15 ದಿನಗಳಲ್ಲಿ ಘನ ತ್ಯಾಜ್ಯ ಸಂಸ್ಕರಣೆ ಘಟಕ ಅಳವಡಿಕೆ ಕಡ್ಡಾಯ: ಅಜಿತ್ ಕುಮಾರ್ ಹೆಗ್ಡೆ
Team Udayavani, Sep 28, 2019, 5:00 AM IST
ಮಹಾನಗರ: ನಗರದ ಅಪಾರ್ಟ್‌ಮೆಂಟ್, ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಯಾಟರಿಂಗ್ ಸಂಸ್ಥೆಗಳು ಸಹಿತ ಹೆಚ್ಚು ಘನ ತ್ಯಾಜ್ಯ ಉತ್ಪಾದಿಸುವ ಸ್ಥಳಗಳಲ್ಲಿ ಮುಂದಿನ 15 ದಿನಗಳಲ್ಲಿ ಘನ ತ್ಯಾಜ್ಯ ಸಂಸ್ಕರಣೆ ಘಟಕ ಅನುಷ್ಠಾನಕ್ಕೆ ತರಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಸೂಚನೆ ನೀಡಿದ್ದಾರೆ.
ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಶುಕ್ರವಾರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡಿದರು. ಹೆಚ್ಚು ಘನತ್ಯಾಜ್ಯ ಉತ್ಪಾದಿಸುವ ಸ್ಥಳ ಗಳಲ್ಲಿ ಘನ ತ್ಯಾಜ್ಯ ಸಂಸ್ಕರಣೆ ಘಟಕಗಳ ಅಳವಡಿಕೆ ಬಗ್ಗೆ ಈ ಹಿಂದೆ ತಿಳಿಸಿದ್ದರೂ ಬಹುತೇಕ ಮಂದಿ ಗಂಭೀರವಾಗಿ ಪರಿಗಣಿ ಸಿಲ್ಲ. ಇದರ ಪರಿಣಾಮವೇ ಪಚ್ಚ ನಾಡಿ ದುರಂತ. ನಮ್ಮೆಲ್ಲರ ಬೇಜವಾಬ್ದಾರಿಯಿಂದಾಗಿ ಅನೇಕ ಮಂದಿ ತಮ್ಮ ಮನೆಮಠ ಕಳೆದುಕೊಳ್ಳುವಂತಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ನಿಯಮ ಪಾಲಿಸಬೇಕಾಗಿದೆ ಎಂದರು.
ಘನ ತ್ಯಾಜ್ಯ ವಿಲೇವಾರಿ ಕಾಯ್ದೆ ಪ್ರಕಾರ ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದವರಿಗೆ, ರಸ್ತೆಬದಿಗಳಲ್ಲಿ ತ್ಯಾಜ್ಯ ಎಸೆಯುವವರಿಗೆ ದೊಡ್ಡ ಮೊತ್ತದ ದಂಡ ವಿಧಿಸಲು ಅವಕಾಶವಿದೆ ಎಂದರು.
ಹೊಟೇಲ್ ಮಾಲಕರ ಸಂಘ, ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲಕರ ಸಂಘ, ಕಲ್ಯಾಣ ಮಂಟಪಗಳ ಮಾಲಕರ ಸಂಘ, ಕ್ಯಾಟರಿಂಗ್ ಸಂಸ್ಥೆಗಳ ಮಾಲಕರ ಸಂಘ, ವ್ಯಾಪಾರಿಗಳ ಸಂಘ, ಕೋಳಿ ಮಾರಾಟಗಾರರ ಸಂಘ, ಅಪಾರ್ಟ್‌ಮೆಂಟ್ ಅಸೋಸಿಯೇಶನ್, ಸಣ್ಣ ಕೈಗಾರಿಕೆಗಳ ಸಂಘ, ಬಿಲ್ಡರ್‌ಗಳ ಸಂಘ, ಸಿವಿಲ್ ಎಂಜಿನಿಯರ್‌ಗಳ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.
ಪಾಲಿಕೆ ಉಪಾಯುಕ್ತೆ (ಕಂದಾಯ) ಗಾಯತ್ರಿ ನಾಯಕ್, ಮಾಲಿನ್ಯ ನಿಯಂತ್ರಣ ಮಂಡಳಿ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್, ಪರಿಸರ ಎಂಜಿನಿಯರ್‌ಗಳಾದ ಮಧು ಮನೋಹರ್, ಶಬರೀನಾಥ್ ರೈ ಮೊದಲಾದವರು ಉಪಸ್ಥಿತರಿದ್ದರು.
ತ್ಯಾಜ್ಯ ಸಂಸ್ಕರಣೆ ಪ್ರಾತ್ಯಕ್ಷಿಕೆ
ಚೆನ್ನೈ, ಬೆಂಗಳೂರು, ಮಂಗಳೂರಿನ ಘನ ತ್ಯಾಜ್ಯ ಸಂಸ್ಕರಣೆ ಮಾಡುವ ಸಾಧನಗಳನ್ನು ತಯಾರಿಸುವ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಯಾವ ರೀತಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಬಹುದು ಎಂದು ಪ್ರಾತ್ಯಕ್ಷಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.