ರಾಜ್ಯದ ಪಿಎಂಜೆ ಕೇಂದ್ರಗಳಲ್ಲಿ ಉಡುಪಿ ಜಿಲ್ಲೆ ಅಗ್ರಸ್ಥಾನಿ

ಪ್ರತಿ ದಿನ 1.50ರಿಂದ 2 ಲಕ್ಷ ರೂ. ಮೌಲ್ಯದ ಜನೌಷಧ ಮಾರಾಟ

Team Udayavani, Sep 27, 2019, 5:52 AM IST

x-55

ಉಡುಪಿ ತೆಂಕಪೇಟೆಯ ಜನೌಷಧ ಕೇಂದ್ರ.

ಉಡುಪಿ: ರಾಜ್ಯದ ಅತ್ಯುತ್ತಮ ಪ್ರಧಾನಮಂತ್ರಿ ಜನೌಷಧ (ಪಿಎಂಜೆ) ಕೇಂದ್ರಗಳ ಜಿಲ್ಲಾವಾರು ಪಟ್ಟಿಯಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದೆ. ಅವಿಭಜಿತ ದ.ಕ. ಜಿಲ್ಲೆಯ 45 (ದ.ಕ. – 24, ಉಡುಪಿ -21) ಸೇರಿದಂತೆ ರಾಜ್ಯದಲ್ಲಿ 560 ಪಿಎಂಜೆ ಕೇಂದ್ರಗಳಿವೆ. ಉಡುಪಿಯ ಕೇಂದ್ರಗಳಲ್ಲಿ ನಿತ್ಯ 1.50ರಿಂದ 2 ಲ.ರೂ. ಮತ್ತು ದ.ಕ.ದ ಕೇಂದ್ರಗಳಲ್ಲಿ 75 ಸಾವಿರ ರೂ. ಮೊತ್ತದ ಔಷಧಗಳು ಮಾರಾಟವಾಗುತ್ತಿವೆ. ಪ್ರತಿ ತಿಂಗಳು ಲಕ್ಷಕ್ಕೂ ಮಿಕ್ಕಿ ಜನರು ಪ್ರಯೋಜನ ಪಡೆಯುತ್ತಿದ್ದಾರೆ.

ಉಡುಪಿ: 4 ಕೋ.ರೂ. ಔಷಧ ಬೇಡಿಕೆ
ಜಿಲ್ಲೆಯಲ್ಲಿ ಪ್ರತಿ ತಿಂಗಳು ಸುಮಾರು 45 ಲ.ರೂ. (ಇದೇ ಬ್ರ್ಯಾಂಡ್‌ ಲೇಬಲ್‌ ಹೊಂದಿ ರುವ ಔಷಧಗಳಿಗೆ 4 ಕೋ.ರೂ) ಮೊತ್ತದ ಔಷಧ ಖರೀದಿಸಲಾಗುತ್ತಿದೆ. ವಾರ್ಷಿಕ 10 ಕೋ.ರೂ.ಗಳ ಔಷಧಕ್ಕೆ ಬೇಡಿಕೆಯಿದೆ. ಕುಂದಾಪುರದ ರೆಡ್‌ಕ್ರಾಸ್‌ ಮತ್ತು ಸದ್ಗುರು ಸೌಹಾರ್ದ ಸಹಕಾರಿ ಸಂಸ್ಥೆಗಳು ನಡೆಸುವ ಕೇಂದ್ರಗಳಲ್ಲಿ ಅತ್ಯಧಿಕ ಮಾರಾಟವಾಗುತ್ತದೆ.

ದ.ಕ.: 6 ಕೋ.ರೂ. ಔಷಧ ಬೇಡಿಕೆ
ದ.ಕ. ಜಿಲ್ಲೆಯ ಹೆಚ್ಚಿನ ಜನೌಷಧ ಕೇಂದ್ರಗಳಿರುವುದು ಗ್ರಾಮೀಣ ಭಾಗದಲ್ಲಿ. ಪ್ರತಿ ತಿಂಗಳು 30 ಲ.ರೂ.ಗಳ ಔಷಧ ಖರೀದಿಸಲಾಗುತ್ತಿದೆ. ವಾರ್ಷಿಕ 6 ಕೋ.ರೂ.ಗಳ ಔಷಧಕ್ಕೆ ಬೇಡಿಕೆಯಿದೆ. ನಗರ ಪ್ರದೇಶದ ಚಂದ್ರಮೋಹನ್‌ ಕೇಂದ್ರದಲ್ಲಿ ನಿತ್ಯ 50 ಸಾವಿರ ರೂ. ಮೊತ್ತದ ಔಷಧ ಮಾರಾಟವಾಗುತ್ತಿವೆ.

ಜಿಲ್ಲೆಯ 2 ಕೇಂದ್ರಕ್ಕೆ ನೋಟಿಸ್‌
ಜನೌಷಧವನ್ನು ಕಾಳಸಂತೆಯಲ್ಲಿ ಮಾರುವಂತಿಲ್ಲ. ಖರೀದಿ ಮತ್ತು ಮಾರಾಟ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಡೆಯುವುದರಿಂದ ದುರುಪಯೋಗ ಅಸಾಧ್ಯ. ಜೆನರಿಕ್‌ ಅಲ್ಲದ ಔಷಧಗಳನ್ನು ನಿಗದಿಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದ್ದಕ್ಕಾಗಿ ಕಾಪು ಮತ್ತು ಶಿರಿಬಾಗಿಲು ಪಿಎಂಜೆ ಕೇಂದ್ರಗಳಿಗೆ ಶೋಕಾಸ್‌ ನೋಟಿಸ್‌ ನೀಡಿ ಪರವಾನಿಗೆ ರದ್ದುಪಡಿಸಲಾಗಿದೆ.

ಔಷಧ ಸಂಗ್ರಹವಿದೆ
ದಿಲ್ಲಿ ಮತ್ತು ಚೆನ್ನೈಗಳಲ್ಲಿ ಏಕಕಾಲಕ್ಕೆ 5 ಸಾವಿರ‌ ಕೇಂದ್ರಗಳಿಗೆ ಔಷಧ ಪೂರೈಸುವ ಸಾಮರ್ಥ್ಯವುಳ್ಳ ಬೃಹತ್‌ ದಾಸ್ತಾನು ಘಟಕಗಳಿವೆ. ಉಡುಪಿಯ ಸದ್ಗುರು ಜನೌಷಧ ಕೇಂದ್ರಗಳು ನೇರವಾಗಿ ಸಂಗ್ರಹ ಘಟಕದಿಂದಲೇ ಖರೀದಿಸುತ್ತಿವೆ.
ರಾಜ್ಯದಲ್ಲಿ ಜನೌಷಧ ಪೂರೈಸಲು 2 ಸಂಸ್ಥೆಗಳಿಗೆ ಮಾತ್ರ ಬಿಪಿಪಿಐ ಪರವಾನಿಗೆ ನೀಡಿರುವುದರಿಂದ ಬೇಡಿಕೆಗೆ ತಕ್ಕಷ್ಟು ಪೂರೈಕೆ ಯಾಗುತ್ತಿಲ್ಲ. ದಿಲ್ಲಿ ಮತ್ತು ಚೆನ್ನೈ ಘಟಕಗಳಿಂದ ನೇರವಾಗಿ ತರಿಸಿಕೊಳ್ಳುವ ಕೇಂದ್ರಗಳಿಗೆ ಅಗತ್ಯವಿರುವಷ್ಟು ಪೂರೈಕೆಯಾಗುತ್ತಿದೆ.

ಕೇಂದ್ರದ ವಿಶೇಷತೆ ಏನು?
ಜನೌಷಧ ಕೇಂದ್ರಗಳಲ್ಲಿ ಸಿಗುವ ಔಷಧಗಳ ಮೇಲೆ ಬ್ರ್ಯಾಂಡೆಡ್‌ ಕಂಪೆನಿಗಳ ಲೇಬಲ್‌ ಇರುವುದಿಲ್ಲ. ಆದರೆ ಅತ್ಯುತ್ತಮ ಗುಣಮಟ್ಟ ಹೊಂದಿವೆ. ಮಾರುಕಟ್ಟೆಯಲ್ಲಿ 100 ರೂ.ಗೆ ಸಿಗುವ ಔಷಧ ಈ ಕೇಂದ್ರಗಳಲ್ಲಿ ಕೇವಲ 10 ರೂ.ಗೆ ಸಿಗುತ್ತದೆ. ಪಿಎಂಜೆಯಲ್ಲಿ 800 ಬಗೆಯ ಔಷಧಗಳನ್ನು ಮಾರಾಟ ಮಾಡಲಾಗುತ್ತದೆ.

ಪ್ರತಿಷ್ಠಿತ ಕಂಪೆನಿಗಳಿಂದ ಖರೀದಿ
ಬಿಪಿಪಿಐ ಸಂಸ್ಥೆಯು ದೇಶದ ಪ್ರತಿಷ್ಠಿತ 100 ಔಷಧ ತಯಾರಕ ಸಂಸ್ಥೆಗಳಿಂದ ಗುಣಮಟ್ಟ ಪರೀಕ್ಷಿಸಿಯೇ ಖರೀದಿ ಮಾಡುತ್ತದೆ. ದಾಸ್ತಾನನ್ನು ಪ್ರತಿ 10 ದಿನಗಳಿಗೊಮ್ಮೆ ಡ್ರಗ್‌ ಕಂಟ್ರೋಲರ್‌ ವಿಭಾಗ ಪರೀಕ್ಷೆಗೊಳಪಡಿಸುತ್ತದೆ. ಜನೌಷಧ ಕೇಂದ್ರಗಳಿಗೆ ಔಷಧ ಪೂರೈಕೆಯಲ್ಲಿ ಕೆಲವು ಸಮಸ್ಯೆಗಳಿವೆ, ಆದರೆ ಗುಣಮಟ್ಟದಲ್ಲಿಲ್ಲ.

ಸಿರಿವಂತರೇ ಹೆಚ್ಚು !
ಬಡವರ ಅನುಕೂಲಕ್ಕಾಗಿ ಸ್ಥಾಪಿಸಿದ ಪಿಎಂಜೆ ಕೇಂದ್ರಗಳ ಲಾಭವನ್ನು ಶ್ರೀಮಂತರು ಪಡೆದುಕೊಳ್ಳುತ್ತಿದ್ದಾರೆ. ಬಡವರಿಗೆ ಇರುವ ಮಾಹಿತಿ ಕೊರತೆಯೇ ಇದಕ್ಕೆ ಕಾರಣ. ಗುಣಮಟ್ಟದ ಅರಿವಿರುವ ಶ್ರೀಮಂತರು ಜನೌಷಧ ಮಳಿಗೆಯಲ್ಲಿ ಖರೀದಿಸುತ್ತಿದ್ದಾರೆ.

ಮೂರು ಅಂಶಗಳಿರುವ ಒಂದು ಔಷಧದ ಬಳಕೆಗೆ ಸುಪ್ರೀಂ ಕೋರ್ಟ್‌ ನಿಷೇಧ ಹೇರಿದೆ. ಇದರಿಂದಾಗಿ ಪಿಎಂಜೆ ಗಳಲ್ಲಿ ಎರಡು ಅಂಶ ಸಂಯೋಜನೆಯಿರುವ ಔಷಧಗಳು ಮಾತ್ರ ಲಭ್ಯವಿವೆ. ಔಷಧ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಪಿಎಂಜೆ ಕೇಂದ್ರಗಳು ವಿತರಕರು ಮತ್ತು ಗ್ರಾಹಕರ ವಿಶ್ವಾಸ ಗಳಿಸಿವೆ.
ಡಾ| ಅನಿಲಾ, ಜನೌಷಧ ನೋಡಲ್‌ ಅಧಿಕಾರಿ

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.