ಆಸ್ಪತ್ರೆಯಲ್ಲಿ ತನ್ನಿಂತಾನೇ ಮೆಟ್ಟಿಲೇರಿ ಹೊರಟ ವ್ಹೀಲ್ ಚಯರ್
Team Udayavani, Sep 27, 2019, 9:35 PM IST
ಹೊಸದಿಲ್ಲಿ: ಆಸ್ಪತ್ರೆಗಳಲ್ಲಿ ನಿಲ್ಲುವುದೇ ಒಂದು ಅತೀ ಬೇಸರದ ಮತ್ತು ಭಯದ ಸಂದರ್ಭವಾಗಿದೆ. ಅದರಲ್ಲೂ ಕೆಲವು ಆಸ್ಪತ್ರೆಗಳ ಕುರಿತು ಜನರು ಹೇಳುವ ವಾಸ್ತವವೋ/ಕಟ್ಟು ಕಥೆಯೋ ಏನೋ ಎಂಬಂತಿರುವ ಕೆಲವು ದೆವ್ವದ ಕಥೆಗಳು ಮತ್ತಷ್ಟು ಭೀತಿಯನ್ನು ಸೃಷ್ಟಿಸುತ್ತದೆ. ಕೆಲವರಿಗೆ ಅದು ಅನುಭವಕ್ಕೆ ಬಂದಿದೆ ಎಂದರೆ, ಹಲವರು ನನಗೆ ಗೊತ್ತಿಲ್ಲಪ್ಪ ಎನ್ನುತ್ತಾರೆ.
ಇದೀಗ ಚಂಡೀಗಢದ ಆಸ್ಪತ್ರೆಯೊಂದರ ವೀಡಿಯೋ ವೈರಲ್ ಆಗಿದ್ದು ಜನರು ಮಾತ್ರ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಮಾತ್ರವಲ್ಲದೇ ಅಲ್ಲಿಗೆ ತೆರಳಲು ಭಯ ಪಡುತ್ತಿದ್ದಾರಂತೆ. ಆಸ್ಪತ್ರೆಯಲ್ಲಿ ಮೃತಪಟ್ಟ ದೇಹದ ಆತ್ಮಗಳು ಮತ್ತೆ ಆಸ್ಪತ್ರೆಯಲ್ಲಿ ಉಪಟಳವನ್ನು ನೀಡುತ್ತವೆ ಎಂಬ ವಾದಕ್ಕೆ ಮರುಜೀವ ಬಂದಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇಷ್ಟಕ್ಕು ಏನು ನಡೆಯಿತು?
ಆಸ್ಪತ್ರೆಯಲ್ಲಿ ರೋಗಿಗಳನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸಲು ಬಳಸುವ ವ್ಹೀಲ್ ಚಯರ್ ಗಳು ಇರುತ್ತವೆ. ಇಳಿಜಾರು ಪ್ರದೇಶವಾಗಿದ್ದರೆ ಮೆಲ್ಲ ದೂಡಿ ಬಿಟ್ಟರೆ ವ್ಹೀಲ್ ಚಯರ್ ಗಳು ಅದರಷ್ಟಕ್ಕೆ ಒಂದಷ್ಟು ದೂರ ಚಲಿಸುತ್ತದೆ. ಇದು ಹಾಗಲ್ಲ. ಚಂಡೀಗಢದ ಪೋಸ್ಟ್ ಗ್ರ್ಯಾಜುವೇಟ್ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ನಡೆಸಿದ ಅಧ್ಯಯನ ಕೇಂದ್ರದಲ್ಲಿ ರಾತ್ರಿ ಹೊತ್ತು ಮೆಟ್ಟಿಲ ಬಳಿಕ ಕೆಳಗೆ ಇಟ್ಟಿದ್ದ ವ್ಹೀಲ್ ಚಯರ್ ತನ್ನಷ್ಟಕ್ಕೆ ಇಡೀ ಆಸ್ಪತ್ರೆಯಲ್ಲಿ ಓಡಾಡಲು ಶುರುಮಾಡಿದೆ. ಇದುನ ಸಿಸಿ ಟಿವಿ ಕೆಮರಾದಲ್ಲಿ ರೆಕಾಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಒಂದೇ ವೇಗದಲ್ಲಿ ಚಲಿಸಿದ್ದು, ಮಾತ್ರವಲ್ಲದೇ ಮೆಟ್ಟಿಲುಗಳನ್ನು ಏರಿ ಕ್ರಮಿಸಿದ್ದು, ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಈ ವ್ಹೀಲ್ ಚಯರ್ ತನ್ನಷ್ಟಕ್ಕೆ ಹೋಗುತ್ತಿರುವುದನ್ನು ಆಸ್ಪತ್ರೆಯ ಕೆಲವು ಸಿಬಂದಿಗಳು ನೋಡಿದ್ದು, ಆ ದೃಶ್ಯವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
View this post on InstagramA security guard stepped outside for water when he saw this. ?Tap our bio link for the full story.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.