ಮಂಜೇಶ್ವರ ವಿಧಾನಸಭೆ ಉಪಚುನಾವಣೆ: ಅಂತಿಮ ಸಿದ್ಧತೆ


Team Udayavani, Sep 27, 2019, 5:58 AM IST

26KSDE1

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಅಕ್ಟೋಬರ್‌ 21ರಂದು ಸೋಮವಾರ ನಡೆ ಯಲಿದ್ದು, ಆ ಪ್ರಯುಕ್ತ ಜಿಲ್ಲಾ ಚುನಾ ವಣ ವಿಭಾಗವು ಈಗಾಗಲೇ ಸಂಪೂರ್ಣ ಸಜ್ಜುಗೊಂಡಿದೆ.

ಅಲ್ಲದೆ ಉಪ ಚುನಾವಣೆ ಗಿರುವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ಬಾಬು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ತಮ್ಮ ಚೇಂಬರ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜೇಶ್ವರ ಉಪಚುನಾವಣೆಗೆ ಸೆ. 30ರ ವರೆಗಿನ ದಿನಾಂಕಗಳಲ್ಲಿ ಸೆ. 28 ಹೊರತುಪಡಿಸಿ ಇತರ ದಿನಗಳಂದು ಬೆಳಗ್ಗೆ 11ರಿಂದ ಅಪರಾಹ್ನ 3 ಗಂಟೆಯ ತನಕ ನಾಮಪತ್ರ ಸಲ್ಲಿಸಬಹುದು ಎಂದು ಹೇಳಿದರು.

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ ಡೆಪ್ಯುಟಿ ಕಲೆಕ್ಟರ್‌ (ಎಲ್‌ಆರ್‌) ಅವರ ಕಾಸರಗೋಡು ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಕಾರ್ಯಾಚರಿಸು ತ್ತಿರುವ ಕಾರ್ಯಾಲಯದಲ್ಲೂ ಹಾಗೂ ಉಪ ಚುನಾವಣಾಧಿಕಾರಿಯಾಗಿ ನಿಯು ಕ್ತರಾದ ಮಂಜೇಶ್ವರ ಬಿಡಿ ಒ ಅವರ ಬಿಡಿಒ ಕಚೇರಿಯಲ್ಲಿಯೂ ನಾಮಪತ್ರ ಸಲ್ಲಿಸ ಬಹುದು. ನಾಮಪತ್ರವನ್ನು ಸೆ.30ರಂದು ಅಪರಾಹ್ನ 3 ಗಂಟೆಯ ಅನಂತರ ಸ್ವೀಕರಿಸ ಲಾಗುವುದಿಲ್ಲ.

ನಾಮಪತ್ರಗಳ ಸೂಕ್ಷ್ಮ ತಪಾಸಣೆಯು ಅಕ್ಟೋಬರ್‌ 1ರಂದು ನಡೆಯಲಿದ್ದು, ನಾಮಪತ್ರ ಹಿಂದೆಗೆಯುವ ಕೊನೆಯ ದಿನಾಂಕ ಅಕ್ಟೋಬರ್‌ 3 ಆಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಮಂಜೇಶ್ವರ ಮಂಡಲದಲ್ಲಿ ಒಟ್ಟು 198 ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳ ಲ್ಲಿಯೂ ಚುನಾವಣಾ ಆಯೋಗದ ಆದೇಶ ಪ್ರಕಾರವಿರುವ ಮೂಲ ಸೌಲಭ್ಯಗಳಿರುವುವು. ಸರಳ, ನ್ಯಾಯಯುತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಒಟ್ಟು 18 ನೋಡಲ್‌ ಅಧಿ ಕಾರಿಗಳನ್ನು ನಿಯೋಜಿಸಲಾಗಿದೆ. ಮಂಜೇಶ್ವರವು ಕರ್ನಾಟಕದ ಗಡಿಪ್ರದೇಶಕ್ಕೆ ತಾಗಿಕೊಂಡಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಈ ಪ್ರದೇಶಕ್ಕೆ ಸಂಬಂಧಿಸಿ ಒಟ್ಟು 9 ಚೆಕ್‌ಪೋಸ್ಟ್‌ಗಳಿರುವುದರಿಂದ ಇಲ್ಲಿ ತೀವ್ರ ತಪಾಸಣೆ ನಡೆಸಲಾಗುವುದು. ಅಲ್ಲದೆ ಕರ್ನಾಟಕದಿಂದ ಕೇರಳಕ್ಕೆ ಬರುವವರನ್ನು ಹಾಗೂ ಕೇರಳದಿಂದ ಕರ್ನಾಟಕಕ್ಕೆ ತೆರಳುವವರನ್ನು ಗಮನಿಸಲಾಗುವುದು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ವೆಬ್‌ಕಾಸ್ಟಿಂಗ್‌ ಮತಗಟ್ಟೆಯಿಲ್ಲ. ಸಮಸ್ಯೆ ತಲೆದೋರಬಹುದಾದ ಮತ ಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸರನ್ನು ನೇಮಕ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದರು.

2,12,086 ಮತದಾರರು
ಪ್ರಸ್ತುತ ಪ್ರಕಟಿಸಲಾದ ಮತದಾರರ ಪಟ್ಟಿಯಲ್ಲಿ ಒಟ್ಟು 2,12,086 ಮಂದಿ ಮತದಾರರಿದ್ದಾರೆ. ಇದರಲ್ಲಿ 1,06,624 ಮಂದಿ ಪುರುಷರು ಮತ್ತು 1,05,462 ಮಂದಿ ಮಹಿಳೆಯರು ಒಳಗೊಂಡಿದ್ದಾರೆ. ಮಂಜೇಶ್ವರ ಉಪಚುನಾವಣೆಗೆ ಸಂಬಂಧಿಸಿ ಸೆ.20ರ ತನಕ ಲಭಿಸಿದ ಅರ್ಜಿಗಳನ್ನು ಮಾತ್ರವೇ ಈ ಬಾರಿಯ ಮತದಾರರ ಪಟ್ಟಿಗೆ ಪರಿಗಣಿಸಲಾಗುವುದು. ಆ ಪ್ರಕಾರ ಮತದಾರರ ಪಟ್ಟಿಯಲ್ಲಿ ಸೇರಿಸಲು 4,533 ಅರ್ಜಿಗಳು ಮತ್ತು ಹೆಸರು ಹೊರತುಪಡಿಸಲು 670 ಅರ್ಜಿಗಳು ದೊರಕಿವೆ. ಈ ಎಲ್ಲ ಅರ್ಜಿಗಳನ್ನು ಪರಿಗಣಿಸಿ ಸೆ.30ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ನೇಮಕಗೊಂಡ ನೋಡಲ್‌ ಅಧಿಕಾರಿಗಳು
1 ಮಾನವ ಸಂಪನ್ಮೂಲ ನೋಡಲ್‌ ಅಧಿಕಾರಿ: ಡಿ.ಸಿ. ಕಚೇರಿಯ ಹುಸೂರ್‌ ಶಿರಸ್ತೇದಾರ್‌ ಕೆ.ನಾರಾಯಣನ್‌ (9495561796).
2 ಇ.ವಿ.ಎಂ., ವಿವಿಪಾಟ್‌ ಉಸ್ತುವಾರಿ ನೋಡಲ್‌ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಹುಸೂರ್‌ ಶಿರಸ್ತೇದಾರ್‌ ಕೆ. ನಾರಾಯಣನ್‌ (9495561796).
3 ಸಂಚಾರಿ ಉಸ್ತುವಾರಿ ನೋಡಲ್‌ ಅಧಿಕಾರಿ: ಕಾಸರಗೋಡು ಸಾರಿಗೆ ವಲಯ ಅಧಿಕಾರಿ ಮನೋಜ್‌ (9447003891).
4 ತರಬೇತು ನೋಡಲ್‌ ಅಧಿಕಾರಿ: ಪಂಚಾಯತ್‌ ಡೆಪ್ಯೂಟಿ ಡೈರೆಕ್ಟರ್‌, ಹಿರಿಯ ವರಿಷ್ಠಾಧಿಕಾರಿ ವಿನೋದ್‌ ಕುಮಾರ್‌ ಕೆ. (9446017388)
5 ಸಾಮಗ್ರಿ ಉಸ್ತುವಾರಿ ನೋಡಲ್‌ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಕಿರಿಯ ವರಿಷ್ಠಾಧಿಕಾರಿ ಅಜಿತ್‌ ಬಿ (8547432192)
6 ಕಾನೂನು ಪಾಲನೆ ಉಸ್ತುವಾರಿ ನೋಡಲ್‌ ಅಧಿಕಾರಿ: ವಲಯ ಕಂದಾಯಾಧಿಕಾರಿ ಎನ್‌.ದೇವಿದಾಸ್‌ (9447726900)
7 ಖರ್ಚುವೆಚ್ಚ ನಿಗಾ ನೋಡಲ್‌ ಅಧಿಕಾರಿ: ಜಿಲ್ಲಾ ಹಣಕಾಸು ಅಧಿಕಾರಿ ಕೆ. ಸತೀಶನ್‌ (9447648998)
8 ನಿರೀಕ್ಷಕರ ನೋಡಲ್‌ ಅಧಿಕಾರಿ: ಸರ್ವೇ ಡೆಪ್ಯೂಟಿ ಡೈರೆಕ್ಟರ್‌ ಕೆ.ಕೆ.ಸುನಿಲ್‌ (9447528908)
9 ಅಂಚೆ ಮತದಾನ ನೋಡಲ್‌ ಅಧಿಕಾರಿ: ವಿಶೇಷ ತಹಶೀಲ್ದಾರ್‌ ಸೂರ್ಯ ನಾರಾಯಣನ್‌ ವಿ. (9446079985)
10 ಮಾಧ್ಯಮ ಮತ್ತು ಎಂ.ಸಿ.ಎಂ.ಸಿ. ನೋಡಲ್‌ ಅಧಿಕಾರಿ: ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್‌ ಎಂ. (8547860180)
11 ಕಂಪ್ಯೂಟರ್‌ ವಿಭಾಗ ನೋಡಲ್‌ ಅಧಿಕಾರಿ: ಎನ್‌.ಐ.ಸಿ. ಜಿಲ್ಲಾ ಮಾಹಿತಿ ಅಧಿಕಾರಿ ರಾಜನ್‌ ಕೆ. (9400158845)
12 ಸ್ವೀಪ್‌ ನೋಡಲ್‌ ಅಧಿಕಾರಿ: ತಾಲೂಕು ಕಚೇರಿ ಕಿರಿಯ ವರಿಷ್ಠಾಧಿಕಾರಿ ಗೋವಿಂದನ್‌ ಎಸ್‌. (8301811968)
13 ಹೆಲ್ಪ್ಲೈನ್‌, ದೂರು ಸ್ವೀಕಾರ ನೋಡಲ್‌ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಹಿರಿಯ ವರಿಷ್ಠಾಧಿಕಾರಿ ಚಿತ್ರಾನಾಥ್‌ ಆರ್‌. (9497707695)
14 ಐ.ಸಿ.ಟಿ. ಅಪ್ಲಿಕೇಶನ್‌ ನೋಡಲ್‌ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಹಿರಿಯ ವರಿಷ್ಠಾಧಿಕಾರಿ ಚಿತ್ರಾನಾಥ್‌ ಆರ್‌. (9497707695)
15 ಎಸ್‌.ಎಂ.ಎಸ್‌. ಮಾನಿಟರಿಂಗ್‌ ಮತ್ತು ಸಂವಹನ ಯೋಜನೆ ನೋಡಲ್‌ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿ ಕಿರಿಯ ವರಿಷ್ಠಾಧಿಕಾರಿ ಅಜಿತ್‌ ಬಿ. (8547432192)
16 ಮತದಾರರ ಸಹಾಯವಾಣಿ (1950) ನೋಡಲ್‌ ಅಧಿಕಾರಿ: ಜಿಲ್ಲಾಧಿಕಾರಿ ಕಚೇರಿಯ ಜೆ.ಎಸ್‌. ಶ್ರೀವಿದ್ಯಾ ಟಿ.ಪಿ. (8281940809)
17 ಸೈಬರ್‌ ರಕ್ಷಣೆ ನೋಡಲ್‌ ಅಧಿಕಾರಿ ಸಹಾಯಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ: ಪಿ.ಬಿ.ಪ್ರಷೋಬ್‌ (9497990141)
18 ವಿಶೇಷ ಚೇತನರ ನೋಡಲ್‌ ಅಧಿಕಾರಿ: ಜಿಲ್ಲಾ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಬಿಂದು (9495672271).

ಮತ ಯಂತ್ರ ಆಗಮನ
ಕಾಸರಗೋಡು: ಮಂಜೇಶ್ವರ ವಿಧಾನಸಭಾ ಉಪಚುನಾವಣೆಗೆ ಭಾರತ್‌ ಇಲೆ ಕ್ಟ್ರಾನಿಕ್ಸ್‌ ನಿರ್ಮಿಸಿದ ಎಂ.ತ್ರೀ. ವಿಭಾಗಕ್ಕೆ ಸೇರಿದ ಇ.ವಿ.ಎಂ, ವಿವಿಪಾಟ್‌ ಯಂತ್ರ ಕಾಸರಗೋಡಿಗೆ ಬಂದಿದೆ. 400 ಬ್ಯಾಲೆಟ್‌ ಯೂನಿಟ್‌, 400 ಕಂಟ್ರೋಲ್‌ ವಿ.ವಿ.ಪಾಟ್‌ ಯಂತ್ರ ಗಳು ಕೊಯಮತ್ತೂರಿನಿಂದ ಎಕ್ಸಿಕ್ಯೂಟಿವ್‌ ಮ್ಯಾಜಿಸ್ಟ್ರೇಟ್‌ ಮತ್ತು ಸಶಸ್ತ್ರ ಪೊಲೀಸ್‌ ಭದ್ರತೆಯೊಂದಿಗೆ ಇ.ವಿ.ಎಂ. ಗೋದಾಮಿಗೆ ಆಗಮಿಸಿವೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಎಂಜಿನಿಯರ್‌ಗಳು ಯಂತ್ರಗಳ ಪ್ರಾಥಮಿಕ ತಪಾಸಣೆ ನಡೆಸಿದರು. ಚುನಾವಣ ಮತ ಯಂತ್ರಗಳ ಪ್ರಾಥಮಿಕ ತಪಾಸಣೆ ನಡೆಸಲು ಅಗತ್ಯವಾದ ಸಿಬಂದಿಯನ್ನು ನೇಮಿಸಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದಾರೆ.

ಎಡ-ಐಕ್ಯರಂಗ ಅಭ್ಯರ್ಥಿಗಳ ಘೋಷಣೆ
ಕಾಸರಗೋಡು: ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಯಲ್ಲಿ ಎಲ್‌ಡಿಎಫ್‌, ಯುಡಿಎಫ್‌ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಇನ್ನಷ್ಟೇ ಘೋಷಿಸಬೇಕಾಗಿದೆ.

ಯುಡಿಎಫ್‌ ಅಭ್ಯರ್ಥಿಯಾಗಿ ಮುಸ್ಲಿಂ ಲೀಗ್‌ ಜಿಲ್ಲಾಧ್ಯಕ್ಷ ಎಂ.ಸಿ. ಖಮರುದ್ದೀನ್‌ ಅವರನ್ನು ಪಕ್ಷದ ಅಧ್ಯಕ್ಷರು ಘೋಷಿಸಿದ್ದರು.

ಎಲ್‌ಡಿಎಫ್‌ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಶಂಕರ ರೈ ಅವರ ಹೆಸರನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಗುರುವಾರ ಬೆಳಗ್ಗೆ ಘೋಷಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌, ಮಂಡಲ ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಅವರ ಹೆಸರು ಪರಿಗಣನೆಯಲ್ಲಿದೆ.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.