ಮಾಯಾ ಮಂತ್ರದ ಪೊಟ್ಟಣ


Team Udayavani, Sep 28, 2019, 5:00 AM IST

w-19

ಬಾದ್‌ಷಾ ಅಕ್ಬರನ ಆಸ್ಥಾನದಲ್ಲಿ ಒಡ್ಡೋಲಗ ನಡೆದಿತ್ತು. ತುಂಬಿದ ಸಭೆಯಲ್ಲಿ ಒಬ್ಬ ಬ್ರಾಹ್ಮಣ ಬಂದು “ಪ್ರಭೂ, ನಾನು ಬಂಗಾಲ ದೇಶದಿಂದ ಬಂದಿದ್ದೇನೆ. ತಮ್ಮ ರಾಜ್ಯ ಹಾಗೂ ಪ್ರಜೆಗಳ ಶ್ರೇಯೋಭಿವೃದ್ಧಿಗಾಗಿ ಪೂಜೆ ಮಾಡಿಸಿಕೊಂಡು ಪ್ರಸಾದ ತಂದಿದ್ದೇನೆ ಸ್ವೀಕರಿಸಿ’ ಎಂದು ಅಕ್ಷತೆ ಹಾಗೂ ಭಸ್ಮಗಳ ಪೊಟ್ಟಣ ನೀಡಿದ.

ಅಕºರ್‌ ತತ್‌ಕ್ಷಣ ಬೀರಬಲ್‌ನ ಪೀಠದೆಡೆಗೆ ನೋಡಿದ. ಅನಾರೋಗ್ಯದ ದೆಸೆಯಿಂದ ಬೀರಬಲ್‌ ಇನ್ನೂ ಆಗಮಿಸಿರಲಿಲ್ಲ. ಮಹಾರಾಜನಿಗೆ ಆ ಬ್ರಾಹ್ಮಣನ ಮಾತಿನಲ್ಲಿ ನಂಬಿಕೆ ಬರಲಿಲ್ಲ. ನಮ್ಮ ರಾಜ್ಯ ಸುಟ್ಟು ನಾಶವಾಗಲೆಂದೇ ಮಾಟ ಮಾಡಿ ಭಸ್ಮ ತಂದಂತಿದೆ ಎಂದು ತಿಳಿದು ಪೊಟ್ಟಣಗಳನ್ನು ದೂರ ಎಸೆದು ಭಟರ ಕೈಲಿ ಅವನನ್ನು ಹೊರತಳ್ಳಿಸಿದ.

ಅನಂತರ ಒಬ್ಬ ಫ‌ಕೀರ ಬಂದು “ಹುಜೂರ್‌, ಇದು “ಸಬ್‌ -ಜಾ-ಕಸ್ತೂರಿ’ ಎಂಬ ಅಪರೂಪದ ವನಸ್ಪತಿ. ಕಾಬೂಲಿನಿಂದ ಕಷ್ಟಪಟ್ಟು ಹುಡುಕಿ ತಂದಿದ್ದೇನೆ. ತಮ್ಮ ಆರೋಗ್ಯ ಇದರಿಂದ ದುಪ್ಪಟ್ಟು ವೃದ್ಧಿಯಾಗುತ್ತದೆ’ ಎಂದು ದಕ್ಷಿಣೆಯ ಆಸೆಗಾಗಿ ನಿಂತ. ಅಕºರನಿಗೆ ಮಹದಾನಂದವಾಯಿತು. ಪೊಟ್ಟಣವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಫ‌ಕೀರನಿಗೆ 50 ಬಂಗಾರದ ನಾಣ್ಯಗಳನ್ನು ಕೊಟ್ಟು ಕಳುಹಿಸಿದ. ಇದೇ ವೇಳೆಗೆ ಆಸ್ಥಾನಕ್ಕೆ ಆಗಮಿಸುತ್ತಿದ್ದ ಬೀರಬಲನಿಗೆ ಅರಮನೆಯ ಹೊರಗೆ ಭಟರಿಂದ ಹೊರತಳ್ಳಲ್ಪಟ್ಟಿದ್ದ ವಿದ್ವಾಂಸ ಸಿಕ್ಕ. ಬೀರಬಲ್‌ ಅವನ ಕುಶಲೋಪರಿ ವಿಚಾರಿಸಿ ನಡೆದಿದ್ದೆಲ್ಲವನ್ನೂ ತಿಳಿದುಕೊಂಡ. ಅವನನ್ನು ಅಕºರ್‌ ಎದುರು ಕರೆತಂದು ನಿಲ್ಲಿಸಿದ.

ಅವನನ್ನು ಯಾಕೆ ಕರೆ ತಂದಿರಿ ಎಂದು ಅಕºರ್‌ ಕೇಳಿದಾಗ ಬೀರಬಲ್‌ ಹೇಳಿದ: “ನಾಡಿನ ಕ್ಷೇಮಕ್ಕಾಗಿ ಈ ವ್ಯಕ್ತಿ ಪೂಜೆ ಮಾಡಿಸಿ ಪ್ರಸಾದ ತಂದಿದ್ದನ್ನು ಎಸೆದಿರಿ. ಅದೇ ಸಬ್‌ ಜಾ ಕಸ್ತೂರಿ ತಂದ ಫ‌ಕೀರನಿಗೆ ಬಂಗಾರ ನಾಣ್ಯ ನೀಡಿ ಸಮ್ಮಾನಿಸಿದಿರಿ. ನಿಮಗೇ ಅರ್ಥವಾಗುವಂತೆ ಸಬ್‌ಜಾ ಎಂದರೆ ಹಿಂದಿಯಲ್ಲಿ “ಎಲ್ಲವೂ ಹೋಗಲಿ’ ಎಂದರ್ಥ. ನಿಜಕ್ಕೂ ನೀವು ಮೋಸ ಹೋದಿರಿ!’

ಬಾದಷಹನಿಗೆ ಮೈ ಅದುರಿದಂತಾಯಿತು. ತಕ್ಷಣ ಕಸ್ತೂರಿ ಪೊಟ್ಟಣವನ್ನು ಕೆಳಗೆಸೆದ. ದೂರ ಎಸೆದಿದ್ದ ಅಕ್ಷತೆ, ಭಸ್ಮ, ಪ್ರಸಾದದ ಪೊಟ್ಟಣವನ್ನು ಎತ್ತಿಕೊಂಡು ಕಣ್ಣಿಗೊತ್ತಿಕೊಂಡ. ಅದನ್ನು ತಂದ ವಿದ್ವಾಂಸನಿಗೆ 100 ಬಂಗಾರದ ನಾಣ್ಯಗಳನ್ನು ಕೊಟ್ಟು ಕ್ಷಮೆಯಾಚಿಸಿ, ಶಾಲು ಹೊದೆಸಿ ಸಮ್ಮಾನಿಸಿದ.

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.