ವೃದ್ಧೆಯ ಕೊಂದಿದ್ದ 9 ಆರೋಪಿಗಳ ಸೆರೆ


Team Udayavani, Sep 28, 2019, 3:05 AM IST

vrudde

ಬೆಂಗಳೂರು: ಇತ್ತೀಚೆಗಷ್ಟೇ ಸುಂಕದಕಟ್ಟೆಯ ಮುತ್ತರಾಯಸ್ವಾಮಿ ಲೇಔಟ್‌ನಲ್ಲಿ ಒಂಟಿಯಾಗಿ ವಾಸವಿದ್ದ ವೃದ್ಧೆಯೊಬ್ಬರನ್ನು ಬರ್ಬರವಾಗಿ ಕೊಂದು ಚಿನ್ನಾಭರಣ ದೋಚಿದ್ದ ಒಂಬತ್ತು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಅಗ್ರಹಾರ ಚಿಕ್ಕಪೇಟೆ ನಿವಾಸಿ ಮಹಂತಸ್ವಾಮಿ (23), ಆತನ ಸ್ನೇಹಿತರಾದ ದೀಪಕ್‌ (26), ಚಿತ್ರಲಿಂಗಯ್ಯ (20), ಜ್ಞಾನಭಾರತಿ ನಿವಾಸಿ ಶರತ್‌ (20), ಕುಮಾರ್‌ (21), ಕಾರ್ತಿಕ್‌ (19), ಲೋಕೇಶ್‌ (21), ಗಂಗಾಧರ (23), ಗಣೇಶ್‌ ಹೀರೆಮಠ(24) ಬಂಧಿತರು.

ಆರೋಪಿಗಳಿಂದ ಚಿನ್ನದ ಎರಡು ಬಳೆ, ಎರಡು ಉಂಗುರ, ಒಂದು ಕಿವಿಯೊಲೆ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಸೆ.18ರಂದು ಸುಂಕದಕಟ್ಟೆಯ ಮುತ್ತರಾಯಸ್ವಾಮಿ ಲೇಔಟ್‌ ನಿವಾಸಿ ಪಾರ್ವತಮ್ಮ ಅವರನ್ನು ಕೈ, ಕಾಲುಗಳನ್ನು ಕಟ್ಟಿ ಕುತ್ತಿಗೆ ಬಿಗಿದುಕೊಲೆ ಗೈದಿದ್ದರು ಎಂದು ಪೊಲೀಸರು ಹೇಳಿದರು. ಪ್ರಕರಣ ಪ್ರಮುಖ ಆರೋಪಿ ಮಹಂತಸ್ವಾಮಿ, ಮೃತ ಪಾರ್ವತಮ್ಮ ಸವರ ಸೊಸೆ (ಪುತ್ರನ ಪತ್ನಿ) ಸುಮಾ ಅವರ ಸಹೋದರನಾಗಿದ್ದು, ದಾಬಸಪೇಟೆಯಲ್ಲಿ ವಾಸವಾಗಿದ್ದ.

ಆರಂಭದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಆತ, ಇತ್ತೀಚೆಗೆ ಯಾವುದೇ ಕೆಲಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಹಣ ಮಾಡಿ ಮೋಜಿನ ಜೀವನ ನಡೆಸುವ ಉದ್ದೇಶ ಹೊಂದಿದ್ದ ಆರೋಪಿ, ಪಾರ್ವತಮ್ಮ ಒಂಟಿಯಾಗಿ ವಾಸಿಸುವ ಬಗೆ ತಿಳಿದುಕೊಂಡಿದ್ದ. ಅಲ್ಲದೆ, ನಿವೃತ್ತ ಹೊಂದಿದ ಬಳಿಕ ಪಾರ್ವತಮ್ಮ ಬಳಿ ನಗದು, ಚಿನ್ನಾಭರಣ ಇರಬಹುದು ಎಂದು ದರೋಡೆಗೆ ಸಂಚು ರೂಪಿಸಿದ್ದ.

ಅದಕ್ಕಾಗಿ ತುಮಕೂರಿನ ಸ್ನೇಹಿತರಾದ ದೀಪಕ್‌, ಚಿತ್ರಲಿಂಗಯ್ಯನನ್ನು ನಗರಕ್ಕೆ ಕರೆತಂದ ಆರೋಪಿ, ಚಿಕ್ಕಗೊಲ್ಲರಹಟ್ಟಿ ನಿವಾಸಿ ಗಂಗಾಧರ್‌ ಮೂಲಕ ಇತರೆ ಆರೋಪಿಗಳನ್ನು ಪರಿಚಯ ಮಾಡಿಕೊಂಡು ಕೃತ್ಯಕ್ಕೆ ಸಂಚು ರೂಪಿಸಿದ್ದ. ಬಳಿಕ ಸೆ.18ರಂದು ಗಂಗಾಧರ್‌, ಗಣೇಶ್‌ ಹೊರತುಪಡಿಸಿ ಇತರೆ ಆರೋಪಿಗಳು ಪಾರ್ವತಮ್ಮ ಅವರ ಮನೆಗೆ ನುಗ್ಗಿ, ಮಾರಕಾಸ್ತ್ರಗಳನ್ನು ತೋರಿಸಿ ಹಣ, ಚಿನ್ನಾಭರಣ ಕೊಡುವಂತೆ ಬೇಡಿಕೆ ಇಟ್ಟಿದ್ದರು.

ಅದಕ್ಕೆ ವಿರೋಧಿಸಿ ಪಾರ್ವತಮ್ಮ ಕೂಗಿಕೊಂಡಾಗ ಆರೋಪಿಗಳು ಅವರ ಕೈ, ಕಾಲುಗಳನ್ನು ಕಟ್ಟಿ ಕುತ್ತಿಗೆ ಬಿಗಿದು ಕೊಲೆಗೈದು, ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು. ಮನೆಯ ಹೊರಗಡೆ ಕಾರ್ತಿಕ್‌, ಕುಮಾರ್‌ ಕಾವಲು ಕಾಯುತ್ತಿದ್ದರು. ನಂತರ ಆರೋಪಿಗಳ ಪೈಕಿ ಕೆಲವರು ಉತ್ತರ ಕರ್ನಾಟಕದ ಕಡೆ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ಪುತ್ರನ ಹೊರಗೆ ಕರೆಸಿಕೊಂಡರು: ಕೃತ್ಯ ನಡೆದ ದಿನ ಮುಂಜಾನೆಯೇ ಆರೋಪಿ ಮಹಂತಸ್ವಾಮಿ ತನ್ನ ಭಾವ (ಪಾರ್ವತಮ್ಮ ಪುತ್ರ) ಮಂಜುನಾಥ್‌ಗೆ ಕರೆ ಮಾಡಿ ಎಲ್ಲಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡಿದ್ದ. ಕೆಲ ಹೊತ್ತಿನ ಬಳಿಕ ಸ್ನೇಹಿತ ಚಿತ್ರಲಿಂಗಯ್ಯ ಮೂಲಕ ಮಂಜುನಾಥ್‌ಗೆ ಕರೆ ಮಾಡಿಸಿ, ನಿಮಗೆ ಸೇರಿದ ನಿವೇಶನ ಮಾರಾಟ ಮಾಡುವ ಕುರಿತು ಮಾತನಾಡಬೇಕಿದೆ.

ಮನೆಯಿಂದ ಸ್ವಲ್ಪ ದೂರದಲ್ಲಿರುವ ಮುಖ್ಯರಸ್ತೆಗೆ ಬನ್ನಿ ಎಂದು ಹೇಳಿಸಿದ್ದ. ಅದರಂತೆ ಮಂಜುನಾಥ್‌ ಮುಖ್ಯ ರಸ್ತೆಗೆ ಬಂದಿದ್ದು, ಸುಮಾರು ಒಂದು ಗಂಟೆಗಳ ಕಾಲ ಬರುತ್ತಿರುವುದಾಗಿ ಹೇಳಿ ಕಾಯುವಂತೆ ಮಾಡಿದ ಆರೋಪಿಗಳು, ಅದೇ ವೇಳೆಯಲ್ಲಿ ಮನೆಗೆ ನುಗ್ಗಿ ಪಾರ್ವತಮ್ಮ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

1

Kundapura; ಜಪ್ತಿ: ಅಂಗಡಿಗೆ ಬೆಂಕಿ: ‘ದ್ವೇಷದ ಕಿಡಿ’ ಎಂಬ ಶಂಕೆ; ದೂರು

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.