ಜನರು ಆಕಾಶವಾಣಿ ಅಧಿಕಾರಿಗಳಿಗೆ ಪತ್ರ ಬರೆದು, ದೂರವಾಣಿಯಲ್ಲಿ ಒತ್ತಾಯಿಸುವುದುಂಟು. ಇದು ದಿಲ್ಲಿಯ ಸಚಿವಾಲಯ ಮಟ್ಟದಲ್ಲಿ ಆಗುವ ಕೆಲಸವೇ ವಿನಾ ಸ್ಥಳೀಯವಾಗಿ ತೆಗೆದುಕೊಳ್ಳುವ ನಿರ್ಧಾರ ಆಗಿರುವುದಿಲ್ಲ. ಕರಾವಳಿಯ ಇಬ್ಬರು ಸಂಸದರು ಪ್ರಬಲ ಇಚ್ಛಾಶಕ್ತಿಯನ್ನು ಹೊಂದಿ ಕೇಂದ್ರ ಸರಕಾರದ ಮೇಲೆ ಪ್ರಭಾವ ಬೀರಿದರೆ ಮಾತ್ರ ಏನಾದರೂ ಸಾಧ್ಯವಾದೀತು. ಇದಕ್ಕಾಗಿ ಜನರು ಸಂಸದರಿಗೂ ಆಗ್ರಹಿಸಿ ಅಂಚೆ ಕಾರ್ಡ್ ಬರೆದರೆ ಇನ್ನೂ ಉತ್ತಮ.
– ಓರ್ವ ಆಕಾಶವಾಣಿ ಶೋತೃ
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.